AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravindra Jadeja: ಎರಡು ತಿಂಗಳ ಬಳಿಕ ಕಮ್​ಬ್ಯಾಕ್ ಮಾಡಿ ವಿಕೆಟ್ ಸಿಕ್ಕ ಖುಷಿಯಲ್ಲಿ ಜಡೇಜಾ ಮಾಡಿದ್ದೇನು ನೋಡಿ

IND vs SL 1st T20: ಭಾರತ ನೀಡಿದ್ದ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಶ್ರೀಲಂಕಾ ಮೊದಲ ಟಿ20ಯಲ್ಲಿ ಸೋಲಿಗೆ ಶರಣಾಯಿತು. ಈ ಪಂದ್ಯದ ಮೂಲಕ ಆಲ್ರೌಂಡರ್ ರವೀಂದ್ರ ಜಡೇಜಾ ಸಾಕಷ್ಟು ಸಮಯದ ಬಳಿಕ ತಂಡಕ್ಕೆ ಕಮ್​ಬ್ಯಾಕ್ ಮಾಡಿದರು. ಈ ಸಂದರ್ಭ ವಿಕೆಟ್ ಕಿತ್ತಾಗ ಅವರು ಸಂಭ್ರಮಿಸಿದ್ದು ಹೇಗೆ ನೋಡಿ.

Ravindra Jadeja: ಎರಡು ತಿಂಗಳ ಬಳಿಕ ಕಮ್​ಬ್ಯಾಕ್ ಮಾಡಿ ವಿಕೆಟ್ ಸಿಕ್ಕ ಖುಷಿಯಲ್ಲಿ ಜಡೇಜಾ ಮಾಡಿದ್ದೇನು ನೋಡಿ
Ravindra Jadeja celebration
TV9 Web
| Edited By: |

Updated on: Feb 25, 2022 | 11:05 AM

Share

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ (India vs Sri Lanka) 62 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ (Ishan Kishan) ಅವರು ಆರಂಭದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದರೆ, ಅಂತಿಮ ಹಂತದಲ್ಲಿ ಶ್ರೇಯಸ್ ಅಯ್ಯರ್ ಮೈಚಳಿ ಬಿಟ್ಟು ಆಡಿ ತಂಡದ ಮೊತ್ತವನ್ನು 200ರ ಅಂಚಿಗೆ ತಂದಿಟ್ಟು ಎದುರಾಳಿಗೆ ದೊಡ್ಡ ಮೊತ್ತದ ಟಾರ್ಗೆಟ್ ನೀಡಿದರು. ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಶ್ರೀಲಂಕಾ ಭಾರತೀಯ ಬೌಲಿಂಗ್ ದಾಳಿಗೆ ತಬ್ಬಿಬ್ಬಾಯಿತು. ಈ ಪಂದ್ಯದ ಮೂಲಕ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಸಾಕಷ್ಟು ಸಮಯದ ಬಳಿಕ ತಂಡಕ್ಕೆ ಕಮ್​ಬ್ಯಾಕ್ ಮಾಡಿದರು. ಬ್ಯಾಟಿಂಗ್​ನಲ್ಲಿ 4 ಎಸೆತಗಳಲ್ಲಿ ಅಜೇಯ 3 ರನ್ ಗಳಿಸಿದರೆ, ಬೌಲಿಂಗ್​ನಲ್ಲಿ 4 ಓವರ್ ಮಾಡಿ 28 ರನ್ ನೀಡಿ 1 ಪ್ರಮುಖ ವಿಕೆಟ್ ಕಿತ್ತರು.

ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಚಂದಿಮಲ್ 10 ರನ್ ಗಳಿಸಿದ್ದಾಗ ಜಡೇಜಾ ಸ್ಪಿನ್ ಜಾದು ಅರಿಯದೆ ಇಶಾನ್ ಕಿಶನ್​ರಿಂದ ಸ್ಟಂಪ್​ಔಟ್​ಗೆ ಬಲಿಯಾದರು. ಹೀಗೆ ಜಡೇಜಾ ತಂಡಕ್ಕೆ ಸೇರಿದ ಮೊದಲ ಪಂದ್ಯದಲ್ಲಿ ವಿಕೆಟ್ ಕಿತ್ತರು. ವಿಕೆಟ್ ಪಡೆದಾಗ ಇವರು ವಿಶೇಷವಾಗಿ ಸಂಭ್ರಮಿಸಿದರು. ಪುಷ್ಪ ಚಿತ್ರದಲ್ಲಿ ತಗ್ಗೆದೆ ಲೇ ಡೈಲಾಗ್ ಹೊಡೆದಾಗ ಅಲ್ಲು ಅರ್ಜುನ್​ ಮಾಡುವ ಆ್ಯಕ್ಷನ್​ ರೀತಿಯಲ್ಲೇ ಜಡೇಜಾ ಕೂಡ ಸಂಭ್ರಮಿಸಿ ಮಿಂಚಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ: ದಿ ರೈಸ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಡೈಲಾಗ್, ಹಾಡುಗಳು ಸಾಕಷ್ಟು ಪಾಪ್ಯುಲರ್ ಆಗಿದೆ. ಇದು ಕ್ರಿಕೆಟ್ ಜಗತ್ತಿಗೂ ಕಾಲಿಟ್ಟು ಸದ್ದು ಮಾಡುತ್ತಿದೆ. ಈ ಹಿಂದೆ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಶ್ರೀವಲ್ಲಿ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ್ದರು. ಅಲ್ಲು ಅರ್ಜುನ್ ಈ ಹಾಡಿನಲ್ಲಿ ಮಾಡಿದ ಸ್ಟೆಪ್ ಅನ್ನು ಅವರು ಅನುಕರಿಸಿದ್ದರು. ಈ ಹಿಂದೆ ಬಾಂಗ್ಲಾ ಪ್ರೀಮಿಯರ್ ಲೀಗ್​ನಲ್ಲೂ ಪುಷ್ಪ ಟ್ರೆಂಡ್ ಆಗಿತ್ತು. ಜಡೇಜಾ ಅವರು ಅಲ್ಲು ಅರ್ಜುನ್ ರೀತಿಯೇ ಗಡ್ಡಧಾರಿಯಾಗಿ ಈ ಹಿಂದೆ ವಿಡಿಯೋ ಮಾಡಿ ಹವಾ ಸೃಷ್ಟಿಸಿದ್ದರು.

ಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಇಶಾನ್ ಕಿಶನ್ (89 ರನ್) ಹಾಗೂ ಶ್ರೇಯಸ್ ಅಯ್ಯರ್ (57*) ಅವರ ಸ್ಫೋಟಕ ಬ್ಯಾಟಿಂಗ್ ಫಲವಾಗಿ 2 ವಿಕೆಟ್‌ಗೆ 199 ರನ್ ಪೇರಿಸಿತು. ಪ್ರತಿಯಾಗಿ ಈ ಬೃಹತ್ ಮೊತ್ತವನ್ನು ಬೆನ್ನಟ್ಟುವ ಲಕ್ಷಣವನ್ನು ಯಾವುದೇ ಹಂತದಲ್ಲೂ ತೋರದ ಶ್ರೀಲಂಕಾ 6 ವಿಕೆಟ್‌ಗೆ 137 ಕಲೆಹಾಕಲಷ್ಟೇ ಶಕ್ತವಾಯಿತು. ಪರಿಣಾಮ ಟೀಮ್ ಇಂಡಿಯಾ  62 ರನ್‌ಗಳ ಗೆಲುವು ದಾಖಲಿಸಿತು. ಜೊತೆಗೆ ಭಾರತ ಟಿ20 ಕ್ರಿಕೆಟ್‌ನಲ್ಲಿ ಸತತ 10 ಪಂದ್ಯ ಗೆಲ್ಲುವ ಮೂಲಕ ಹೊಸ ದಾಖಲೆ ಕೂಡ ಬರೆಯಿತು.

Ishan Kishan: ಇಶಾನ್ ಕಿಶನ್ ಸ್ಫೋಟಕ ಕಮ್​​ಬ್ಯಾಕ್​ಗೆ ಕ್ರಿಕೆಟ್ ದಿಗ್ಗಜ ಧೋನಿ ದಾಖಲೆಯೇ ಉಡೀಸ್

Rohit Sharma: ಪಂದ್ಯ ಮುಗಿದ ಬಳಿಕ ಮಹತ್ವದ ಘೋಷಣೆ ಮಾಡಿದ ರೋಹಿತ್ ಶರ್ಮಾ: ಏನಂದ್ರು ಗೊತ್ತೇ?