Monkeys Killed: ಕೋಲಾರದಲ್ಲಿ ಕೋತಿಗಳ ಮಾರಣಹೋಮ, ವಿಷ ಉಣಿಸಿ ಕೊಂದಿರುವ ಶಂಕೆ

ಸತ್ತ ಕೋತಿಗಳಿದ್ದ ಚೀಲಗಳನ್ನು ದುಷ್ಕರ್ಮಿಗಳು ಕೋಲಾರ ಹೊರವಲಯದ ಟಮಕ ಬಳಿ ಬಿಸಾಡಿ ಪರಾರಿಯಾಗಿದ್ದಾರೆ. ಕೋತಿಗಳ ಸಾವಿಗೆ ಕಾರಣ ತಿಳಿಯಲು ಅರಣ್ಯ ಇಲಾಖೆ ಕಡೆಯಿಂದ ಈಗ ಮರಣೋತ್ತರ ಪರೀಕ್ಷೆ ನಡೆದಿದೆ. ಕೋಲಾರ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

Monkeys Killed: ಕೋಲಾರದಲ್ಲಿ ಕೋತಿಗಳ ಮಾರಣಹೋಮ, ವಿಷ ಉಣಿಸಿ ಕೊಂದಿರುವ ಶಂಕೆ
ಕೋಲಾರದಲ್ಲಿ ಕೋತಿಗಳ ಮಾರಣಹೋಮ, ವಿಷ ಉಣಿಸಿ ಕೊಂದಿರುವ ಶಂಕೆ
Follow us
TV9 Web
| Updated By: Digi Tech Desk

Updated on:Sep 30, 2021 | 12:32 PM

ಕೋಲಾರ: ಹಾಸನ ಜಿಲ್ಲೆಯಲ್ಲಿ ಕೋತಿಗಳ ಮಾರಣಹೋಮ ಪ್ರಕರಣ ಮರೆಯುವ ಮುನ್ನವೇ ಕೋಲಾರದಲ್ಲಿ ಒಂದು ಹೃದಯ ವಿದ್ರಾವಕ ಘಟನೆ ನಡೆದಿದೆ.‌೧೬ ಕೋತಿಗಳಿಗೆ ವಿಷ ಹಾಕಿ ಯಾರು ಕೀಡಿಗೇಡಿಗಳು ಸಾಯಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ಪಾಪಿಗಳ ಕೃತಕ್ಕೆ ಮೂಕ ಕೋತಿಗಳು ಅಸುನೀಗಿವೆ.

ಯಾರೂ ಕೀಡಿಗೇಡಿಗಳು‌ ಕೋತಿಗಳನ್ನು ಸಾಯಿಸಿ ಚೀಲಗಳಲ್ಲಿ ಬಿಸಾಡಿರುವುದು, ಮತ್ತೊಂದಡೆ ಧಾರಣವಾಗಿ ಮೃತಪಟ್ಟಿರುವ ಕೋತಿಗಳನ್ನು ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು, ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ. ಹೌದು ಕೋಲಾರದ ಟಮಕ ಬಳಿ ಯಾರು ಕೀಡಿಗೇಡಿಗಳು16 ಕೋತಿಗಳಿಗೆ ಆಹಾರದಲ್ಲಿ ವಿಷ ಉಣಿಸಿ ಕೊಲ್ಲುವ ಮೂಲಕ ವಿಕೃತಿಯನ್ನು ಮೆರದಿದ್ದಾರೆ.ಸತ್ತ ಕೋತಿಗಳನ್ನು ಕೀಡಿಗೇಡಿಗಳು ಚೀಲದಲ್ಲಿ ತುಂಬಿ ರಸ್ತೆ ಬದಿ ಬಿಸಾಡಿ ಹೋಗಿದ್ದಾರೆ.

ಸತ್ತಿರುವ ಕೋತಿಗಳಲ್ಲಿ ನಾಲ್ಕು ಪುಟ್ಟ ಮರಿಗಳು ಸೇರಿದಂತೆ 16 ಕೋರಿಗಳು ಪಾಪಿಗಳ ಕೃತ್ಯಕ್ಕೆ ಪ್ರಾಣ ತೆತ್ತಿವೆ. ಇತ್ತೀಚಿಗೆ ಇದೇ ರೀತಿಯ ಪ್ರಕರಣವೊಂದು ಹಾಸನ ಜಿಲ್ಲೆಯಲ್ಲಿ ನಡೆದಿದ್ದು.‌ ಸುಮಾರು 40 ಕ್ಕೂ ಹೆಚ್ಚು ಕೋತಿಗಳು ಅಸುನೀಗಿದವು.ಈ ಪ್ರಕರಣ ಇನ್ನು ಜನರ ಮನಸ್ಸಿನಿಂದ ಮಾಸುವ ಮುನ್ನವೇ ಕೋಲಾರದಲ್ಲಿ ವೊಂದು ಇಂತಹವುದೇ ಪ್ರಕರಣ ನಡೆದಿರುವುದು ಬೇಸರ ತಂದಿದೆ.

ಇನ್ನು ಆಂಜನೇಯ,ಹನುಮಂತ, ಶ್ರೀರಾಮನ‌‌ ಭಂಟ ಎಂದು‌ ಪೂಜಿಸಲ್ಪಡುವ ಮಂಗಗಳನ್ನು‌ ಮನುಷ್ಯ ಈ ರೀತಿ‌ ಆಹಾರದಲ್ಲಿ ವಿಷ ಹಾಕಿ ಸಾಯಿಸಿರುವುದನ್ನು ನೋಡಿದರೆ ಮಾನವೀಯ ಮೌಲ್ಯಗಳು ನಶಿಸಿಹೋಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಇನ್ನು ಮಂಗಗಳು ಸತ್ತಿರುವ ವಿಷಯ ಅರಣ್ಯ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ‌‌ ನಡೆಸಿದರು. ಅಲ್ಲಿಂದ ಕೋತಿಗಳನ್ನು ಕೋಲಾರದ ಹೊರವಲಯದಲ್ಲಿರುವ ಮಡೇರಹಳ್ಳಿ ಅರಣ್ಯ ಇಲಾಖೆಗೆ ಸಸ್ಯವನಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.‌

ಪಶು ಸಂಗೋಪನಾ ಇಲಾಖೆಯ ವೈದ್ಯರು ಸತ್ತಿರುವ ಕೋತಿಗಳ ಪರಿಶೀಲಿಸಿ ಅದರಿಂದ ರಕ್ತ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಯಾರೂ ಕೀಡಿಗೇಡಿಗಳು ಆಹಾರದಲ್ಲಿ ವಿಷ ಹಾಕಿರಬಹುದೆಂದು ಶಂಕಿಸಲಾಗಿದೆ. ಇನ್ನು ಅರಣ್ಯ ಸಿಬ್ಬಂದಿ ಸತ್ತಿರುವ ಕೋತಿಗಳನ್ನು ಅಂತ್ಯ ಸಂಸ್ಕಾರವನ್ನು ಮಾಡಿದ್ದಾರೆ. ಸದ್ಯ ಕೋತಿಗಳ ಈ ಮಾರಣ ಹೋಮ ಮಾಡಿರುವವರ ಕುರಿತು ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ‌ಮಾಡಿ ಬಂದಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆ ಏನೇ ಆಗಲಿ ಕೋತಿಗಳ ಕೊಲೆಗಾರರು ಯಾರು ಎಂಬುದು ಶೀಘ್ರವಾಗಿ ಪತ್ತೆಯಾಗಬೇಕಿದೆ. ನಾಗರೀಕ ಸಮಾಜದಲ್ಲಿ ಆಂಜನೇಯನಿಗೆ ಪೂಜ್ಯಭಾವನೆ ಇದೆ.ಆ ರಾಮನ ಭಕ್ತ ಹನುಮಂತನ ನೆನೆಯದ ಭಕ್ತರೇ ಇಲ್ಲ. ಒಂದೆಡೆ ಪೂಜಿಸಲ್ಪಡುವ ಹನುಮಾನ್ ಗೆ ನಿಜ ಜೀವನದಲ್ಲಿ ಮಾನವರೇ ನಿರ್ದಾಕ್ಷಿಣ್ಯವಾಗಿ ಕೊಲ್ಲುವ ಮೂಲಕ ಮಾನವೀಯ ಮೌಲ್ಯಗಳನ್ನು ಸಹ ಕೊಲ್ಲುತಿರೋದು ವಿಪರ್ಯಾಸ.

ಇದನ್ನೂ ಓದಿ: ಹಾಸನ: ಮಂಗಗಳ ಮಾರಣಹೋಮ ಪ್ರಕರಣಕ್ಕೆ ತಿರುವು; ಐವರನ್ನು ವಶಕ್ಕೆ ಪಡೆದ ಪೊಲೀಸರು

ಇದನ್ನೂ ಓದಿ: 39 ಮಂಗಗಳ ಮಾರಣಹೋಮದ ಹಿಂದೆ ಯಾರಿದ್ದರೂ ಬಿಡಬೇಡಿ; ತನಿಖಾಧಿಕಾರಿಗೆ ಹಾಸನ ಜಿಲ್ಲಾಧಿಕಾರಿ ಸೂಚನೆ

Published On - 10:11 am, Wed, 29 September 21