ಉತ್ತರ ಕನ್ನಡ, ಡಿ.03: ಗೋಕರ್ಣ(Gokarna) ಪ್ರವಾಸಕ್ಕೆ ಬಂದಿದ್ದ ಐವರು ಸ್ನೇಹಿತರ ಪೈಕಿ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಲಬುರಗಿ (Kalaburagi) ಮೂಲದ ಆಕಾಶ ಮತ್ತು ಅಭಿಷೇಕ ಮೃತರು. ಬೀಚ್ನಲ್ಲಿ ಯಾಂತ್ರಿಕ ಬೋಟ್ ಓಡಿಸುತ್ತಿರುವಾಗ ಅಲೆಗಳ ಜೋರಾದ ರಭಸಕ್ಕೆ ಸಮುದ್ರದಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದ ಐವರು ಪ್ರವಾಸಿಗರು ಸಮುದ್ರದಲ್ಲಿ ಈಜಾಡಲು ಹೋದಾಗ ಅಲೆಗಳ ಹೊಡೆತಕ್ಕೆ ಸಿಲುಕಿದ್ದರು. ಇದನ್ನು ಕಂಡು ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಈ ಘಟನೆ ಮರೆಮಾಚುವ ಮುನ್ನವೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ತುಮಕೂರು: ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಡಗೊಂಡನಹಳ್ಳಿ ಬಳಿ ನಡೆದಿದೆ. ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದ್ದು, ಮಧುಗಿರಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೀಡಲಾಗುತ್ತಿದೆ. ಶ್ರೀ ರಂಗಪ್ಪ (30)ಮೃತ ದುರ್ದೈವಿ. ಆಂಧ್ರದ ರಾಡಪಲ್ಲಿ ಗ್ರಾಮದ ನಿವಾಸಿಯಾದ ಇವರು, ಮಧುಗಿರಿ ಕಡೆಯಿಂದ ಪಾವಗಡ ಹೋಗುತ್ತಿದ್ದರು. ಪಾವಗಡ ಕಡೆಯಿಂದ ಮಧುಗಿರಿ ಕಡೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.
ಇದನ್ನೂನ ಓದಿ:ಬೈಕ್ಗಳ ನಡುವೆ ಡಿಕ್ಕಿ-ನಿವೃತ್ತ ಶಿಕ್ಷಕ ಸ್ಥಳದಲ್ಲೇ ದುರ್ಮರಣ, ಗಾಂಜಾ ಮತ್ತಿನಲ್ಲಿ ತ್ರಿಪಲ್ ರೈಡಿಂಗ್ ಮಾಡ್ತಿದ್ದ ಯುವಕರು
ಬೆಂಗಳೂರು: ರಸ್ತೆ ಅಪಘಾತದಲ್ಲಿ 20 ವರ್ಷದ ಯುವಕನೊಬ್ಬ ಮೃತನಾಗಿದ್ದಾನೆ. ಮಹಮ್ಮದ್ ಖುರೇಶಿ(20) ಸಾವನ್ನಪ್ಪಿರುವ ಯುವಕ. ಲ್ಯಾಂಗ್ ಪೋರ್ಡ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಇದರಿಂದ ದ್ವಿಚಕ್ರ ವಾಹನ ಸವಾರ ಖುರೇಷಿ, ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದು, ಲಾರಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಈ ಘಟನೆ ಅಶೋಕನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ