ಶಿರೂರು ಗುಡ್ಡ ಕುಸಿತ; ತಿಂಗಳು ಕಳೆದರೂ ಸಂತ್ರಸ್ಥರಿಗೆ ಸಿಕ್ಕಿಲ್ಲ ಇನ್ನೂ ಪರಿಹಾರ

ಅಂಕೋಲಾದ ಶಿರೂರಿನಲ್ಲಿ ಭೂಕುಸಿತವಾಗಿ ಒಂದು ತಿಂಗಳು ಕಳೆದಿದೆ. ಸಂತ್ರಸ್ಥರಿಗೆ ಸರ್ಕಾರ ನೀಡಿದ ಆಶ್ವಾಸನೆ ಹುಸಿಯಾಗಿದ್ದು, ಸಂತ್ರಸ್ತ ಕುಟುಂಬಗಳು ಸಂಕಷ್ಟದಲ್ಲೇ ದಿನ ನೂಕುತ್ತಿವೆ. ಅಷ್ಟಕ್ಕೂ ಸರ್ಕಾರ ನೀಡಿದ ಆಶ್ವಾಸನೆ ಏನು? ಸಂತ್ರಸ್ತರಿಗೆ ಸಿಕ್ಕಿದ್ದೇನು ? ಈ ಕುರಿತು ಒಂದು ವರದಿ ಇಲ್ಲಿದೆ.

ಶಿರೂರು ಗುಡ್ಡ ಕುಸಿತ; ತಿಂಗಳು ಕಳೆದರೂ ಸಂತ್ರಸ್ಥರಿಗೆ ಸಿಕ್ಕಿಲ್ಲ ಇನ್ನೂ ಪರಿಹಾರ
ಶಿರೂರು ಗುಡ್ಡ ಕುಸಿತ; ತಿಂಗಳು ಕಳೆದರೂ ಸಂತ್ರಸ್ಥರಿಗೆ ಸಿಕ್ಕಿಲ್ಲ ಇನ್ನೂ ಪರಿಹಾರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 17, 2024 | 9:38 PM

ಉತ್ತರ ಕನ್ನಡ, ಆ.17: ಶಿರೂರು ಭೂ ಕುಸಿತ ಘಟನೆಯಲ್ಲಿ ಕಾಣೆಯಾದ ಜಗನ್ನಾಥ್ ಕುಟುಂಬದ ಮಕ್ಕಳಿಗೆ ಕುಮಟಾ ಅಥವಾ ಅಂಕೋಲಾ ತಹಶೀಲ್ದಾರರ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಲಾಗಿತ್ತು. ಕೆಲಸ ಕೇಳಿ ಹೋದ ಜಗನ್ನಾಥ್ ಮಕ್ಕಳಿಗೆ ಸದ್ಯ ಕೆಲಸ ಖಾಲಿ ಇಲ್ಲ ಎಂದು ಹೇಳಿ ಕಳುಹಿಸಲಾಗಿದೆ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಸಹ ಭರವಸೆ ನೀಡಿದ್ದರೂ ಈವರೆಗೂ ಕೆಲಸ ಮಾತ್ರ ಸಿಗುವ ಭರವಸೆ ಹುಸಿಯಾಗಿದೆ. ಜೊತೆಗೆ ಕಾಣೆಯಾಗಿರುವ ಮೂರು ಕುಟುಂಬಗಳಿಗೆ ಬಾಂಡ್ ಬರೆಸಿಕೊಂಡು ಪರಿಹಾರ ನೀಡುವುದಾಗಿ ಹೇಳಿದ್ದ ಐದು ಲಕ್ಷ ರೂಪಾಯಿ ಕೂಡ ಸಲ್ಲಿಕೆಯಾಗಿಲ್ಲ.

ಶಿರೂರಿನಲ್ಲಿ ಮೃತರಾದ ಕುಟುಂಬದ ಸಂಕಷ್ಟ ಒಂದು ಕಡೆಯಾದರೇ, ಭೂ ಕುಸಿತದಿಂದ ನದಿ ನೀರಿನ ಪ್ರವಾಹದಲ್ಲಿ ಕೊಚ್ವಿಹೋದ ಉಳವರೆ ಗ್ರಾಮದ ಜನರ ಸಂಕಷ್ಟ ಇನ್ನೊಂದು ಕಡೆ. ಸದ್ಯ ಮನೆ ಕಳೆದುಕೊಂಡವರಿಗೆ ಸರಕಾರದಿಂದ 1.20 ಲಕ್ಷ ಪರಿಹಾರ ದೊರೆತಿದೆ. ಆದರೆ, ಬದಲಿ ಜಾಗ ನೀಡುವ ಕುರಿತು ಜಿಲ್ಲಾಡಳಿತ ಇನ್ನೂ ತೀರ್ಮಾನಿಸಿಲ್ಲ. ಜೊತೆಗೆ ಮನೆ ಕಳೆದುಕೊಂಡವರು ಕಾಳಜಿ ಕೇಂದ್ರದಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈ ಹಣ ಜಿಲ್ಲಾಡಳಿತ ಭರಿಸುವ ಭರವಸೆ ನೀಡಿದ್ದರೂ ಹಣ ಮಾತ್ರ ಬಿಡುಗಡೆಯಾಗಿಲ್ಲ.

ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ; ಲಾರಿ ಕೊಚ್ಚಿ ಹೋದ 28 ದಿನಗಳ ಬಳಿಕ ಗಂಗಾವಳಿ ನದಿಯಲ್ಲಿ ಬಿಡಿ ಭಾಗ ಪತ್ತೆ

ಹೀಗಾಗಿ ಅಳಿದುಳಿದ ಮನೆಗಳಲ್ಲಿ ಕೆಲವರು ಉಳಿದುಕೊಂಡರೆ, ಉಳಿದವರು ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಮಾಡಿದ್ದು, ಎಲ್ಲಾ ಕಳೆದುಕೊಂಡವರು ಇದೀಗ ಸರ್ಕಾರದ ಸಹಾಯ ಸಿಗದೇ ಬೀದಿಗೆ ಬೀಳುವಂತಾಗಿದೆ. ರಾಜ್ಯ ಸರ್ಕಾರ ವಯಾನಾಡಿನಲ್ಲಿ ಮನೆ ಕಳೆದುಕೊಂಡವರಿಗೆ 100 ಮನೆ ಕಟ್ಟಿಸಿಕೊಡುವ ಕಾರ್ಯಕ್ಕೆ ಮುಂದಾಗಿದೆ. ಆದರೆ, ನಮ್ಮ ರಾಜ್ಯದಲ್ಲೇ ಮನೆ ಕಳೆದುಕೊಂಡು ಬೀದಿಗೆ ಬಿದ್ದರೂ ಸೂಕ್ತ ಪರಿಹಾರ ನೀಡಲು ಹಿಂದುಮುಂದು ನೋಡುತಿದ್ದು, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ನೀತಿಗೆ ವಿರೋಧ ವ್ಯಕ್ತವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ