AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾ. ಯಶವಂತ್ ವರ್ಮಾ ಹಗರಣದ ತನಿಖಾ ಸಮಿತಿ ಕಾರ್ಯದರ್ಶಿಯಾಗಿ ಉತ್ತರ ಕನ್ನಡದ ಗಣಪತಿ ಭಟ್ ನೇಮಕ

ನ್ಯಾಯಮೂರ್ತಿ ಯಶವಂತ್ ವರ್ಮಾ ಹಗರಣದ ಕುರಿತ ತನಿಖೆಗಾಗಿ ರಚಿಸಲಾದ ಸಮಿತಿಯಲ್ಲಿ ನ್ಯಾಯಮೂರ್ತಿ ಅಮಿತ್ ಕುಮಾರ್, ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಮತ್ತು ಬಿ.ವಿ. ಆಚಾರ್ಯ ಇದ್ದಾರೆ. ವರ್ಮಾ ಅವರ ದೋಷಾರೋಪಣೆಯನ್ನು ಕೋರಿ 146 ಸಂಸದರು ಸಹಿ ಮಾಡಿದ ನಿರ್ಣಯವನ್ನು ಬಿರ್ಲಾ ಅಂಗೀಕರಿಸಿದ್ದರು. ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಅಗಾಧ ಪ್ರಮಾಣದ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧದ ದೋಷಾರೋಪಣೆಗೆ 146 ಸಂಸದರು ಸಹಿ ಮಾಡಿದ ಪ್ರಸ್ತಾವನೆಯನ್ನು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅಂಗೀಕರಿಸಿದ್ದರು.

ನ್ಯಾ. ಯಶವಂತ್ ವರ್ಮಾ ಹಗರಣದ ತನಿಖಾ ಸಮಿತಿ ಕಾರ್ಯದರ್ಶಿಯಾಗಿ ಉತ್ತರ ಕನ್ನಡದ ಗಣಪತಿ ಭಟ್ ನೇಮಕ
Ganapati Bhat
ಸುಷ್ಮಾ ಚಕ್ರೆ
|

Updated on:Sep 06, 2025 | 8:47 PM

Share

ಬೆಂಗಳೂರು, ಸೆಪ್ಟೆಂಬರ್ 6: ಆದಾಯ ತೆರಿಗೆ (ಕರ್ನಾಟಕ ಮತ್ತು ಗೋವಾ ಪ್ರದೇಶ)ಯ ಪ್ರಧಾನ ಮುಖ್ಯ ಆಯುಕ್ತರಾಗಿ ನಿವೃತ್ತರಾದ ಉತ್ತರ ಕನ್ನಡ ಮೂಲದ ಮಾಜಿ ಐಆರ್‌ಎಸ್ ಅಧಿಕಾರಿ ಗಣಪತಿ ಭಟ್ (Ganapati Bhat) ಅವರನ್ನು ಅಕ್ರಮ ಹಣ ಆರೋಪ ಎದುರಿಸುತ್ತಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ (Yashwant Verma) ವಿರುದ್ಧದ ಆರೋಪಗಳ ತನಿಖೆಗಾಗಿ ರಚಿಸಲಾದ ಮೂವರು ಸದಸ್ಯರ ಸಮಿತಿಗೆ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಉತ್ತರ ಕನ್ನಡ ಮೂಲದ 1989ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿಯಾದ ಗಣಪತಿ ಭಟ್ ಅವರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತ್ರಿದಸ್ಯ ಸಮಿತಿಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಮತ್ತು ಕರ್ನಾಟಕದ ಹಿರಿಯ ವಕೀಲ ಬಿ.ವಿ. ಆಚಾರ್ಯ ಇದ್ದಾರೆ.

ಮೂರು ದಶಕಗಳಿಗೂ ಹೆಚ್ಚು ಕಾಲ ವೃತ್ತಿಜೀವನ ನಡೆಸಿರುವ ಗಣಪತಿ ಭಟ್ ನವದೆಹಲಿಯಲ್ಲಿ ಆದಾಯ ತೆರಿಗೆ (ಅಂತಾರಾಷ್ಟ್ರೀಯ ತೆರಿಗೆ)ಯ ಪ್ರಧಾನ ಮುಖ್ಯ ಆಯುಕ್ತರಾಗಿ ಮತ್ತು ಲೋಕಸಭೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅವರು ಆದಾಯ ತೆರಿಗೆ ತನಿಖಾ ಮಹಾನಿರ್ದೇಶಕರಾಗಿಯೂ (ಕರ್ನಾಟಕ ಮತ್ತು ಗೋವಾ ಮತ್ತು ಕೇರಳ) ಅಧಿಕಾರ ನಿರ್ವಹಿಸಿದ್ದರು.

ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಆರೋಪಗಳ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಸ್ಪೀಕರ್ ಓಂ ಬಿರ್ಲಾ ಕಳೆದ ತಿಂಗಳು ಘೋಷಿಸಿದ್ದರು. ಮಾರ್ಚ್‌ನಲ್ಲಿ ನಡೆದ ಬೆಂಕಿ ಅವಘಡದ ನಂತರ ದೆಹಲಿಯಲ್ಲಿರುವ ಅವರ ಅಧಿಕೃತ ನಿವಾಸದಿಂದ ಸುಟ್ಟುಹೋದ ಕಂತೆಗಟ್ಟಲೆ ನೋಟುಗಳು ಪತ್ತೆಯಾಗಿತ್ತು.

ಇದನ್ನೂ ಓದಿ: ನ್ಯಾ. ವರ್ಮಾ ಅಕ್ರಮ ಹಣ ವಿವಾದದ ತನಿಖೆಗೆ 3 ಸದಸ್ಯರ ಸಮಿತಿ ರಚಿಸಿದ ಲೋಕಸಭೆ ಸ್ಪೀಕರ್

ಯಶವಂತ್ ವರ್ಮಾ ಭ್ರಷ್ಟಾಚಾರದ ಆರೋಪದಲ್ಲಿ ತಪ್ಪಿತಸ್ಥರೆಂದು ಸಮಿತಿಯು ದೃಢಪಡಿಸಿದರೆ ಸಂಸತ್ತಿನಲ್ಲಿ ದೋಷಾರೋಪಣೆ ಪ್ರಕ್ರಿಯೆಗಳು ಪ್ರಾರಂಭವಾಗುತ್ತವೆ. ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧದ ಆರೋಪಗಳ ತನಿಖೆಗಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು, ಸುಪ್ರೀಂ ಕೋರ್ಟ್ ಅವರ ವಿರುದ್ಧದ ಆಂತರಿಕ ತನಿಖಾ ಪ್ರಕ್ರಿಯೆಯನ್ನು ಎತ್ತಿಹಿಡಿದ ಕೆಲವು ದಿನಗಳ ನಂತರ ಈ ಬಗ್ಗೆ ಘೋಷಿಸಲಾಗಿತ್ತು.

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧದ ಆರೋಪಗಳ ತನಿಖೆಗಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತ್ರಿಸದಸ್ಯ ಸಮಿತಿಯನ್ನು ಘೋಷಿಸಿದ್ದರು. ನ್ಯಾಯಮೂರ್ತಿ ವರ್ಮಾ ಅವರ ನಿವಾಸದಿಂದ ಭಾರಿ ಪ್ರಮಾಣದ ನಗದು ಪತ್ತೆಯಾಗಿತ್ತು. ಹೀಗಾಗಿ ಅವರನ್ನು ದೋಷಾರೋಪಣೆ ಮಾಡುವ ಕ್ರಮ ವೇಗ ಪಡೆದುಕೊಂಡಿದೆ. ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧದ ಆರೋಪಗಳ ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದೆ ಎಂದು ಸಭಾಪತಿ ಓಂ ಬಿರ್ಲಾ ತಿಳಿಸಿದ್ದರು.

ಇದನ್ನೂ ಓದಿ: ನ್ಯಾ. ಯಶವಂತ್ ವರ್ಮಾ ಪದಚ್ಯುತಿಗೆ ಲೋಕಸಭೆಯಲ್ಲಿ ಶೀಘ್ರದಲ್ಲೇ ಪ್ರಕ್ರಿಯೆ ಆರಂಭ; ಕಿರಣ್ ರಿಜಿಜು

ನ್ಯಾಯಮೂರ್ತಿಗಳ ವಿರುದ್ಧದ ದೋಷಾರೋಪಣೆಗೆ 146 ಸಂಸದರು ಸಹಿ ಮಾಡಿದ ಪ್ರಸ್ತಾವನೆಯನ್ನು ಅಂಗೀಕರಿಸಿದ ಸ್ಪೀಕರ್, “ಈ ಸಮಿತಿಯು ಸಾಧ್ಯವಾದಷ್ಟು ಬೇಗ ತನ್ನ ವರದಿಯನ್ನು ಸಲ್ಲಿಸುತ್ತದೆ. ವರದಿ ಬರುವವರೆಗೆ ಪ್ರಸ್ತಾವನೆ ಬಾಕಿ ಇರುತ್ತದೆ” ಎಂದು ಹೇಳಿದ್ದರು. ನ್ಯಾಯಾಧೀಶರ ವಿರುದ್ಧದ ದೋಷಾರೋಪಣೆಗೆ ಕಾರ್ಯವಿಧಾನವನ್ನು ಸಂವಿಧಾನದ 124(4)ನೇ ವಿಧಿಯ ಅಡಿಯಲ್ಲಿ ನಿಗದಿಪಡಿಸಲಾಗಿದೆ. ಲೋಕಸಭೆಯಿಂದ ರಚಿಸಲ್ಪಟ್ಟ ಸಮಿತಿಯು ತನ್ನ ವರದಿಯನ್ನು ಸ್ಪೀಕರ್‌ಗೆ ಸಲ್ಲಿಸುತ್ತದೆ. ನಂತರ ಅವರು ಅದನ್ನು ಸದನದ ಮುಂದೆ ಇಡುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:06 pm, Sat, 6 September 25