Karwar News: ಪಿಕ್ನಿಕ್ಗೆ ಹೋಗಿದ್ದ ವಿದ್ಯಾರ್ಥಿ ನೀರುಪಾಲು, ಸರಣಿ ಅಪಘಾತದಲ್ಲಿ ಬಾಲಕ ಸಾವು
ಪಿಕ್ನಿಕ್ಗೆ ಹೋಗಿದ್ದ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ನಡೆದಿದೆ.

ಕಾರವಾರ: ಪಿಕ್ನಿಕ್ಗೆ ಹೋಗಿದ್ದ ವಿದ್ಯಾರ್ಥಿ (Student) ನೀರುಪಾಲಾಗಿರುವ ಘಟನೆ ಉತ್ತರ ಕನ್ನಡ (Uttar Kannada) ಜಿಲ್ಲೆಯ ಯಲ್ಲಾಪುರ (Yallapura) ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ನಡೆದಿದೆ. ಪ್ರಕಾಶ್ ಪಟಕಾರೆ(16) ಮೃತ ವಿದ್ಯಾರ್ಥಿ. ಪ್ರಕಾಶ್ ಪಟಕಾರೆ ಗುಳ್ಳಾಪುರದ ವಸತಿ ನಿಲಯದಲ್ಲಿ ವಾಸಿಸುತ್ತಿದ್ದನು. ಇಂದು (ಡಿ.27) ಗುಳ್ಳಾಪುರ ಪ್ರೌಢಶಾಲೆಯ ವಿದ್ಯಾರ್ಥಿಗಳು ಗುಳ್ಳಾಪುರದಲ್ಲಿ ನದಿಯ ಬಳಿ ಪಿಕ್ನಿಕ್ಗೆ ತೆರಳಿದ್ದರು. ಈ ವೇಳೆ ವಿದ್ಯಾರ್ಥಿ ಪ್ರಕಾಶ್ ಪಟಕಾರೆ ನದಿಯಲ್ಲಿ ಕೈತೊಳೆಯಲು ಹೋದಾಗ ನೀರು ಪಾಲಾಗಿದ್ದನು. ಸ್ಥಳೀಯ ಮೀನುಗಾರರ ತೀವ್ರ ಹುಡುಕಾಟದಿಂದ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸರಣಿ ಅಪಘಾತದಲ್ಲಿ ಪಾದಚಾರಿ ಬಾಲಕ ಸಾವು
ಮಂಗಳೂರು: ಸರಣಿ ಅಪಘಾತದಲ್ಲಿ ಪಾದಚಾರಿ ಬಾಲಕ ಸಾವನ್ನಪ್ಪಿರುವ ಘಟನೆ ಮಂಗಳೂರು ತಾಲೂಕಿನ ಮುಡಿಪು ಜಂಕ್ಷನ್ ಬಳಿ ನಡೆದಿದೆ. ಬಂಟ್ವಾಳ ತಾಲೂಕಿನ ಪಜೀರು ನಿವಾಸಿ ವಿದ್ಯಾರ್ಥಿ ಕಾರ್ತಿಕ್(12) ಮೃತ ದುರ್ದೈವಿ. ಮುಡಿಪು ಜಂಕ್ಷನ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪೊಲೀಸ್ ಬ್ಯಾರಿಕೇಡ್, ಬೈಕ್, ಆಟೋಗೆ ಡಿಕ್ಕಿ ಹೊಡೆದಿದೆ.
ಈ ವೇಳೆ ಬಳಿಕ ರಸ್ತೆಬದಿ ನಿಂತಿದ್ದ ವಿದ್ಯಾರ್ಥಿ ಕಾರ್ತಿಕ್ಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಕಾರ್ತಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸರಣಿ ಅಪಘಾತದ ಭೀಕರ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲಾ ಮಕ್ಕಳ ಪ್ರವಾಸದ ಹಾಗೂ KSRTC ಬಸ್ ನಡುವೆ ಅಪಘಾತ
ಮಂಗಳೂರು: ಶಾಲಾ ಮಕ್ಕಳ ಪ್ರವಾಸದ ಬಸ್ ಹಾಗೂ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿರುವ ಘಟನೆ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮ ಬಳಿ ನಡೆದಿದೆ. ನಿಡ್ಲೆ ಬಳಿ ಸಂಭವಿಸಿದ ಅಪಘಾತದಲ್ಲಿ ಚಾಲಕರಿಬ್ಬರಿಗೆ ಗಂಭೀರ ಗಾಯಗಳಾಗಿವೆ.
ಶಾಲಾ ಮಕ್ಕಳಿದ್ದ ಬಸ್ ಧರ್ಮಸ್ಥಳದಿಂದ ನೆಲ್ಯಾಡಿ ಕಡೆ ತೆರಳುತ್ತಿತ್ತು. ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬಸ್‌ನಲ್ಲಿದ್ದ ಹಲವು ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ನೆಲ್ಯಾಡಿ ಹಾಗೂ ಉಪ್ಪಿನಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Tue, 27 December 22




