ಮಂಗಗಳನ್ನು ಗ್ರಾಮದಲ್ಲಿ ಬಿಟ್ಟು ಹೋಗಲು ಯತ್ನಿಸುತ್ತಿದ್ದವರಿಗೆ ಗೂಸಾ; ಸ್ಥಳೀಯರಿಂದ ಕೋತಿ ಹಿಡಿಯುವ ಜಾಲ ಪತ್ತೆ

ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗಗಳ ಹಾವಳಿಯಿಂದಾಗಿ ಅಡಿಕೆ, ಬಾಳೆ, ತೆಂಗು ಹೀಗೆ ಯಾವುದೇ ಬೆಳೆಗಳನ್ನು ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಿಗೆ ಹೊಂದಿಕೊಂಡೇ ಹತ್ತಾರು ಗ್ರಾಮಗಳಿದ್ದು, ನೂರಾರು ಕುಟುಂಬಗಳು ತುಂಡು ಭೂಮಿಯಲ್ಲಿ ಜೀವನ ಸಾಗಿಸುತ್ತಿವೆ.

ಮಂಗಗಳನ್ನು ಗ್ರಾಮದಲ್ಲಿ ಬಿಟ್ಟು ಹೋಗಲು ಯತ್ನಿಸುತ್ತಿದ್ದವರಿಗೆ ಗೂಸಾ; ಸ್ಥಳೀಯರಿಂದ ಕೋತಿ ಹಿಡಿಯುವ ಜಾಲ ಪತ್ತೆ
ಮಂಗಗಳನ್ನು ಬಿಟ್ಟು ಹೋಗಲು ಯತ್ನಿಸುತ್ತಿದ್ದ ಜಾಲವೊಂದನ್ನು ಪತ್ತೆಹಚ್ಚಿದ ಸ್ಥಳೀಯರು
Follow us
preethi shettigar
|

Updated on: Nov 05, 2021 | 11:36 AM

ಉತ್ತರ ಕನ್ನಡ: ಜಿಲ್ಲೆಯಲ್ಲಿ ಮಂಗಗಳ ಹಾವಳಿಯಿಂದಾಗಿ ಬೇಸತ್ತಿರುವ ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಇಂತಹ ಸಂದಿಗ್ಧ ಸ್ಥಿತಿಯ ನಡುವೆಯೂ ಎಲ್ಲಿಂದಲೋ ಮಂಗಗಳನ್ನು ತಂದು ಬಿಡವ ಕಾರ್ಯ ಈ ಪ್ರದೇಶದಲ್ಲಿ ನಡೆಯುತ್ತಿತ್ತು. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಮಂಗಗಳನ್ನು ಬಿಟ್ಟು ಹೋಗಲು ಯತ್ನಿಸುತ್ತಿದ್ದ ಜಾಲವೊಂದನ್ನು ಪತ್ತೆಹಚ್ಚಿದ ಸ್ಥಳೀಯರು ಅವರನ್ನು ಹಿಡಿದು ಸರಿಯಾಗಿ ಗೂಸಾ ನೀಡಿದ್ದಾರೆ. ಅಲ್ಲದೇ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗಗಳ ಹಾವಳಿಯಿಂದಾಗಿ ಅಡಿಕೆ, ಬಾಳೆ, ತೆಂಗು ಹೀಗೆ ಯಾವುದೇ ಬೆಳೆಗಳನ್ನು ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಿಗೆ ಹೊಂದಿಕೊಂಡೇ ಹತ್ತಾರು ಗ್ರಾಮಗಳಿದ್ದು, ನೂರಾರು ಕುಟುಂಬಗಳು ತುಂಡು ಭೂಮಿಯಲ್ಲಿ ಜೀವನ ಸಾಗಿಸುತ್ತಿವೆ. ಆದರೆ ಕಳೆದ ಒಂದು ವರ್ಷದಿಂದ ಈ ಭಾಗಗದಲ್ಲಿ ಮಂಗಗಳು ಏಕಾಏಕಿ ಹೆಚ್ಚಾಗಿದ್ದು, ಇದು ಸ್ಥಳೀಯರ ಚಿಂತಿಗೆ ಕಾರಣವಾಗಿತ್ತು.

ಆದರೆ ಬುಧವಾರ ಸಂಜೆ ಬೊಲೆರೊ ವಾಹನವೊಂದರಲ್ಲಿ ಪಂಜರದಲ್ಲಿ ಮಂಗಗಳನ್ನು ತುಂಬಿಕೊಂಡು ಬರುತ್ತಿರುವುದನ್ನು ಪತ್ತೆ ಹಚ್ಚಿದ ಸ್ಥಳೀಯರು ವಾಹನವನ್ನು ದೊಡ್ಮನೆ ಪಂಚಾಯಿತಿ ವ್ಯಾಪ್ತಿಯ ಚುಂಗೋಳಮಕ್ಕಿಯಲ್ಲಿ ಅಡ್ಡಗಟ್ಟಿದ್ದರು. ಬಳಿಕ ವಾಹನವನ್ನು ತಪಾಸಣೆ ನಡೆಸಿದಾಗ 30 ಕ್ಕೂ ಹೆಚ್ಚು ಮಂಗಗಳನ್ನು ಪಂಜರದಲ್ಲಿ ಕೂಡಿಟ್ಟಿರುವುದು ಪತ್ತೆಯಾಗಿದೆ. ಸಿದ್ದಾಪುರ ತಾಲ್ಲೂಕಿನ ವಾಜಗದ್ದೆಯಲ್ಲಿ ನಾಲ್ಕೈದು ದಿನಗಳ ಹಿಂದೆ ಹಿಡಿದ ಮಂಗಗಳನ್ನು ಪಂಜರದಲ್ಲಿ ಕೂಡಿಟ್ಟು ಯಾರು ಇಲ್ಲದೆ ವೇಳೆ ಘಟ್ಟ ಪ್ರದೇಶದಲ್ಲಿ ಬಿಡಲು ಆಗಮಿಸಿದ್ದಾಗ ಸಿಕ್ಕಿಬಿದ್ದಿದ್ದು ಸ್ಥಳೀಯರು ಸರಿಯಾಗಿ ಬಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ಘಟನೆಯಿಂದ ಆಕ್ರೋಶಗೊಂಡಿರುವ ಸ್ಥಳೀಯರು ಸಿದ್ದಾಪುರ ತಾಲ್ಲೂಕಿನ ಕ್ಯಾದಗಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಬಳಿ ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ದೊಡ್ಮನೆ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ಮಂಗಗಳ ಹಾವಳಿ ಹೆಚ್ಚಾಗುತ್ತಿದೆ. ಮನೆಗಳಿಗೆ ನೇರವಾಗಿ ನುಗ್ಗುವ ಮಂಗಗಳು ಮಾಡಿಟ್ಟ ಅಡಿಗೆಗಳನ್ನೇ ಹೊತ್ತುಯ್ಯುತ್ತಿವೆ. ಅಲ್ಲದೆ ಓಡಿಸಲು ಬಂದವರ ಮೇಲೆ ದಾಳಿ ಮಾಡಿದ ಉದಾಹರಣೆಗಳಿದೆ. ತೋಟಗಳಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಶಿಂಗಾರಗಳನ್ನೆ ಹರಿದು ತಿನ್ನುವ ಮಂಗಗಳು, ಬಾಳೆ ಸುಳಿಯೋಡೆಯುವ ಮುನ್ನವೇ ಕಿತ್ತು ತಿನ್ನುತ್ತಿವೆ. ಏಲಕ್ಕಿ, ತೆಂಗು ಹೀಗೆ ಯಾವುದೇ ಬೆಳೆ ಬೆಳೆಯಲು ಬಿಡುತ್ತಿಲ್ಲ. ಮೊದಲೇ ಹವಮಾನ ವೈಪರಿತ್ಯದಿಂದಾಗಿ ಬೆಳೆಗಳ ಇಳುವರಿ ಇಲ್ಲದಂತಾಗಿದ್ದು, ಇದೀಗ ಮಂಗಗಳ ಹಾವಳಿಯಿಂದಾಗಿ ಲಕ್ಷಾಂತರ ರೂ. ಬೆಳೆ ಹಾನಿಯಾಗಿ ಬದುಕುವುದೇ ಕಷ್ಟವಾಗಿದೆ ಎಂದು ರೈತ ಅನಂತ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಪಟ್ಟಣ ಸೇರಿದಂತೆ ವಿವಿಧ ಭಾಗಗಳಲ್ಲಿ ಲೂಟಿ ತಾಳಲಾಗದ ಮಂಗಗಳನ್ನು ದಟ್ಟ ಅರಣ್ಯವಿರುವ ದೊಡ್ಮನೆ ಘಟ್ಟಗಳಿಗೆ ತಂದು ಬಿಡವ ಬಗ್ಗೆ ಹಲವು ದಿನಗಳಿಂದ ಅನುಮಾನಗಳಿದೆ. ಇದರಿಂದಲೇ ಮಂಗಗಳು ಕಾಡು ಬಿಟ್ಟು ನಾಡಿಗೆ ಬರಲು ಪ್ರಾರಂಭಿಸಿವೆ. ಈ ಬಗ್ಗೆ ನಿಗಾವಹಿಸಬೇಕಿದ್ದ ಅರಣ್ಯ ಇಲಾಖೆ ಕೂಡ ಕಣ್ಮುಚ್ಚಿ ಕುಳಿತಿದ್ದು ಕೂಡಲೇ ಇದನ್ನು ತಡೆಯಲು ಮುಂದಾಗದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ

ವರದಿ: ಮಂಜುನಾಥ್ ಪಟಗಾರ್

ಕಾಫಿ ನಾಡಿನಲ್ಲಿ ಮೂವರ ಮೇಲೆ ಮಂಗನ ದಾಳಿ; ರೇಗಿಸಿದವನ ಅಟ್ಟಾಡಿಸಿ ಕೈ ಕಚ್ಚಿದ ಕೋತಿ

Monkeys Killed: ಕೋಲಾರದಲ್ಲಿ ಕೋತಿಗಳ ಮಾರಣಹೋಮ, ವಿಷ ಉಣಿಸಿ ಕೊಂದಿರುವ ಶಂಕೆ

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್