ಉತ್ತರ ಕನ್ನಡ: ಬಾಚಣಕಿಯಲ್ಲಿ ಅನುಮಾನಸ್ಪದ ವಸ್ತು ಸ್ಫೋಟ, ಕುರಿಗಾಹಿಗೆ ಗಂಭೀರ ಗಾಯ

| Updated By: ರಮೇಶ್ ಬಿ. ಜವಳಗೇರಾ

Updated on: Feb 09, 2024 | 6:33 PM

blast In Uttara Kannada : ಕುರಿಗಾಹಿಯೋರ್ವನಿಗೆ ವಸ್ತುವೊಂದು ಕೈಯಲ್ಲೇ ಸ್ಫೋಟವಾಗಿದೆ. ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಬಾಚಣಕಿಯಲ್ಲಿ ಸಿಕ್ಕ ಹೊಳಪಿರುವ ವಸ್ತು ಸ್ಫೋಟಗೊಂಡಿದ್ದು, ಕುರಿಗಾಯಿ ಭರಮಪ್ಪ ಕೈಗೆ ಗಂಭೀರ ಗಾಯವಾಗಿದೆ. ಕಾಡುಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಟ್ಟಿರಬಹದು ಎನ್ನುವ ಅನುಮಾಗಳು ವ್ಯಕ್ತವಾಗಿವೆ.

ಉತ್ತರ ಕನ್ನಡ: ಬಾಚಣಕಿಯಲ್ಲಿ ಅನುಮಾನಸ್ಪದ ವಸ್ತು ಸ್ಫೋಟ, ಕುರಿಗಾಹಿಗೆ ಗಂಭೀರ ಗಾಯ
Follow us on

ಕಾರವಾರ, (ಫೆಬ್ರವರಿ 09): ಉತ್ತರ ಕನ್ನಡ ಜಿಲ್ಲೆ (Uttara Kannada) ಮುಂಡಗೋಡ ತಾಲೂಕಿನ ಬಾಚಣಕಿಯಲ್ಲಿ ಅನುಮಾನಾಸ್ಪದ ವಸ್ತುವೊಂದು ಸ್ಫೋಟವಾಗಿದೆ. (suspicious Thing blast). ಪರಿಣಾಯಮ ಕುರಿ ಕಾಯುತ್ತಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಭರಮಪ್ಪ ಎನ್ನುವ ವ್ಯಕ್ತಿ ಕುರಿ ಮೇಯಿಸಲು ಬಾಚಣಕಿಯ ಕೆರೆ ಬಳಿ ಹೋಗಿದ್ದ. ಆ ವೇಳೆ ಹೊಳಪಿರುವ ಒಂದು ವಸ್ತುವೊಂದು ಕಂಡಿದ್ದು,. ಕೂಡಲೇ ಭರಮಪ್ಪ, ಆ ಹೊಳಪಿನ ವಸ್ತುವನ್ನು ಕೈಯಿಂದ ಹಿಚುಕಿದ್ದಾನೆ. ಆ ವೇಳೆ ಏಕಾಏಕಿ  ವಸ್ತು ಸ್ಫೋಟಗೊಂಡಿದೆ. ಇದರಿಂದ ಭರಮಪ್ಪನ ಎಡಗೈನ 2 ಬೆರಳುಗಳು ಕಟ್​ ಆಗಿವೆ. ಕಾಡುಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳಪಿನ ವಸ್ತುವನ್ನು ನೋಡಿದ ಭರಮಪ್ಪ, ಅದನ್ನು ಕೈನಲ್ಲಿ ಹಿಡಿದು ಹಿಚುಕಿದ್ದಾರೆ. ಕೂಡಲೇ ಅದು ಭಯಾನಕವಾಗಿ ಸ್ಪೋಟಗೊಂಡಿದೆ. ಸ್ಫೋಟದ ಪರಿಣಾಮ ಭರಮಪ್ಪ ಎಡಗೈನ ಎರಡು ಬೆರಳು ತುಂಡಾಗಿ ಬಿದ್ದಿವೆ. ಸದ್ಯ ಭರಮಪ್ಪನನ್ನು ಮುಂಡಗೋಡಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ದುಷ್ಕರ್ಮಿಗಳು ಕಾಡುಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಟ್ಟಿರಬಹುದು ಎನ್ನುವ ಸಂಶಯವಾಗಿದ್ದು, ಈ ಬಗ್ಗೆ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:30 pm, Fri, 9 February 24