ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಇಂಬು ನೀಡಲು ಮುಂದಾದ ಡಿಸಿ ಲಕ್ಷ್ಮೀಪ್ರಿಯಾ

| Updated By: ವಿವೇಕ ಬಿರಾದಾರ

Updated on: Feb 17, 2025 | 1:11 PM

ಉತ್ತರ ಕನ್ನಡ ಪ್ರವಾಸಿಗರ ನೆಚ್ಚಿನ ಜಿಲ್ಲೆಯಾಗಿದೆ. ಸಮೃದ್ಧವಾದ ನೈಸರ್ಗಿಕ ಸಂಪತ್ತು ಹೊಂದಿರುವ ಈ ಜಿಲ್ಲೆಯಲ್ಲಿ ಸುತ್ತಾಟ ಮಾಡುವುದೆ ಭಾರಿ ಕಷ್ಟ. ಇಂತಹ ಸಮಸ್ಯೆಗಳಿಗೆ ಬ್ರೇಕ್ ಹಾಕುವುದರ ಜೊತೆಗೆ ಇನ್ನೂ ಬೆಳಕಿಗೆ ಬಾರದ ಪ್ರವಾಸಿ ತಾಣಗಳನ್ನು ಪರಿಚಯಿಸಲು ಉತ್ತರ ಕನ್ನಡ ಜಿಲ್ಲಾಡಳಿತ ವಿನೂತನ ಪ್ಲಾನ್ ಮಾಡಿದೆ ಈ ಕುರಿತ ವರದಿ ಇಲ್ಲಿದೆ.

ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಇಂಬು ನೀಡಲು ಮುಂದಾದ ಡಿಸಿ ಲಕ್ಷ್ಮೀಪ್ರಿಯಾ
ಡಿಸಿ ಲಕ್ಷ್ಮೀಪ್ರಿಯಾ, ಮುರುಡೇಶ್ವರ
Follow us on

ಕಾರವಾರ, ಫೆಬ್ರವರಿ 17: ಉತ್ತರ ಕನ್ನಡ (Uttar Kannada) ಜಿಲ್ಲೆಗೆ ಭೇಟಿ ನೀಡಲು ಬಯಸುವ ಅದೆಷ್ಟೋ ಪ್ರವಾಸಿಗರಿಗೆ ಇಲ್ಲಿನ ಭೌಗೋಳಿಕ ಹಾಗೂ ಪ್ರವಾಸಿ ತಾಣಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವುದಿಲ್ಲ. ಹೀಗಾಗಿ, ಉತ್ತರ ಕನ್ನಡ ಜಿಲ್ಲೆಗೆ ಬರುವ ಅದೆಷ್ಟೋ ಪ್ರವಾಸಿಗರು ತಮಗಿದ್ದ ಸಮಯದಲ್ಲಿ ಮತ್ತು ಮಾಹಿತಿ ಆಧಾರದ ಮೇಲೆ ಸಿಮಿತ ಸ್ಥಳಗಳಿಗೆ ಭೇಟಿ ಕೊಟ್ಟು ತೆರಳುತ್ತಾರೆ. ಹೆಚ್ಚಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ಕೊಡುವವರ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ, ಈ ಎಲ್ಲ ಸಮಸ್ಯೆಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೊಸ ಯೋಜನೆ ರೂಪಿಸಿದ್ದಾರೆ.

ಬೇರೆ ಬೇರೆ ವರ್ಗದ ಪ್ರವಾಸಿಗರು ಜಿಲ್ಲೆಗೆ ಭೇಟಿ ಕೊಡುತ್ತಾರೆ. ಕೆಲವರಿಗೆ ದೇವಸ್ಥಾನ ಇಷ್ಟ ಆದ್ರೆ, ಇನ್ನೂ ಕೆಲವರಿಗೆ ಯಾರೂ ಟ್ರಕ್ಕಿಂಗ್ ಹೋಗುವ ಆಶಯ ಇರುತ್ತೆ. ಇನ್ನೂ ಕೆಲವರಿಗೆ ಕಡಲ ತೀರ ಹಾಗೂ ಕಾಡಿನಲ್ಲಿ ಸುತ್ತಾಟ ಮಾಡುವ ಅಭಿರುಚಿ ಇರುತ್ತೆ. ಹೀಗಾಗಿ, ದೇವಸ್ಥಾನಗಳಿಗೆ ಭೇಟಿ ಕೊಡಲು ಬಯಸುವವರಿಗೆ ವೆಬ್ ಪೊರ್ಟಲ್​​ನಲ್ಲಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ, ತಾವು ಭೇಟಿ ಕೊಡಲು ಮುಂದಾಗಿರುವ ದೇವಸ್ಥಾನದ ಸುತ್ತಮುತ್ತಲಿನ ಅತ್ಯಾಆಕರ್ಷಣೀಯ ಹಾಗೂ ಐತಿಹಾಸಿಕ ದೇವಸ್ಥಾನಗಳ ರೂಟ್ ಮ್ಯಾಪ್ ಹಾಗೂ ಮಾಹಿತಿಯನ್ನು ಒದಗಿಸಲಾಗಿತ್ತೆ.

ಉತ್ತರ ಕನ್ನಡ ಅಂದ್ರೆ ಗೋಕರ್ಣ, ಮುರ್ಡೆಶ್ವರ, ಕಡಲ ತೀರ ಮತ್ತು ರೆಸಾರ್ಟ್​ಗಳಿಗೆ ಅಷ್ಟೇ ಸಿಮಿತ ಎಂಬುವುದು ಅನೇಕರ ಅಭಿಪ್ರಾಯ. ಆದ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿರುವ ತಾಣಗಳಿಗಿಂತ, ಬೆಳಕಿಗೆ ಬಾರದ ತಾಣಗಳೇ ಹೆಚ್ಚಿವೆ. ಕೇವಲ ಸ್ಥಳಿಯರಿಗೆ ಮತ್ತು ವಿಶೇಷ ತಾಣಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಮಾತ್ರ ಗೊತ್ತಿದೆ. ಇಂತಹ ತಾಣಗಳ ಬಗ್ಗೆ ಎಲ್ಲರಿಗೂ ಪರಿಚಯಿಸಿ ಜಿಲ್ಲೆಯ ಪ್ರವಾಸೊದ್ಯಮಕ್ಕೆ ಇಂಬು ನೀಡಲು ಮುಂದಾಗಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, “ಅನಸೀನ್ ಉತ್ತರ ಕನ್ನಡ” ಎಂಬ ಶಿರ್ಷಿಕೆ ಅಡಿಯಲ್ಲಿ ಖಾಸಗಿ ಕಂಪನಿಗಳ ಮೂಲಕ, ಜಿಲ್ಲೆಯಲ್ಲಿ ಬೆಳಕಿಗೆ ಬಾರದ ಪ್ರವಾಸಿ ತಾಣಗಳ ಬಗ್ಗೆ ಅಧ್ಯಯನ ಮಾಡಿ, ಜನರಿಗೆ ಪರಿಚಯಿಸಲು ಮುಂದಾಗಿದ್ದಾರೆ. ಸ್ಥಳಿಯರ ಸಹಕಾರದಿಂದ ಈ ತಂಡ ಕಾರ್ಯೋನ್ಮೂಖವಾಗಿದ್ದು ಏಪ್ರಿಲ್ ಕೊನೆಯ ವಾರದಲ್ಲಿ ಈ ಪ್ರಾಜೆಕ್ಟ್ ಮುಕ್ತಾಯ ಆಗುವ ಸಾಧ್ಯತೆ ಇದ್ದೂ, “ಅನಸೀನ್ ಉತ್ತರ ಕನ್ನಡ” ಶಿರ್ಷಿಕೆಯ ಕಾಫಿ ಟೇಬಲ್ ಬುಕ್ ಲೋಕಾರ್ಪಣೆ ಆಗಲಿದೆ. ಕಾಫಿ ಟೆಬಲ್​ನಲ್ಲಿರುವ ಎಲ್ಲ ಮಾಹಿತಿಯನ್ನು ಉತ್ತರ ಕನ್ನಡ ಪ್ರವಾಸೋದ್ಯಮದ ವೆಬಸೈಟ್​ಗೂ ಸೇರಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: “ಪ್ರಕೃತಿಯೊಂದಿಗೆ ಓದು” ಉತ್ತರ ಕನ್ನಡ ಜಿಲ್ಲಾಧಿಕಾರಿಯ ವಿನೂತನ ಕಾರ್ಯಕ್ರಮ

ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣದ ಪ್ರವಾಸಿ ತಾಣಗಳನ್ನ ಪರಚಯಿಸುವುದರ ಜೊತೆಗೆ ಈಗ ಪ್ರಸಿದ್ಧಿ ಪಡದಿರುವ ಸ್ಥಳಕ್ಕೆ ಸರಳವಾಗಿ ಭೇಟಿ ಕೊಡುವಂತಾಗಲು, ಉತ್ತರ ಕನ್ನಡ ಜಿಲ್ಲಾಡಳತ ಮುಂದಾಗಿದ್ದು. ಜಿಲ್ಲೆಯ ಅಭಿವೃದ್ಧಿಯ ಹೊತೆಗೆ ಪ್ರವಾಸಿಗರಿಗೆ ಸಂತಸದ ವಿಷಯ ಅಂತಾನೆ ಹೇಳಬಹುದಾಗಿದೆ. ಆದಷ್ಟು ಬೇಗ ಪ್ರಾಜೇಕ್ಟ್ ಲೋಕಾರ್ಪಣೆಗೊಳ್ಳಲಿ ಎಂಬುವುದು ಸ್ಥಳಿಯರ ಆಶಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ