Uttara Kannada: ಉಳವಿ ಚನ್ನಬಸವೇಶ್ವರ ಜಾತ್ರೆಗೆ ಚಕ್ಕಡಿಗಳಿಗೆ ನಿರ್ಬಂಧ ಹೇರುವ ಕುರಿತು ಅಧಿಕಾರಿ ವರ್ಗಗಳಲ್ಲಿ ಚರ್ಚೆ
Karwar news: ಉಳವಿಯ ಚನ್ನಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ವಿವಿಧ ಜಿಲ್ಲೆಗಳಿಂದ ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ಜಾತ್ರೆಯಲ್ಲಿ ಭಕ್ತರು ವಿವಿಧ ಜಿಲ್ಲೆಗಳಿಂದ ಎತ್ತಿನ ಗಾಡಿ ಅಥವಾ ಚಕ್ಕಡಿ ಯಲ್ಲಿ ಬಂದು ಚನ್ನಬಸವೇಶ್ವರ ದೇವರ ದರ್ಶನ ಪಡೆಯುವುದು ವಾಡಿಕೆ.
ಉತ್ತರ ಕನ್ನಡ: ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿಯ ಚನ್ನಬಸವೇಶ್ವರ ಜಾತ್ರೆಯು (Ulavi Channabasaveshwara Fair) ಜನವರಿ 28 ರಂದು ಪ್ರಾರಂಭವಾಗಿ ಫೆಭ್ರವರಿ 8ಕ್ಕೆ ಸಂಪನ್ನಗೊಳ್ಳಲಿದೆ. ಫೆಭ್ರವರಿ 6ರಂದು ರಥೋತ್ಸವ ನಡೆಯಲಿದ್ದು, ಕೋವಿಡ್ನಂತರ ಅದ್ದೂರಿಯಾಗಿ ಈಬಾರಿ ಜಾತ್ರೆ ನಡೆಸಲು ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ. ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ವಿವಿಧ ಜಿಲ್ಲೆಗಳಿಂದ ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ಜಾತ್ರೆಯಲ್ಲಿ ಭಕ್ತರು ವಿವಿಧ ಜಿಲ್ಲೆಗಳಿಂದ ಚಕ್ಕಡಿ ಅಥವಾ ಎತ್ತಿನ ಗಾಡಿಯಲ್ಲಿ (Bullock carts) ಬಂದು ಚನ್ನಬಸವೇಶ್ವರ ದೇವರ ದರ್ಶನ ಪಡೆಯುವುದು ವಾಡಿಕೆ. ಹೀಗಾಗಿ ಈ ಜಾತ್ರೆ ಚಕ್ಕಡಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ.
ಆದರೇ ಈ ವರ್ಷ ಚಕ್ಕಡಿಯನ್ನು ಉಳವಿಗೆ ತರಲು ಜಿಲ್ಲಾಡಳಿತ ನಿಷೇಧ ಹೇರುವ ಕುರಿತು ಚರ್ಚೆ ನಡೆಸಿದೆ. ಕಾರಣ ರಾಸುಗಳಿಗೆ ಲಿಂಪಿಸ್ಕಿನ್ ಸೋಂಕು ಅಥವಾ ಚರ್ಮಗಂಟು ರೋಗ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಡಳಿತ ಚರ್ಚೆ ನಡೆಸುತ್ತಿದೆ. ಒಂದು ವೇಳೆ ಜಾತ್ರೆಗೆ ಚಕ್ಕಡಿಗಳಿಗೆ ಜಿಲ್ಲಾಡಳಿತ ನಿರ್ಭಂದ ಹೇರಿದರೆ ಭಕ್ತರು ಚಕ್ಕಡಿಯಲ್ಲಿ ಜಾತ್ರೆಗೆ ಆಗಮಿಸುವಂತಿಲ್ಲ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಉತ್ಸವದಲ್ಲಿ ತನುಜಾ ಚಿತ್ರದ ಟ್ರೈಲರ್ ಪ್ರಸಾರ; ಸಿನಿಮಾದಲ್ಲಿ ಸಚಿವ ಸುಧಾಕರ್, ಮಾಜಿ ಸಿಎಂ ಬಿಎಸ್ವೈ ಅಭಿನಯ
ಜಿಲ್ಲೆಯಲ್ಲಿ 6185 ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸಿದೆ. 285 ರಾಸುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿದೆ. ಇನ್ನು ರೋಗದಿಂದ ಕೇವಲ 2207 ಗೋವುಗಳು ಗುಣಮುಖವಾಗಿದ್ದು 3693 ಗೋವುಗಳು ಸೋಂಕು ಪೀಡಿತವಾಗಿದ್ದು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಚರ್ಮಗಂಟು ರೋಗ ಹೆಚ್ಚಳವಾಗಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಹಳಿಯಾಳ ಎಸಿ ಹಾಗೂ ದೇವಸ್ಥಾನ ಆಡಳಿತ ಮಂಡಳಿಯೊಂದಿದೆ ಚಕ್ಕಡಿಗಳಿಗೆ ನಿರ್ಭಂದ ಹೇರುವ ಕುರಿತು ಚರ್ಚೆ ನಡೆಸಿದೆ.
ವರದಿ: ವಿನಾಯಕ ಬಡಿಗೇರ, ಟಿವಿ9 ಕಾರವಾರ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Fri, 13 January 23