ಕಾರವಾರ, ಜುಲೈ.30: ದರೋಡೆ (Robbery) ಮಾಡಲು ಬಸ್‌ನಲ್ಲಿ ಕರ್ನಾಟಕಕ್ಕೆ ಬರುತ್ತಿದ್ದ ರಾಜಸ್ಥಾನದ ಮೂವರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಲ್ಲಿ ನಡೆದಿದೆ. ಇಬ್ಬರು ಆರೋಪಿಗಳು ರಾಮನಗರ ಪೊಲೀಸರ ವಶದಲ್ಲಿದ್ರೆ, ಇನ್ನೋರ್ವ ಗೋವಾ ಪೊಲೀಸರ ವಶದಲ್ಲಿದ್ದಾನೆ. ಹಾಗೂ ಮತ್ತೋರ್ವ ಆರೋಪಿ ಪರಾರಿಯಾಗಿದ್ದು ತಲೆ ಮರೆಸಿಕೊಂಡಿದ್ದಾನೆ.
ನಾಲ್ವರು ಆರೋಪಿಗಳು ದರೋಡೆ ಮಾಡುವ ಉದ್ದೇಶದಿಂದ ಗೋವಾದಿಂದ ಕರ್ನಾಟಕಕ್ಕೆ ಬಸ್‌ನಲ್ಲಿ ಬರುತ್ತಿದ್ದರು. ಈ ವೇಳೆ ಅನ್ಮೋಡ್ ಅಬಕಾರಿ ಚೆಕ್ ಪಾಯಿಂಟ್‌ನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ. ಗೋವಾದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಪೊಲೀಸರು ಮದ್ಯದ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು ಆರೋಪಿಗಳ ಬ್ಯಾಗ್‌ಗಳಲ್ಲಿ ಎಂಟು ಕಾಟ್ರಿಡ್ಜ್‌ಗಳ ಜೊತೆ ಎರಡು ಪಿಸ್ತೂಲ್‌ಗಳು ಪತ್ತೆಯಾಗಿವೆ. ತಕ್ಷಣವೇ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದು ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿದ್ದಂತೆ ಮಾರಸಂಗಲ್ ರೈಲ್ವೇ ಗೇಟ್‌ನತ್ತ ಆರೋಪಿಗಳು ಓಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧದ ಮುಡಾ ಭ್ರಷ್ಟಾಚಾರ ಆರೋಪವನ್ನು ಸಂಸತ್ನಲ್ಲಿ ಎತ್ತಿ ತೋರಿಸಿದ ಲೆಹರ್ ಸಿಂಗ್
ಇಬ್ಬರು ಆರೋಪಿಗಳನ್ನು ರಾಮನಗರ ಪೊಲೀಸರು ಬಂಧಿಸಿದ್ರೆ, ಇನ್ನೋರ್ವನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಗೋವರ್ಧನ್ ರಾಜ್ ಪುರೋಹಿತ್ (29), ಶ್ಯಾಮ್ ಲಾಲ್ (23) ರಾಮನಗರ ಪೊಲೀಸರ ಬಂಧನದಲ್ಲಿದ್ದಾರೆ. ಉಳಿದ ಇಬ್ಬರು ಆರೋಪಿಗಳು ಚೆಕ್ ಪಾಯಿಂಟ್‌ನಲ್ಲಿ ತಂತ್ರಗಾರಿಕೆ ನಡೆಸಿ ಪರಾರಿಗೆ ಯತ್ನಿಸಿದ್ದು ಲಾಡು ಕುಕ್ಕಾ ಸಿಂಗ್ (22)ನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಇನ್ನು ಆರೋಪಿಗಳಿಂದ ಒಂದು ಪಿಸ್ತೂಲ್ ಮತ್ತು ಮೂರು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಎಸ್ಪಿ ಜಯಕುಮಾರ್, ಜೋಯಿಡಾ ಸಿಪಿಐ ಚಂದ್ರಶೇಖರ್ ಹರಿಹರ್, ರಾಮನಗರ ಪಿಎಸ್ಐ ಬಸವರಾಜ್ ಮಾಬ್ನೂರು, ಕುಳೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಗುನ್ ಹಾಗೂ ಪೊಲೀಸ್ ಪಿಎಸ್‌ಐ ಸಂದೀಪ್ ನಿಂಬಾಳ್ಕರ್ ಅವರಿಂದ ತನಿಖೆ ಮುಂದುವರೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ