“ಪ್ರಕೃತಿಯೊಂದಿಗೆ ಓದು” ಉತ್ತರ ಕನ್ನಡ ಜಿಲ್ಲಾಧಿಕಾರಿಯ ವಿನೂತನ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರತಿ ಭಾನುವಾರ "ಪ್ರಕೃತಿಯೊಂದಿಗೆ ಓದು" ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.ಮೊಬೈಲ್ ಫೋನ್ ಬಳಕೆಯನ್ನು ಕಡಿಮೆ ಮಾಡಿ ಓದುವ ಹವ್ಯಾಸ ಬೆಳೆಸಲು ಈ ಕಾರ್ಯಕ್ರಮ ಪೂರಕವಾಗಿದೆ. ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕರು ಒಟ್ಟಾಗಿ ಪುಸ್ತಕ ಓದಿ, ಚರ್ಚೆ ಮಾಡುತ್ತಾರೆ.

ಪ್ರಕೃತಿಯೊಂದಿಗೆ ಓದು ಉತ್ತರ ಕನ್ನಡ ಜಿಲ್ಲಾಧಿಕಾರಿಯ ವಿನೂತನ ಕಾರ್ಯಕ್ರಮ
ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಮತ್ತು ಅವರ ಪತಿ ಪುಸ್ತಕ ಓದುತ್ತಿರುವುದು
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ವಿವೇಕ ಬಿರಾದಾರ

Updated on:Nov 25, 2024 | 2:19 PM

ಕಾರವಾರ, ನವೆಂಬರ್​ 25: ವಾರದ ರಜೆ ಬಂದರೆ ಸಾಕು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಬೇಕು ಅಂತ ಬಹುತೇಕ ಅಧಿಕಾರಿಗಳು ಬಯಸುತ್ತಾರೆ. ಆದರೆ, ಉತ್ತರ ಕನ್ನಡ (Uttar Kannada) ಜಿಲ್ಲಾಧಿಕಾರಿ ತಮ್ಮ ರಜೆ ದಿನದಲ್ಲಿ “ಪ್ರಕೃತಿಯೊಂದಿಗೆ ಓದು” (Prakrutiyondige Odu) ಎಂಬ ವಿಶೇಷ ಕಾರ್ಯಕ್ರಮ ನಡೆಸುತ್ತಿದ್ದಾರೆ. ಯುವ ಪಿಳಿಗೆಗೆ ಪುಸ್ತಕ ಮತ್ತು ಪ್ರಕೃತಿಯ ಮಹತ್ವ ತಿಳಿಸಲು ಎರಡು ಗಂಟೆ ಮೀಸಲು ಇಡುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಇವತ್ತಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆ ಆಗುತ್ತಿದೆ. ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಅಂತ ಬಹುತೇಕ ಅಧಿಕಾರಿಗಳು ಹಾಗೂ ಸಾಹಿತಿಗಳು ಹೇಳುವುದನ್ನು ನಾವು ಕೇಳಿದ್ದೆವೆ. ಆದರೆ, ಕೇವಲ ಮಾತಿನಲ್ಲಿ ಪ್ರೇರೇಪಣೆ ನೀಡುವುದರ ಬದಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಹಾಗೂ ಅವರ ಪತಿ, ಸಾರ್ವಜನಿಕ ಪಾರ್ಕ್​ಗಳಲ್ಲಿ ಜನರ ಜೊತೆ ಸೇರಿ ಪುಸ್ತಕ ಓದುವ ವಿನೂತನ ಕಾರ್ಯ ನಡೆಸುತ್ತಿದ್ದಾರೆ.

ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸಲು ಉತ್ತರ ಕನ್ನಡ ಜಿಲ್ಲಾಡಳಿತ “ಪ್ರಕೃತಿಯೊಂದಿಗೆ ಓದು” ಎಂಬ ವಿನೂತನ ಕಾರ್ಯಕ್ರಮ ನಡೆಸುತ್ತಿದೆ. ಜ್ಞಾನ ಹೆಚ್ಚಿಸಿಕೊಳ್ಳುವ ಜೊತೆಗೆ ಓದುವ ಹವ್ಯಾಸ ಹೆಚ್ಚಿಸಲು ಈ ಪ್ರಯೋಗ ಜಿಲ್ಲಾಡಳಿತ ಮಾಡುತ್ತಿದೆ. ಇದಕ್ಕಾಗಿ ಜಿಲ್ಲಾಡಳಿತ ಪ್ರತಿ ಭಾನುವಾರ ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ಗಾಂಧಿ ಪಾರ್ಕ್​ನಲ್ಲಿ ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ: ಗ್ರಾಮಸ್ಥರೇ ಉಳಿಸಿ, ಬೆಳೆಸಿದ ಅರಣ್ಯಕ್ಕೆ ಶತಮಾನ ಸಂಭ್ರಮ

ಪ್ರತಿ ಭಾನುವಾರ ಗಾಂಧಿ ಪಾರ್ಕ್​​ ಎರಡು ಗಂಟೆಗಳ ಕಾಲ ಗ್ರಂಥಾಲಯವಾಗಿ ಪರಿವರ್ತನೆಯಾಗುತ್ತದೆ. ಪಾರ್ಕ್​​ನಲ್ಲಿ ದಿನಪತ್ರಿಕೆಗಳು, ಕಥೆ, ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಇಡಲಾಗಿದೆ. ವಿದ್ಯಾರ್ಥಿಗಳು ಇಲ್ಲಿ ಬಂದು ಇಲ್ಲಿನ ಪುಸ್ತಕಗಳನ್ನು ಪಡೆದು ಓದಬಹುದು. ಜೊತೆಗೆ ತಾವು ಕೂಡ ಪುಸ್ತಕ ತಂದು ಇಲ್ಲಿ ಓದಬಹುದು. ಪುಸ್ತಕ ಓದುವುದರ ಜೊತೆಗೆ ತಾವು ಓದಿದ್ದ ಪುಸ್ತಕ ಹಾಗೂ ಓದಬೇಕಾದ ಪುಸ್ತಕದ ಬಗ್ಗೆ ಜಿಲ್ಲಾಧಿಕಾರಿಯವರ ಜೊತೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದು. ಓರ್ವ ಐಎಎಸ್ ಅಧಿಕಾರಿಯ ಜೊತೆ ಓದುವುದು ಮತ್ತು ಮುಕ್ತವಾಗಿ ಮಾತನಾಡಲು ಅವಕಾಶ ಸಿಗುತ್ತೆ ಅಂತ ಬಹಳಷ್ಟು ಯುವಕ-ಯುವತಿಯರು ಪಾರ್ಕ್​ಗೆ ಓದಲು ಬರುತ್ತಾರೆ.

ಪುಸ್ತಕ ಓದುತ್ತಿರುವ ಮಕ್ಕಳು

ರವಿವಾರ ಮೊಬೈಲ್ ಹಿಡಿದು ಕೂರುತ್ತೇವೆ, ಸಮಯ ವ್ಯರ್ಥ ಮಾಡುತ್ತೇವೆ. ಇಲ್ಲಿಗೆ ಬರುವುದರಿಂದ ನಮಗೂ ಓದುವ ಆಸಕ್ತಿ ಹೆಚ್ಚುತ್ತದೆ. ವಿದ್ಯಭ್ಯಾಸಕ್ಕೂ ಅನುಕೂಲ ಆಗಿದೆ ಎಂದು ಪಾರ್ಕ್​​ಗೆ ಓದಲು ಬಂದ ವಿದ್ಯಾರ್ಥಿಗಳು ಅಭಿಪ್ರಾಯ ತಿಳಿಸಿದ್ದಾರೆ.

ಓದಲು ಇಚ್ಚಿಸುವವರು ತಾವೇ ಪುಸ್ತಕ ತರಬಹುದು ಹಾಗೆಯೇ ಇತರೆ ಪುಸ್ತಕ ಓದಲು ಸಹ ಇಲ್ಲಿ ದೊರೆಯುತ್ತವೆ‌. ಒಟ್ಟಿನಲ್ಲಿ ಮೂರು ಹೊತ್ತು ಮೊಬೈಲ್ ಎಂದು ಗೀಳು ಅಂಟಿಸಿಕೊಂಡು ಸಮಯ ವ್ಯರ್ಥ ಮಾಡುವ ಇಂದಿನ ಯುವಜನತೆಗೆ “ಪ್ರಕೃತಿಯೊಂದಿಗೆ ಓದು” ಕಾರ್ಯಕ್ರಮ ಓದುವ ಹವ್ಯಾಸ ಹೆಚ್ಚಿಸಲು ಸಹಾಯವಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:41 pm, Mon, 25 November 24

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು