ಕಾರವಾರ: ರಾಜ್ಯದಲ್ಲಿ ಅಡಕೆ (Arecanut ) ಬೆಳೆಗಾರರು ಸದ್ಯ ಆದಾಯದ ನಿರೀಕ್ಷೆಯಲ್ಲಿದ್ದಾರೆ. ತೋಟದಿಂದ ಅಡಕೆ ತಂದು ಅದನ್ನು ಸುಲಿದು, ನಂತರ ಬೇಯಿಸಿ, ಅದನ್ನು ಒಣಗಿಸುತ್ತಾರೆ. ಅಡಕೆ ಕೆಲಸ ಸಂಪೂರ್ಣವಾಗಿ ಮುಗಿಸಲು ರೈತರು ಪಡುವ ಕಷ್ಟ ಅಷ್ಟಿಷ್ಟಲ್ಲ. ಅಡಕೆಯಿಂದ ಬರುವ ಆದಾಯಕ್ಕೆ ರೈತರು ಇಡೀ ವರ್ಷ ಕಾದು ಕುಳಿತಿರುತ್ತಾರೆ. ಈ ವೇಳೆ ಬೆವರು ಸುರಿಸಿ ಬೆಳೆದ ಬೆಳೆ ಬೇರೆ ಅವರ ಪಾಲಾದರೆ ರೈತ ಆತಂಕಕ್ಕೆ ಒಳಗಾಗುತ್ತಾನೆ. ಇಂತಹದೊಂದು ಘಟನೆ ಸದ್ಯ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಹೊಸಕುಳಿ ಗ್ರಾಮದಲ್ಲಿ ನಡೆದಿದೆ.
ಮನೆ ಮುಂದೆ ಇಟ್ಟಿದ್ದ ಅಡಕೆ ಮೂಟೆಯನ್ನ ವ್ಯಕ್ತಿಯೊಬ್ಬ ಕದ್ದು ಪರಾರಿ ಆಗಿದ್ದ. ಅಡಕೆ ಮೂಟೆ ಕಳ್ಳತನದ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊನ್ನಾವರ ತಾಲೂಕು ಹೊಸಕುಳಿ ಗ್ರಾಮದಲ್ಲಿ ಸುರೇಶ್ ಶೆಟ್ಟಿ ಎಂಬ ರೈತನಿಗೆ ಸೇರಿದ ಅಡಕೆ ಮೂಟೆಯನ್ನು ಆರೋಪಿ ನಾರಾಯಣ ನಾಯ್ಕ್ ಕದ್ದು ಎಸ್ಕೇಪ್ ಆಗಿದ್ದ. ಆರೋಪಿ ರಾತ್ರಿ ಮನೆಯ ಹೊರಗೆ ಯಾರೂ ಇಲ್ಲದ್ದನ್ನ ಕಂಡು ಅಂಗಳ ಪ್ರವೇಶಿಸಿದ್ದ. ನಂತರ ಅಂಗಳದಲ್ಲಿದ್ದ ಅಡಕೆ ತುಂಬಿದ್ದ ಮೂಟೆ ಹೊತ್ತು ಹೋಗಿದ್ದ.
ಮನೆಯವರು ಗೇಟ್ ಬಳಿ ತೆರೆದಿದಾಗ ಅಡಕೆ ಮೂಟೆ ಕಾಣಲ್ಲ. ಈ ವೇಳೆ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ಮಾಡುತ್ತಾರೆ. ರಾತ್ರಿ 9 ಗಂಟೆ ವೇಳೆಗೆ ನಡೆದ ಕಳ್ಳತನ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೂಡಲೇ ಅಕ್ಕಪಕ್ಕದವರಿಗೆ ಮಾಹಿತಿ ನೀಡಿ ಹುಡುಕಾಡಿದಾಗ ಕಳ್ಳ ಪತ್ತೆಯಾಗಿದ್ದಾನೆ. ಅಡಕೆ ಮೂಟೆಯೊಂದಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿ ನಾರಾಯಣ ಮುಗ್ವಾ ಗ್ರಾಮದ ಬಂಕನಹಿತ್ತಲ್ ನಿವಾಸಿ. ಅಡಕೆ ಸಾಗಿಸಲು ಸಹಕರಿಸಿದ ಆಟೋ ಚಾಲಕ ಸೇರಿ ಆರೋಪಿಯನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ
Ravindra Jadeja: ಎರಡು ತಿಂಗಳ ಬಳಿಕ ಕಮ್ಬ್ಯಾಕ್ ಮಾಡಿ ವಿಕೆಟ್ ಸಿಕ್ಕ ಖುಷಿಯಲ್ಲಿ ಜಡೇಜಾ ಮಾಡಿದ್ದೇನು ನೋಡಿ