ಬೆಂಗಳೂರು: ಮಳೆಗಾಲಕ್ಕೆ ಸಜ್ಜಾದ ಬಿಬಿಎಂಪಿ, ಸಹಾಯವಾಣಿ ತೆರೆದು ಸಕಲ ಸಿದ್ಧತೆ

ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ನೂರಾರು ಅವಾಂತರ ಸೃಷ್ಟಿಸಿದೆ. ರಾಜ್ಯ ರಾಜಧಾನಿಯಲ್ಲೂ ಈ ಬಾರಿ ಮುಂದಿನ ಮೂರು ತಿಂಗಳ ಕಾಲ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತೆ ಅಂತಾ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇತ್ತ ಮಳೆ ತಗ್ಗಿದ್ದರಿಂದ ಸೈಲೆಂಟ್ ಆಗಿದ್ದ ಪಾಲಿಕೆ, ಮಳೆಗಾಲಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಬೆಂಗಳೂರು: ಮಳೆಗಾಲಕ್ಕೆ ಸಜ್ಜಾದ ಬಿಬಿಎಂಪಿ, ಸಹಾಯವಾಣಿ ತೆರೆದು ಸಕಲ ಸಿದ್ಧತೆ
ಬಿಬಿಎಂಪಿ
Follow us
ಶಾಂತಮೂರ್ತಿ
| Updated By: ಆಯೇಷಾ ಬಾನು

Updated on: Jul 21, 2024 | 7:51 AM

ಬೆಂಗಳೂರು, ಜುಲೈ.21: ಮಳೆಗಾಲದ ಆರಂಭದಲ್ಲಿ ಸಿಲಿಕಾನ್ ಸಿಟಿಗೆ ಎಂಟ್ರಿಕೊಟ್ಟು ಅಬ್ಬರಿಸಿದ್ದ ವರುಣ, ಕೆಲಕಾಲ ಬ್ರೇಕ್ ತೆಗೆದುಕೊಂಡ ಬಳಿಕ ಮತ್ತೆ ಎಂಟ್ರಿಯಾಗೋ ಮುನ್ಸೂಚನೆ ಕೊಡ್ತಿದ್ದಾನೆ (Bengaluru Rains). ಸದ್ಯ ಕಳೆದೆರಡು ದಿನಗಳಿಂದ ಅಲ್ಲಲ್ಲಿ ದರ್ಶನ ನೀಡ್ತಿರೋ ವರುಣನ ಎಫೆಕ್ಟ್ ನಿಂದ ರಾಜಧಾನಿ ಕೂಲ್ ಕೂಲ್ ಆಗಿದೆ. ಇತ್ತ ಮಳೆ ದೂರವಾಯ್ತು ಅಂತಾ ಕೊಂಚ ನೆಮ್ಮದಿಯಾಗಿದ್ದ ಪಾಲಿಕೆಗೆ (BBMP) ಮತ್ತೆ ಮಳೆರಾಯನ ಅವಾಂತರಗಳ ಆತಂಕ ಶುರುವಾಗಿದೆ.

ಸದ್ಯ ಮಳೆಗಾಲದ ಆರಂಭದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದ್ದ ಮಳೆರಾಯನಿಂದ ಬೆಂಗಳೂರಿನ ಹಲವು ಏರಿಯಾಗಳ ಜನರು ನೀರು ನುಗ್ಗಿ ಸಂಕಷ್ಟ ಅನುಭವಿಸಿದ್ರು, ಅಲ್ಲದೇ 500 ಕ್ಕೂ ಹೆಚ್ಚು ಮರ-ಗಿಡಗಳು ಧರೆಗುರುಳಿ ಅವಾಂತರ ಸೃಷ್ಟಿಸಿತ್ತು. ಇದೆಲ್ಲದರಿಂದ ಎಚ್ಚೆತ್ತ ಪಾಲಿಕೆ ಕೆಲ ಮುಂಜಾಗ್ರತ ಕ್ರಮಗಳನ್ನ ಕೈಗೊಂಡಿದೆ. ಈಗಾಗಲೇ ರಾಜಕಾಲುವೆಗಳ ನೀರಿನ ಮಟ್ಟ ಮಾನಿಟರಿಂಗ್ ಗೆ ಟೆಕ್ನಾಲಜಿ ಬಳಸಿರೋ ಪಾಲಿಕೆ, ಮಳೆ ಅವಾಂತರಗಳ ತಡೆಗೆ ಕೆಲ ಕ್ರಮಗಳನ್ನ ಕೈಗೊಂಡಿದೆ.

ಮಳೆಗಾಲಕ್ಕೆ ಪಾಲಿಕೆ ಸಿದ್ಧತೆಗಳೇನು?

ಸದ್ಯ ಇಷ್ಟೆಲ್ಲ ಕ್ರಮ ಕೈಗೊಂಡಿರೋದಾಗಿ ಪಾಲಿಕೆ ಹೇಳಿಕೊಳ್ತಿದ್ರೂ ಕೂಡ ನಗರದ ಕೆಲವೆಡೆ ರಾಜಕಾಲುವೆಗಳು ಗಬ್ಬೆದ್ದು ನಾರುತ್ತಿವೆ. ಶಾಂತಿನಗರ ಬಸ್ ನಿಲ್ದಾಣದ ಮುಂಭಾಗ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಾಜಕಾಲುವೆ ನಿರ್ವಹಣೆಯಿಲ್ಲದೇ ಗಬ್ಬೆದ್ದು ನಾರ್ತಿದೆ. ಹೂಳು ತುಂಬಿ ನೀರು ಹರಿಯಲು ಅಡೆತಡೆ ಇರೋದು ರಾಜಕಾಲುವೆ ಅಕ್ಕಪಕ್ಕದ ಏರಿಯಾಗಳ ತಗ್ಗು ಪ್ರದೇಶದ ಮೇಲೆ ಎಫೆಕ್ಟ್ ಮಾಡೋ ಸಾಧ್ಯತೆಯಿದೆ.

ಒಟ್ಟಿನಲ್ಲಿ ಪ್ರತಿ ಬಾರೀ ಮಳೆ ಬಂದಾಗ ಒಂದಿಲ್ಲೊಂದು ಅವಾಂತರ ಸೃಷ್ಟಿಯಾಗ್ತಿರೋ ರಾಜಧಾನಿಯಲ್ಲಿ ಈ ಬಾರೀ ಮಳೆಗಾಲದ ಸಿದ್ಧತೆಗೆ 30 ಲಕ್ಷ ರೂಪಾಯಿ ಮೀಸಲಿಟ್ಟಿದ್ದು, ಮಳೆಯ ಅಬ್ಬರವನ್ನ ಪಾಲಿಕೆ ದಿಟ್ಟತನದಿಂದ ನಿರ್ವಹಿಸುತ್ತಾ ಅಥವಾ ಜನರ ಕೆಂಗಣ್ಣಿಗೆ ಗುರಿಯಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ