ಉತ್ತರ ಕನ್ನಡ, ಜ.06: ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ರಾಜ್ಯದ ಪ್ರವಾಸಿ ಹಾಗೂ ದೇವಸ್ಥಾನಗಳಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಾಗಿದೆ. ಅಷ್ಟೆ ಅಲ್ಲದೆ ಕೋವಿಡ್ ಹಾಗೂ ನೈಸರ್ಗಿಕ ವಿಪತ್ತು ಯಾವುದೇ ಆಗದೆ ಇರುವುದರಿಂದ, ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಉತ್ತೆಜನ ಸಿಕ್ಕಿದೆ. ಆದ್ರೆ ಪ್ರವಾಸಿಗರ(Tourists) ಸಂಖ್ಯೆಗೆ ತಕ್ಕಂತೆ ಉತ್ತರ ಕನ್ನಡ(Uttara Kannada) ಪ್ರವಾಸೊದ್ಯಮ ಇಲಾಖೆ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 40 ಪ್ರೆಕ್ಷಣೀಯ ಸ್ಥಳಗಳಿವೆ. ಒಂದೊಂದು ಪ್ರೆಕ್ಷಣೀಯ ಸ್ಥಳದ್ದು ಒಂದೊಂದು ಸಮಸ್ಯೆ ಆಗಿದೆ.
ಯಲ್ಲಾಪುರದಿಂದ ಸರಿ ಸುಮಾರು 20 ಕಿಮೀ ದೂರದಲ್ಲಿರುವ ಮಾಗೊಡ್ ಫಾಲ್ಸ್, ಪ್ರವಾಸಿಗರ ಪ್ರೀತಿಯ ತಾಣ. ಇಲ್ಲಿ ಒಮ್ಮೆ ಬಂದರೆ, ಮತ್ತೆ ಬರಬೇಕು ಎಂದು ಅನಿಸುತ್ತದೆ. ಆದ್ರೆ, ಇಲ್ಲಿಗೆ ಬರಲು ಸುಸಜ್ಜಿತ ರಸ್ತೆ ಇರದೆ ಇರುವುದರಿಂದ. ಇಲ್ಲಿಗೆ ಬರುವ ವಾಹನಗಳು ಯಾವಾಗ ಕೈ ಕೊಡುತ್ತೊ ಗೊತ್ತಿಲ್ಲ. ಹಾಗಾಗಿ ಆತಂಕದಲ್ಲಿ ಗಾಡಿ ಓಡಿಸುತ್ತಾ ಈ ಸ್ಥಳಕ್ಕೆ ಬರುವ ಪರಿಸ್ಥಿತಿ ಉಂಟಾಗಿದೆ.
ಶಿವನ ಆತ್ಮಲಿಂಗದ ಒಂದು ಭಾಗ ಹೊಂದಿರುವ ಗೋಕರ್ಣ ಈಗ ಆಶುಚಿತ್ವದ ತಾಣವಾಗಿದೆ. ಆತ್ಮಲಿಂಗ ದರ್ಶನಕ್ಕೆ ಸ್ನಾನ ಮಾಡಿ ಹೋಗಲಾಗುತ್ತದೆ. ಆದ್ರೆ, ಸುಸಜ್ಜಿತ ಸ್ನಾನ ಗೃಹಗಳು ಇಲ್ಲದ ಕಾರಣ ಜನ ಎಲ್ಲೆಂದರಲ್ಲಿ ಸ್ನಾನ ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೆ, ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ದುರ್ವಾಸನೆ ಬರುತ್ತಿದೆ.
ಇದನ್ನೂ ಓದಿ:Tourists: ಅಪಾಯಕಾರಿ ಸ್ಥಳದಲ್ಲಿ ರೀಲ್ಸ್, ಪ್ರವಾಸಿಗರ ಹುಚ್ಚಾಟವನ್ನು ವಿಡಿಯೋನಲ್ಲಿ ನೋಡಿ
ಕಡಲ ತೀರದಲ್ಲಿ ಅತ್ಯಂತ ದೊಡ್ಡ ಶಿವನ ಮೂರ್ತಿ ಹಾಗೂ ಸ್ಕೂಬಾ ಡೈವ್ ಮೂಲಕ ಎಲ್ಲಾ ವರ್ಗದ ಪ್ರವಾಸಿಗರನ್ನು ಆಕರ್ಷಿಸುವ ಮುರ್ಡೆಶ್ವರದಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಬಿಚ್ನಲ್ಲಿ ಪಾರ್ಕಿಂಗ್ ಮಾಡುವ ಪರಿಸ್ಥಿತಿ ಇದೆ. ಇನ್ನು ಜಿಲ್ಲೆಯ 30ಕ್ಕೂ ಹೆಚ್ಚು ಕಡಲ ತೀರದಲ್ಲಿ ಪ್ಲಾಸ್ಟಿಕ್ ಹಾಗೂ ಮಧ್ಯದ ಬಾಟಲ್ಗಳು ಎತ್ತೇಚ್ಛವಾಗಿ ಕಂಡುಬರುತ್ತಿದ್ದು, ಬರುವ ಪ್ರವಾಸಿಗರು ಮುಜುಗರಕ್ಕೆ ಒಳಗಾಗುತ್ತಿದ್ದಾರೆ.
ಇಷ್ಟೆಲ್ಲಾ ಸಮಸ್ಯೆ ಹೊಂದಿರುವ ಉತ್ತರ ಕನ್ನಡ ಜಿಲ್ಲೆಗೆ, ಈ ಹಿಂದೆ ಯಾವತ್ತೂ ಭೇಟಿ ಕೊಡದಷ್ಟು ಜನ ಈ ವರ್ಷ ಭೇಟಿ ಕೊಟ್ಟಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಬರೊಬ್ಬರಿ 1 ಕೋಟಿಗೂ ಅಧಿಕ ಜನ ಭೇಟಿ ನೀಡಿದ್ದು, ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಪ್ರವಾಸೋದ್ಯಮ ಇಲಾಖೆ ಮಾತ್ರ ಇದಕ್ಕೆ ತಕ್ಕಂತೆ ಕೆಲಸ ಮಾಡಲು ಆರಂಭ ಮಾಡಿಲ್ಲ. ಒಟ್ಟಾರೆಯಾಗಿ ಪ್ರವಾಸೊದ್ಯಮ ಇಲಾಖೆಗೆ ಉತ್ತೇಜನ ಸಿಗುವ ಸಂದರ್ಭದಲ್ಲಿ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಪ್ರವಾಸೊದ್ಯಮ ಹಾಗೂ ಜಿಲ್ಲಾಡಲಿತ ಮಾಡಿದರೆ, ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ