ಶಿರೂರು ಗುಡ್ಡ ಕುಸಿತ: ಮೃತ ದೇಹ ಹುಡುಕಿ ಕುಟುಂಬಸ್ಥರಿಗೆ ನೀಡುವ ಪಣತೊಟ್ಟ ಈಜು ತಜ್ಞ

ಅಂಕೋಲಾ(Ankola) ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದ 11 ಜನರ ಪೈಕಿ ಉಳಿದ ಮೂವರಿಗಾಗಿ ಹುಡುಕಾಟ ನಡೆಯುತ್ತಿದೆ. ಅದರಂತೆ ಕಾರ್ಯಾಚರಣೆಯಲ್ಲಿ ತೊಡಗಿರುವ ಈಜು ತಜ್ಞ ಈಶ್ವರ ಮಲ್ಪೆ, ‘ಮೃತ ದೇಹ ಹುಡುಕಿ ಕುಟುಂಬಸ್ಥರಿಗೆ ನೀಡುವ ಪಣತೊಟ್ಟಿದ್ದಾರೆ.

ಶಿರೂರು ಗುಡ್ಡ ಕುಸಿತ: ಮೃತ ದೇಹ ಹುಡುಕಿ ಕುಟುಂಬಸ್ಥರಿಗೆ ನೀಡುವ ಪಣತೊಟ್ಟ ಈಜು ತಜ್ಞ
ಈಶ್ವರ ಮಲ್ಫೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 30, 2024 | 6:20 PM

ಉತ್ತರ ಕನ್ನಡ, ಜು.30: ಇದೇ ಜುಲೈ 16 ರ ಬೆಳಗ್ಗೆ ಅಂಕೋಲಾ(Ankola) ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು 11 ಜನ ಮಣ್ಣಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿತ್ತು. ಬಳಿಕ ಕಾರ್ಯಾಚರಣೆ ನಡೆಸಿ ಎಂಟು ಜನರ ಮೃತದೇಹವನ್ನು ಪತ್ತೆ ಮಾಡಲಾಗಿತ್ತು. ಇನ್ನುಳಿದಂತೆ ಮೂವರ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ. ಅದರಂತೆ ಕಾರ್ಯಾಚರಣೆಯಲ್ಲಿ ತೊಡಗಿರುವ ಈಜು ತಜ್ಞ ಈಶ್ವರ ಮಲ್ಪೆ, ‘ಮೃತ ದೇಹ ಹುಡುಕಿ ಕುಟುಂಬಸ್ಥರಿಗೆ ನೀಡುವ ಪಣತೊಟ್ಟಿದ್ದಾರೆ.

ಕುಟುಂಬಸ್ಥರಿಗೆ ಮೃತ ದೇಹ ಹುಡುಕಿ ಕೊಡಲು ಪಣತೊಟ್ಟ ಈಜು ತಜ್ಞ ಈಶ್ವರ ಮಲ್ಪೆ

ಈ ಕುರಿತು ಈಜು ತಜ್ಞ ಈಶ್ವರ ಮಲ್ಪೆ ಮಾತನಾಡಿ, ‘ನದಿಯ ನೀರಿನ ಪ್ರಮಾಣ ಕಡಿಮೆ ಆಗುವ ನಿರೀಕ್ಷೆ ಇತ್ತು. ಯಲ್ಲಾಪುರ ಭಾಗದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ಗಂಗಾವಳಿ ನದಿಯ ನೀರಿನ ರಭಸ ಹಾಗೂ ಪ್ರಮಾಣ ಹೆಚ್ಚಾಗಿದೆ. ಮೊನ್ನೆ ನಾನು ನದಿಗೆ ಇಳಿದಾಗ 8 ನಾಟ್ಸ್ ವೇಗ ಇತ್ತು. ಇಂದು 12 ನಾಟ್ಸ್ ವೇಗದಲ್ಲಿ ನದಿಯ ನೀರು ಹರಿಯುತ್ತಿದೆ. ಅಗಸ್ಟ್ 3 ರ ಬೆಳಗಿನ ಜಾವ 4 ಗಂಟೆಗೆ ಅಮವಾಸ್ಯೆ ಇದೆ. ಆ ಸಂದರ್ಭದಲ್ಲಿ ನದಿಯ ನೀರಿನ ಪ್ರಮಾಣ ಮತ್ತು ವೇಗ ಕಡಿಮೆ ಆಗುತ್ತದೆ. ಹಾಗಾಗಿ ಆ ದಿನ ಕಾರ್ಯಾಚರಣೆ ಮಾಡಲು ನಿರ್ಧಾರ ಮಾಡಲಾಗಿದೆ. ನಮ್ಮ ಕಾರ್ಯಾಚರಣೆಗೆ ಸಹಕಾರ ನೀಡಲು ಕೇರಳದಿಂದ ವಿಶೇಷ ಯಂತ್ರ ತರಲಾಗುತ್ತಿದೆ. ಆ ಯಂತ್ರ ಈ ನದಿಯಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೆ ನೋಡಬೇಕು. ಕಣ್ಮರೆ ಆದವರ ಕುಟುಂಬಸ್ಥರಿಗೆ ಮೃತ ದೇಹ ಹುಡುಕಿ ಕೊಡಲೆಬೇಕೆಂದು ಪಣತೊಟ್ಟಿದ್ದೆನೆ ಎಂದಿದ್ದಾರೆ.

ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನಿಬ್ಬರು ಮಕ್ಕಳು ಸೇರಿದಂತೆ ಐವರನ್ನ ರಕ್ಷಿಸಿದ ಹುವಾ ಗೌಡ

ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಳಿಸಿದ ಜಿಲ್ಲಾಡಳಿತ

ಗಂಗಾವಳಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಇನ್ನು ಎರಡು ದಿನಗಳಿಂದ ಉತ್ತರ ಕನ್ನಡ ಜಿಲ್ಲಾಡಳಿತ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಳಿಸಿದೆ. ಗುಡ್ಡ ಕುಸಿತ ಭೀತಿಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ. ಗುಡ್ಡ ಕುಸಿತದಲ್ಲಿ ನಾಪತ್ತೆ ಆಗಿರುವ ಕೇರಳದ ಅರ್ಜುನ್, ಉತ್ತರ ಕನ್ನಡ ಜಿಲ್ಲೆಯ ಜಗನ್ನಾಥ್ ಹಾಗೂ ಲೋಕೇಶ್ ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಇನ್ನು ಕೇರಳದಿಂದ ಅಧಿಕಾರಿಗಳ ತಂಡ ಆಗಮಿಸಿದ್ದು, ಶಾಸಕ ಸತೀಶ್ ಸೈಲ್‌ ಜೊತೆ ಭೇಟಿ ಮಾಡಿ ಪರಿಶೀಲನೆ ನಡೆಸಯುತ್ತಿದೆ. ಅದರಂತೆ ಆಗಸ್ಟ್ 3ರ ನಂತರ ಕಾರ್ಯಾಚರಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಕೇರಳ ಸರ್ಕಾರದ ಅಧಿಕಾರಿ ವಿನ್ಸಿ

ಈ ಕುರಿತು ಕೇರಳ ಸರ್ಕಾರದ ಅಧಿಕಾರಿ ವಿನ್ಸಿ ಮಾತನಾಡಿ, ‘ಮಣ್ಣು ತೆರವು ಮಾಡುವ ಯಂತ್ರವೊಂದನ್ನ ಕೇರಳದಿಂದ ತರುವ ಚಿಂತನೆ ನಡೆದಿದೆ. ಈ ಬಗ್ಗೆ ಕೇರಳ ಸರ್ಕಾರದ ಅಧಿಕಾರಿಗಳ ಜೊತೆ ಉತ್ತರ ಕನ್ನಡ ಡಿಸಿ ಮಾತನಾಡಿದ್ದಾರೆ. ಆದ್ರೆ ಇಲ್ಲಿನ ನದಿಯ ನೀರಿನ ಪ್ರಮಾಣ ಹಾಗೂ ರಭಸ ನೋಡಿದ್ರೆ ಕಷ್ಟ ಅನಿಸುತ್ತದೆ. ಗರಿಷ್ಠ 4 ನಾಟ್ಸ್ ವೇಗದಲ್ಲಿ ಮಾತ್ರ ಆ ಯಂತ್ರ ವರ್ಕ್ ಮಾಡುತ್ತದೆ. ಆದ್ರೆ ಈಗ ನದಿಯ ನೀರಿನ ವೇಗ 12 ನಾಟ್ಸ್ ಇದೆ. ಅಮವಾಸ್ಯೆಯ ದಿನ ನೀರಿನ ಮಟ್ಟ ಕಡಿಮೆ ಆಗುವ ನಿರೀಕ್ಷೆಯಿದೆ. ಈ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತೇವೆ. ಬಳಿಕ ಕಾರ್ಯಾಚರಣೆ ಹೇಗೆ ಮಾಡಬೇಕು ಎಂಬುವುದರ ಬಗ್ಗೆ ನಿರ್ಧರಿಸುತ್ತೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ