Ishan Kishan: ಇಶಾನ್ ಕಿಶನ್ ಸ್ಫೋಟಕ ಕಮ್​​ಬ್ಯಾಕ್​ಗೆ ಕ್ರಿಕೆಟ್ ದಿಗ್ಗಜ ಧೋನಿ ದಾಖಲೆಯೇ ಉಡೀಸ್

IND vs SL 1st T20: ಇಶಾನ್ ಕಿಶನ್ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಯಲ್ಲಿ 56 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 89 ರನ್ ಚಚ್ಚಿದರು. ಈ ಮೂಲಕ ಹೊಸ ದಾಖಲೆ ಕೂಡ ಬರೆದರು. ಅದುಕೂಡ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಮತ್ತು ರಿಷಭ್ ಪಂತ್ ದಾಖಲೆಯನ್ನು ಉಡೀಸ್ ಮಾಡಿ ಎಂಬುದು ವಿಶೇಷ.

Ishan Kishan: ಇಶಾನ್ ಕಿಶನ್ ಸ್ಫೋಟಕ ಕಮ್​​ಬ್ಯಾಕ್​ಗೆ ಕ್ರಿಕೆಟ್ ದಿಗ್ಗಜ ಧೋನಿ ದಾಖಲೆಯೇ ಉಡೀಸ್
Ishan Kishan record IND vs SL 1st T20
Follow us
TV9 Web
| Updated By: Vinay Bhat

Updated on: Feb 25, 2022 | 9:49 AM

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಅವಕಾಶ ನೀಡಿದಷ್ಟು ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡದ ಇಶಾನ್ ಕಿಶನ್ (Ishan Kishan) ಶ್ರೀಲಂಕಾ ಟಿ20 ಸರಣಿಯಿಂದ ಹೊರಬೀಳುವ ಭೀತಿಯಲ್ಲಿದ್ದರು. ಆದರೆ, ರಿಷಭ್ ಪಂತ್ (Rishabh Pant) ಬಯೋ ಬಬಲ್ ತೊರೆದು ಈ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡ ಕಾರಣ ಕಿಶನ್​ಗೆ ತಂಡದಲ್ಲಿ ಸ್ಥಾನ ಖಚಿತವಾಯಿತು. ಮ್ಯಾನೇಜ್ಮೆಂಟ್ ಕೂಡ ಇವರ ಮೇಲೆ ನಂಬಿಕೆಯಿಟ್ಟು ಲಂಕಾ ವಿರುದ್ಧದ ಮೊದಲ ಟಿ20ಯಲ್ಲಿ ಅವಕಾಶ ನೀಡಿತು. ಅದರಂತೆ ನಾಯಕ ರೋಹಿತ್ ಶರ್ಮಾ (Rohit Sharma) ಅವರ ನೆಚ್ಚಿನ ಆಟಗಾರ ಈ ಬಾರಿ ನಿರೀಕ್ಷೆ ಹುಸಿಗೊಳಿಸಲಿಲ್ಲ. ತಮ್ಮದೇ ನ್ಯಾಚುರಲ್ ಶೈಲಿಯ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 200ರ ಅಂಚಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು. 30 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿ ಫಿಫ್ಟಿ ಬಳಿಕವೂ ಬಿರುಸಿನ ಆಟವನ್ನು ಮುಂದುವರಿಸಿ 56 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 89 ರನ್ ಚಚ್ಚಿದರು.

ಇದರ ಜೊತೆಗೆ ಇಶಾನ್ ಕಿಶನ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಕೂಡ ಬರೆದರು. ತನ್ನ ದ್ವಿತೀಯ ಅರ್ಧಶತಕದಲ್ಲೇ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಮತ್ತು ರಿಷಭ್ ಪಂತ್ ದಾಖಲೆಯನ್ನು ಉಡೀಸ್ ಮಾಡಿದರು. ಹೌದು, ಕೇವಲ 56 ಎಸೆತಗಳಲ್ಲಿ 89 ರನ್ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಭಾರತ ಪರ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನ ಪಂದ್ಯವೊಂದರಲ್ಲಿ ಗರಿಷ್ಠ ರನ್ ಸಿಡಿಸಿದ ವಿಕೆಟ್ ಕೀಪರ್ ಎಂಬ ಸಾಧನೆ ಮಾಡಿದ್ದಾರೆ.

ಇದಕ್ಕೂ ಮುನ್ನ ವಿಕೆಟ್ ಕೀಪರ್ ಆಗಿ ಭಾರತ ಪರ ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ರನ್ ಕಲೆಹಾಕಿದ ಆಟಗಾರ ರಿಷಭ್ ಪಂತ್ ಆಗಿದ್ದರು. ಇವರು 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 65 ರನ್ ಸಿಡಿಸಿದ್ದರು. ನಂತರದ ಸ್ಥಾನದಲ್ಲಿ ಕೆಎಲ್ ರಾಹುಲ್ (57*) ಮತ್ತು ಎಂಎಸ್ ಧೋನಿ (56) ಇದ್ದರು. ರಾಹುಲ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ಹಿಂದೆ ಶತಕ ಸಿಡಿಸಿದ್ದರಾದರೂ ಆಗ ವಿಕೆಟ್ ಕೀಪರ್ ಸ್ಥಾನ ಹೊಂದಿರಲಿಲ್ಲ. ಸದ್ಯ ಕಿಶನ್ ಈ ಎಲ್ಲ ದಾಖಲೆ ಪುಡಿ ಮಾಡಿ ನೂತನ ಸಾಧನೆ ಮಾಡಿದ್ದಾರೆ.

ರೋಹಿತ್ ದಾಖಲೆ:

ಚುಟುಕು ಕ್ರಿಕೆಟ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೆ ಏರುವ ಮೂಲಕ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್‌ನ ಓಪನರ್ ಮಾರ್ಟಿನ್ ಗಪ್ಟಿಲ್‌ ದಾಖಲೆಯನ್ನ ಪುಡಿ ಮಾಡಿದ್ದಾರೆ. 123 ಟಿ20 ಪಂದ್ಯವನ್ನಾಡಿರುವ ರೋಹಿತ್ 3300 ರನ್ ಕಲೆಹಾಕಿದ್ದಾರೆ. ವಿರಾಟ್ ಕೊಹ್ಲಿ 3,296 ರನ್ ಹಾಗೂ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್‌ 3299 ರನ್ ಗಳಿಸಿದ್ದಾರೆ.

ಕಿಶನ್-ರೋಹಿತ್ ಜೊತೆಯಾಟ:

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್-ಕಿಶನ್ ಜೊತೆಯಾಟ ತಂಡದಿಂದ ಭಾರತ ದೊಡ್ಡ ಮೊತ್ತ ಕಲೆಹಾಕಲು ನೆರವಾಯಿತು. ಇವರಿಬ್ಬರು ತಂಡಕ್ಕೆ ಬಿರುಸಿನ ಆರಂಭವೊದಗಿಸಿದರು. ಆರಂಭದಿಂದಲೇ ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿಯು 11.5 ಓವರ್‌ಗಳಲ್ಲೇ 111 ರನ್‌ಗಳ ಜೊತೆಯಾಟ ಕಟ್ಟಿ ಭದ್ರ ಅಡಿಪಾಯ ಹಾಕಿಕೊಟ್ಟರು. 32 ಎಸೆತಗಳನ್ನು ಎದುರಿಸಿದ ರೋಹಿತ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 44 ರನ್ ಗಳಿಸಿದರು. ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ಕಿಶನ್ ಲಯ ಕಂಡುಕೊಂಡ 89 ರನ್ ಚಚ್ಚಿದರು.

Rohit Sharma: ಪಂದ್ಯ ಮುಗಿದ ಬಳಿಕ ಮಹತ್ವದ ಘೋಷಣೆ ಮಾಡಿದ ರೋಹಿತ್ ಶರ್ಮಾ: ಏನಂದ್ರು ಗೊತ್ತೇ?

IND vs SL 1st T20: ಮುಂದುವರಿದ ಭಾರತದ ಗೆಲುವಿನ ಸಂಭ್ರಮ: ಮೊದಲ ಟಿ20ಯಲ್ಲೇ ಶ್ರೀಲಂಕಾಕ್ಕೆ ನಡುಕ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ