ಉತ್ತರ ಕನ್ನಡ: ಪ್ರವಾಸಿಗರ ಜೀವ ಉಳಿಸುವ ಲೈಫ್​ ಗಾರ್ಡ್ ಮೇಲೆಯೇ ಪ್ರವಾಸಿಗರಿಂದ ಹಲ್ಲೆ, ಕಾರಣವೇನು?

ಜಿಲ್ಲೆಯು ಪ್ರವಾಸಿಗರನ್ನ ಹೆಚ್ಚಾಗಿ ಸೆಳೆಯುತ್ತದೆ ಆದರೆ ಇಲ್ಲಿಗೆ ಬರುವ ಪ್ರವಾಸಿಗರು ಪ್ರದೇಶದ ಬಗ್ಗೆ ಅರಿವಿಲ್ಲದೆ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಇಂತಹ ಪ್ರವಾಸಿಗರ ಪ್ರಾಣ ಉಳಿಸುವ ಲೈಪ್​ ಗಾರ್ಡ್​ಗಳ ಮೇಲೆಯೇ ಇದೀಗ ಪ್ರವಾಸಿಗರು ಹಲ್ಲೆ ಮಾಡುತ್ತಿದ್ದಾರೆ.

ಉತ್ತರ ಕನ್ನಡ: ಪ್ರವಾಸಿಗರ ಜೀವ ಉಳಿಸುವ ಲೈಫ್​ ಗಾರ್ಡ್ ಮೇಲೆಯೇ ಪ್ರವಾಸಿಗರಿಂದ ಹಲ್ಲೆ, ಕಾರಣವೇನು?
ಉತ್ತರ ಕನ್ನಡ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 18, 2023 | 12:26 PM

ಉತ್ತರಕನ್ನಡ: ಪ್ರವಾಸೋದ್ಯಮದಿಂದಲೇ ಸಾಕಷ್ಟು ಹೆಸರುವಾಸಿಯಾಗಿರುವ ಜಿಲ್ಲೆ ಇದಾಗಿದ್ದು. ಇಲ್ಲಿಗೆ ಆಗಮಿಸುವ ದೇಶ ವಿದೇಶಿ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ. ಅದರಲ್ಲಿಯೂ ಕೊರೊನಾ ಕಡಿಮೆಯಾದ ಬಳಿಕ ಜಿಲ್ಲೆಯ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಒಂದು ಕೋಟಿಗೂ ಮೀರಿದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಮುರುಡೇಶ್ವರ, ಗೋಕರ್ಣ ಕಡಲತೀರ ನಿತ್ಯವೂ ಪ್ರವಾಸಿಗರಿಂದಲೇ ತುಂಬಿಕೊಳ್ಳುತ್ತಿದೆ. ಆದರೆ ಬಂದಂತಹ ಪ್ರವಾಸಿಗರು ಕಡಲತೀರದ ಅಪಾಯಗಳ ಬಗ್ಗೆ ತಿಳಿಯದೆ ಎಲ್ಲೆಂದರಲ್ಲಿ ಈಜಾಡುತ್ತಿದ್ದು ಅಲೆಗಳ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದಾರೆ. ಜಿಲ್ಲೆಯ ವಿವಿಧ ಕಡಲತೀರಗಳಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಹೀಗೆ ಕೊಚ್ಚಿ ಹೋಗುತ್ತಿದ್ದ 95ಕ್ಕೂ ಹೆಚ್ಚು ಪ್ರವಾಸಿಗರನ್ನು ಲೈಫ್ ಗಾರ್ಡ್​ಗಳು ರಕ್ಷಣೆ ಮಾಡಿದ್ದಾರೆ. ಕಡಲತೀರದ ಬಳಿಯೇ ಇದ್ದು ತಮ್ಮ ಜೀವವನ್ನು ಲೆಕ್ಕಿಸದೆ ಪ್ರವಾಸಿಗರ ಜೀವ ಉಳಿಸುತ್ತಿದ್ದಾರೆ ಆದರೆ ಕೆಲ ಪ್ರವಾಸಿಗರು ರಕ್ಷಣೆಗೆ ಬಂದ ಲೈಪ್ ಗಾರ್ಡ್​ನ ಮೇಲೆ ಹಲ್ಲೆ ಮಾಡುತ್ತಿರುವುದು ಖಂಡನೀಯವಾಗಿದೆ.

ಇನ್ನು ಜಿಲ್ಲೆಯ ಕಡಲತೀರಗಳತ್ತ ಆಕರ್ಷಿತರಾಗುವ ಪ್ರವಾಸಿಗರು, ಆಪತ್ತು ತಂದುಕೊಳ್ಳುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಳೆದ ಕೆಲ ವರ್ಷದ ಹಿಂದೆ ಕಡಲ ತೀರ ಹಾಗೂ ಜಲಪಾತಗಳು ಸೇರಿ ಒಟ್ಟು 12 ಕಡೆ 27 ಲೈಫ್ ಗಾರ್ಡ್​ಗಳ ನೇಮಕ ಮಾಡಿದೆ. ಹೀಗೆ ನೇಮಕವಾದ ಬಳಿಕ ಅಪಾಯಕ್ಕೆ ಸಿಲುಕಿದ ಸಾಕಷ್ಟು ಪ್ರವಾಸಿಗರನ್ನು ಕಾಪಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇನ್ನು ತಮ್ಮ ಜೀವವನ್ನೆ ಒತ್ತೆ ಇಟ್ಟು ಪ್ರವಾಸಿಗರನ್ನು ರಕ್ಷಣೆ ಮಾಡುವ ಲೈಫ್ ಗಾರ್ಡ್​ಗಳಿಗೇ ಇದೀಗ ಜೀವಭಯ ಕಾಡುವಂತಾಗಿದೆ.

ಕಡಲತೀರಗಳಿಗೆ ಈಜಾಡುತ್ತಿದ್ದವರಿಗೆ ಮುಂದೆ ಹೋಗದಂತೆ, ಆಳ ಇರುವ ಕಡೆ ತೆರಳದಂತೆ ಸೂಚಿಸಿದರೆ ಕೆಲ ಪ್ರವಾಸಿಗರು ಅವರೊಂದಿಗೆ ಜಗಳಕ್ಕೆ ಬರುತ್ತಿದ್ದಾರೆ. ಅಲ್ಲದೆ ಕಳೆದ ಎರಡು ದಿನದ ಹಿಂದೆ ಮುರುಡೇಶ್ವರದಲ್ಲಿ ಅಲೆಗೆ ಕೊಚ್ಚಿಹೋಗುತ್ತಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿದಾಗಲೂ ವಿನಾ ಕಾರಣ ಕುಡಿದ ಮತ್ತಿನಲ್ಲಿ ಲೈಫ್ ಗಾರ್ಡ್​ಗಳ ಮೇಲೆ ಹಲ್ಲೆ ಮಾಡಿ ಗಾಸಿಗೊಳಿಸಲಾಗಿದೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹೆಚ್ಚು ಪ್ರವಾಸಿಗರು ಸೇರುವ ತಾಣಗಳಲ್ಲಿ ಪೊಲೀಸರನ್ನು ನೇಮಕ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಇದನ್ನೂ ಓದಿ:ಕಾರವಾರ: ಕಡಲತೀರದಲ್ಲಿ ಕಾಣಿಸಿಕೊಂಡ ಅಪರೂಪದ ಗೂಸ್ ಬಾರ್ನಕಲ್

ಒಟ್ಟಾರೆ ಜಿಲ್ಲೆಯ ಕಡಲತೀರಗಳಲ್ಲಿ ಪ್ರವಾಸಿಗರ ರಕ್ಷಣೆಗೆ ಲೈಫ್ ಗಾರ್ಡ್​ಗಳು ಆಪತ್ ಭಾಂಧವರಾಗಿದ್ದು ಅವರ ಮೇಲಿನ ಹಲ್ಲೆ ನಿಜಕ್ಕೂ ಖಂಡನೀಯ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಿ ಹೆಚ್ಚು ಪ್ರವಾಸಿಗರು ಸೇರುವ ಸ್ಥಳಗಳಲ್ಲಿ ಪೊಲೀಸರನ್ನು ನಿಯುಕ್ತಿಗೊಳಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್