ಬೈಕ್​​ಗಳ ನಡುವೆ ಡಿಕ್ಕಿ-ನಿವೃತ್ತ ಶಿಕ್ಷಕ ಸ್ಥಳದಲ್ಲೇ ದುರ್ಮರಣ, ಗಾಂಜಾ‌ ಮತ್ತಿನಲ್ಲಿ ತ್ರಿಪಲ್ ರೈಡಿಂಗ್ ಮಾಡ್ತಿದ್ದ ಯುವಕರು

ಕೆಟಿಎಮ್‌ ಬೈಕಿನ ಅತಿ ವೇಗವೇ ಅಪಘಾತಕ್ಕೆ‌ ಕಾರಣ ಅಂತಾ ಸ್ಥಳೀಯರು ಹೇಳಿದ್ದಾರೆ. ಆರೋಪ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್​​ಗಳ ನಡುವೆ ಡಿಕ್ಕಿ-ನಿವೃತ್ತ ಶಿಕ್ಷಕ ಸ್ಥಳದಲ್ಲೇ ದುರ್ಮರಣ, ಗಾಂಜಾ‌ ಮತ್ತಿನಲ್ಲಿ ತ್ರಿಪಲ್ ರೈಡಿಂಗ್ ಮಾಡ್ತಿದ್ದ ಯುವಕರು
ಬೈಕ್​​ಗಳ ನಡುವೆ ಡಿಕ್ಕಿ-ನಿವೃತ್ತ ಶಿಕ್ಷಕ ಸ್ಥಳದಲ್ಲೇ ದುರ್ಮರಣ, ಗಾಂಜಾ‌ ಮತ್ತಿನಲ್ಲಿ ತ್ರಿಪಲ್ ರೈಡಿಂಗ್ ಮಾಡ್ತಿದ್ದ ಯುವಕರು
TV9kannada Web Team

| Edited By: sadhu srinath

May 30, 2022 | 4:32 PM

ಬೆಂಗಳೂರು: ಬೆಂಗಳೂರು ಹೊರವಲ ಆನೇಕಲ್ ಸಮೀಪ ಚಂದಾಪುರದಲ್ಲಿ ಬೈಕ್​​ಗಳ ನಡುವೆ ಡಿಕ್ಕಿಯಾಗಿ (Bikes collide) ನಿವೃತ್ತ ಶಿಕ್ಷಕ (retired school teacher) ಸತ್ಯನಾರಾಯಣ (66) ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಗಾಂಜಾ‌ ಮತ್ತಿನಲ್ಲಿ ಕೆಟಿಎಂ ಬೈಕ್​ನಲ್ಲಿ ಟ್ರಿಪಲ್ ರೈಡಿಂಗ್ ಬರುತ್ತಿದ್ದ ಯುವಕರು ಈ ಅಪಘಾತವನ್ನುಂಟುಮಾಡಿದ್ದಾರೆ. ಕೆಟಿಎಮ್‌ ಬೈಕಿನ ಅತಿ ವೇಗವೇ ಅಪಘಾತಕ್ಕೆ‌ ಕಾರಣ ಅಂತಾ ಸ್ಥಳೀಯರು ಹೇಳಿದ್ದಾರೆ. ಆರೋಪ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

R.R.ನಗರ ರೆಸ್ಟೋರೆಂಟ್​ನಲ್ಲಿ ಯುವಕನ ಬರ್ಬರ ಕೊಲೆ

ಬೆಂಗಳೂರಿನ R.R.ನಗರದ ರೆಸ್ಟೋರೆಂಟ್​ನಲ್ಲಿ ಯುವಕನ ಬರ್ಬರ ಕೊಲೆಯಾಗಿದೆ. ಚಾಕುವಿನಿಂದ ಇರಿದು ಮಿಲನ್ ಬರ್ಲಾ (25) ಎಂಬ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಆರೋಪಿ ಆರ್ಯನ್ ಪುಷ್ಕರ್ (20) ಎಂಬುವನನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲಸಿನ ಮೇಳಕ್ಕೆ ಬಂದಿದ್ದ ಇಬ್ಬರು ಸಮುದ್ರದಲ್ಲಿ ಮುಳುಗಿ ಸಾವು: ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ಮುಳುಗಿ ಇಬ್ಬರು ಜಲಸಮಾಧಿಯಾಗಿರುವ  ಘಟನೆ ನಡೆದಿದೆ. ಮೈಸೂರಿನ ದಿವಾಕರ ಆರಾಧ್ಯ (40), ನಿಂಗಪ್ಪ(65) ಮೃತರು. ಇವರಿಬ್ಬರೂ ಮಂಗಳೂರಿನ ಹಲಸಿನ ಮೇಳಕ್ಕೆ ಬಂದಿದ್ದವರು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿರಗುಪ್ಪ ಶ್ರೀಧರಗಡ್ಡೆ ಗ್ರಾಮದ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ಸಾವು

ಬಳ್ಳಾರಿ: ಕೆರೆಯಲ್ಲಿ ಮುಳಗಿ ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ಘಟನೆ ಸಿರಗುಪ್ಪ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಸೋಪು ನೀರಿಗೆ ಬಿದ್ದಿದ್ದರಿಂದ ಸೋಪು ತೆಗೆಯಲು ಒಬ್ಬಕಿ ಮುಂದಾಗಿದ್ದಾಳೆ. ನೀರಿಗೆ ಜಾರಿ ಬಿದ್ದಿದ್ದಾಳೆ. ಆದರೆ ಅವಳಿಗೆ ಈಜು ಬಾರದೆ ಮುಳಗತೊಡಗಿದ್ದಾಳೆ. ಅದನ್ನು ಕಂಡು ಮತ್ತೊಬ್ಬ ಬಾಲಕಿ ಸಹಾಯಕ್ಕೆ ನೀರಿಗೆ ಇಳಿದಿದ್ದಾಳೆ. ಅಷ್ಟೇ… ಇಬ್ಬರಿಗೂ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಶ್ರೀಧರಗಡ್ಡೆ ಗ್ರಾಮದ ಮಹೇಶ್ವರಿ (13) ಮತ್ತು ಶ್ರೀದೇವಿ (14) ಮೃತ ಬಾಲಕಿಯರು.

ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಇದನ್ನೂ ಓದಿ: ಉತ್ತರ ಪ್ರದೇಶದ ಅಪಘಾತದಲ್ಲಿ ಬೀದರ್​ನ 7 ಜನ ಸಾವು; ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಿಎಂ ಯೋಗಿ ಆದಿತ್ಯನಾಥ್​ಗೆ ಬೊಮ್ಮಾಯಿ ಮನವಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada