AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಡ್ಡ ಕುಸಿದು ಎರಡು ದಿನ ಬಂದ್ ಆಗಿದ್ದ ಕುಮಟಾ-ಸಿದ್ದಾಪುರ ನಡುವೆ ವಾಹನ ಸಂಚಾರ ಪುನರಾರಂಭ

ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಗೆ ಎಲ್ಲೆಂದರಲ್ಲಿ ಗುಡ್ಡಕುಸಿತ ಮುಂದುವರಿದಿದೆ. ಅಂಕೋಲಾದ ಶಿರೂರು, ಕುಮಟಾದ ಬರ್ಗಿ, ಕುಮಟಾ-ಸಿದ್ದಾಪುರ ಮಾರ್ಗದಲ್ಲೂ ಗುಡ್ಡ ಕುಸಿದಿತ್ತು. ಸದ್ಯ ತೆರವು ಕಾರ್ಯಾಚರಣೆ ನಡೆದಿದ್ದು ಕುಮಟಾ-ಸಿದ್ದಾಪುರ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ.

ಗುಡ್ಡ ಕುಸಿದು ಎರಡು ದಿನ ಬಂದ್ ಆಗಿದ್ದ ಕುಮಟಾ-ಸಿದ್ದಾಪುರ ನಡುವೆ ವಾಹನ ಸಂಚಾರ ಪುನರಾರಂಭ
ಕುಮಟಾ-ಸಿದ್ದಾಪುರ ಮಾರ್ಗದಲ್ಲಿ ಗುಡ್ಡ ಕುಸಿತ (ಹಳೆ ಚಿತ್ರ)
ಸೂರಜ್​, ಮಹಾವೀರ್​ ಉತ್ತರೆ
| Updated By: ಆಯೇಷಾ ಬಾನು|

Updated on: Jul 21, 2024 | 8:28 AM

Share

ಕಾರವಾರ, ಜುಲೈ.21: ಗುಡ್ಡ ಕುಸಿದು ಎರಡು ದಿನ ಬಂದ್ ಆಗಿದ್ದ ಕುಮಟಾ-ಸಿದ್ದಾಪುರ ನಡುವಿನ ವಾಹನ ಸಂಚಾರ ಪುನರಾರಂಭವಾಗಿದೆ. ರಸ್ತೆ ಮೇಲೆ ಬಿದ್ದಿದ್ದ ಮರ, ಮಣ್ಣನ್ನು ಸಿಬ್ಬಂದಿ ತೆರವುಗೊಳಿಸಿದ್ದು ಇದೀಗ ರಸ್ತೆ ಸಂಚಾರಕ್ಕೆ ತಾಲ್ಲೂಕಾಡಳಿತ ಮುಕ್ತಗೊಳಿಸಿಕೊಟ್ಟಿದೆ.

ಕುಮಟಾ-ಸಿದ್ದಾಪುರ ರಸ್ತೆಯ ಉಳ್ಳೂರುಮಠ ಸಮೀಪ ಗುಡ್ಡ ಕುಸಿದಿತ್ತು. ಕುಮಟಾ-ಸಿದ್ದಾಪುರ ರಸ್ತೆಯ ಭಯಾನಕ ಭೂಕುಸಿತ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆ ಮೇಲೆ ಸುಮಾರು 50 ಮೀಟರ್ ವ್ಯಾಪ್ತಿಯಲ್ಲಿ ಮರ, ಮಣ್ಣು ಬಿದ್ದಿತ್ತು. ಎಕರೆಗಳಷ್ಟು ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿತ್ತು. ಗುಡ್ಡ ಕುಸಿದ ಹಿನ್ನೆಲೆ ಕುಮಟಾ-ಸಿದ್ದಾಪುರ ರಸ್ತೆ ಎರಡು ದಿನ ಬಂದ್ ಮಾಡಲಾಗಿತ್ತು. ಸಿಬ್ಬಂದಿ ರಸ್ತೆ ಮೇಲೆ ಬಿದ್ದಿದ್ದ ಮರ, ಮಣ್ಣು ತೆರವುಗೊಳಿಸಿದ್ದು ಇದೀಗ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ. ಕುಮಟಾ-ಸಿದ್ದಾಪುರ ನಡುವಿನ ಸಂಚಾರ ಪುನರಾರಂಭವಾಗಿದೆ.

ಗಂಗಾವಳಿ ನದಿಗೆ ಬಿದ್ದಿದ್ದ LPG ಟ್ಯಾಂಕರ್ ಹೊರಕ್ಕೆ; ಆತಂಕ ದೂರ

ಕಳೆದ ಒಂದು ವಾರದಿಂದ ಸುರಿಯುತ್ತಿರೋ ಧಾರಕಾರ ಮಳೆಯಿಂದ ಇಡೀ ಉತ್ತರ ಕನ್ನಡವೇ ಅಲ್ಲೋಲ, ಕಲ್ಲೋಲವೇ ಆಗೋಗಿದೆ. ಅದ್ರಲ್ಲೂ ಅಂಕೋಲಾದ ಶಿರೂರು ಗುಡ್ಡ ಕುಸಿತ ಬೆಚ್ಚಿಬೀಳುವಂತೆ ಮಾಡಿತ್ತು. ಗುಡ್ಡ ಕುಸಿತದಲ್ಲಿ 10 ಮಂದಿ ಬಲಿಯಾಗಿದ್ರು. ರಸ್ತೆ ಬದಿ ನಿಂತಿದ್ದ ಲಾರಿ, LPG ಟ್ಯಾಂಕರ್​ ಲಾರಿ ನೋಡ ನೋಡ್ತಿದ್ದಂತೆಯೇ ನದಿಯ ಪಾಲಾಗಿತ್ತು. ಆದ್ರೆ ಕಳೆದ ನಾಲ್ಕು ದಿನಗಳಿಂದಲೂ ನದಿಯಲ್ಲೇ ಎಲ್​ಪಿಜಿ ಟ್ಯಾಂಕರ್ ತೆಲುತ್ತಲೇ ಇತ್ತು. ಇದು ಗ್ರಾಮಸ್ಥರಿಗರ ಆತಂಕ ತಂದೊಡ್ಡಿತ್ತು. ಇದೀಗ ಸತತ 3 ದಿನಗಳಿಂದ ಪರಿಶ್ರಮದ ಮೂಲಕ ಬರೋಬ್ಬರಿ 1,800 ಕೆಜಿ LPG ಗ್ಯಾಸ್​​ನ್ನ ನೀರಿಗೆ ಬಿಡಲಾಗಿದೆ. ಎಲ್​ಪಿಜಿ ಗ್ಯಾಸ್ ನೀರಿಗೆ ಬಿಟ್ಟು ಟ್ಯಾಂಕರ್​ನನ್ನ ಹೊರತೆಗೆಯಲಾಗಿದೆ. ಇಷ್ಟು ದಿನ 12ಕ್ಕೂ ಹೆಚ್ಚು ಗ್ರಾಮಗಳು ಆತಂತದಲ್ಲಿದ್ವು. ಇದೀಗ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇದನ್ನೂ ಓದಿ: ಬೆಂಗಳೂರು: ಮಳೆಗಾಲಕ್ಕೆ ಸಜ್ಜಾದ ಬಿಬಿಎಂಪಿ, ಸಹಾಯವಾಣಿ ತೆರೆದು ಸಕಲ ಸಿದ್ಧತೆ

ಶಿರೂರು ಗುಡ್ಡ ಕುಸಿತದಿಂದ ಬೀದಿಗೆ ಬಂದ 38ಕ್ಕೂ ಹೆಚ್ಚು ಕುಟುಂಬ!

ಶಾಲೆಯೇ ಗಂಜಿಕೇಂದ್ರವಾಗಿದೆ. ಮನೆಯನ್ನು ತೊರೆದು ಗಂಜಿಕೇಂದ್ರದಲ್ಲಿ ಆಶ್ರಯ ಪಡೆಯೋ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರಿಗೆ ಮನೆಯೇ ಇಲ್ಲದಾಗಿದ್ರೆ. ಇನ್ನು ಕೆಲವರ ಮನೆ ಭಾಗಶಃ ನಾಶವಾಗಿದೆ. ಶಿರೂರಿನಲ್ಲಿ ಗುಡ್ಡ ಕುಸಿತದಿಂದಾಗಿ ಬರೋಬ್ಬರಿ 38ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಂದಿವೆ. ಕೆಲವರು ಉಟ್ಟ ಬಟ್ಟೆಯಲ್ಲೇ ಗಂಜಿಕೇಂದ್ರಕ್ಕೆ ಬಂದಿದ್ದಾರೆ. ಉಳುವರೆ ಗ್ರಾಮಸ್ಥರು ಕಣ್ಣೀರು ಹಾಕೋ ಪರಿಸ್ಥಿತಿ ನಿರ್ಮಾಣವಾಗಿದೆ.

5 ದಿನದಿಂದ ಚಾತಕ ಪಕ್ಷಿಯಂತೆ ಮಾಲೀಕರಿಗೆ ಶ್ವಾನ ಹುಡುಕಾಟ!

ಶಿರೂರು ಗುಡ್ಡ ಕುಸಿತ ಹತ್ತಾರು ಕರುಣಾಜನಕ ಕಥೆಗಳನ್ನೇ ಹೇಳ್ತಿದೆ. ಉಳುವರೆ ಗ್ರಾಮದಲ್ಲಿ 6 ಮನೆಗಳೇ ಕೊಚ್ಚಿಹೋಗಿದ್ವು. ಇದ್ರಲ್ಲಿ ಹಲವರು ಬಲಿಯಾಗಿದ್ರು. ಇದೀಗ ಮನೆ ಮಾಲೀಕರು ಇಲ್ಲದಿದ್ರಿಂದ ಮಾಲೀಕರಿಗಾಗಿ ಶ್ವಾನ ಹುಡುಕಾಡ್ತಿರೋ ದೃಶ್ಯ ಎಂಥವರಲ್ಲೂ ಕಣ್ಣೀರು ತರಿಸುತ್ತೆ. ಕೊಚ್ಚಿ ಹೋಗಿರೋ ಮನೆಯ ಸ್ಥಳದಲ್ಲೇ ತನ್ನ ಮೂಕರೋಧನೆಯನ್ನ ಹೊರಹಾಕ್ತಿದೆ. ತನ್ನವರಿಗೆ ಮಳೆ, ಗಾಳಿ, ಚಳಿ ಎನ್ನದೇ ಬರುವಿಕೆಗಾಗಿ ಕಾಯುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ