TV9 Kannada News Live: ಫ್ಲ್ಯಾಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ, ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾವು; ಇಂದಿನ ಪ್ರಮುಖ ಸುದ್ದಿಗಳು

Karnataka News Today Live Updates:ಇಂದಿನ ಪ್ರಮುಖ ಸುದ್ದಿಗಳ ಸಂಗ್ರಹ: ಬೆಂಗಳೂರಿನಲ್ಲಿ ಫ್ಲಾಟ್ ವಂಚನೆ, ಶಾಲೆ ಮಗುವಿನ ಸಾವು; ಚಿಕ್ಕಮಗಳೂರಿನಲ್ಲಿ ಮಾನವ ಕಳ್ಳಸಾಗಣೆ, ಕೋಲಾರದಲ್ಲಿ ಚಿನ್ನಾಭರಣ ಕಳವು ಪ್ರಕರಣಗಳು ವರದಿಯಾಗಿವೆ. ಇದಲ್ಲದೆ, ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇರಾನ್ ಸಂಘರ್ಷದ ಕುರಿತು ಮಹತ್ವದ ಮಾಹಿತಿ ಇಲ್ಲಿದೆ. ಅಪರಾಧ, ಪ್ರಾದೇಶಿಕ ಹಾಗೂ ಅಂತರಾಷ್ಟ್ರೀಯ ಘಟನೆಗಳ ಕ್ಷಣಕ್ಷಣದ ಅಪ್ಡೇಟ್‌ಗಳಿಗಾಗಿ ಈ ವರದಿಯನ್ನು ಓದಿ.

TV9 Kannada News Live: ಫ್ಲ್ಯಾಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ, ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾವು; ಇಂದಿನ ಪ್ರಮುಖ ಸುದ್ದಿಗಳು
ಟಿವಿ9 ಕನ್ನಡ ಲೈವ್

Updated on: Jul 16, 2026 | 10:08 AM

LIVE NEWS & UPDATES

  • 16 Jul 2026 10:08 AM (IST)

    ರೀಲ್ಸ್ ಸ್ಟಾರ್ ‘ಅಮುಕು ಡುಮುಕು’ ಮಂಜು ಕುಡಿದು ಬಾರ್ ಬಿಲ್ ಕೊಡದೆ ಮಹಿಳಾ ಸಿಬ್ಬಂದಿಗೆ ಕಾಟ

    ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಹಾಗೂ ವಿಡಿಯೋಗಳ ಮೂಲಕವೇ ಗುರುತಿಸಿಕೊಂಡಿದ್ದ ಪ್ರಖ್ಯಾತ ಇನ್‌ಫ್ಲುಯೆನ್ಸರ್ ಮಂಜು ಅಲಿಯಾಸ್ ‘ಅಮುಕು ಡುಮುಕು’ ಮತ್ತು ಆತನ ಸ್ನೇಹಿತರ ವಿರುದ್ಧ ಬೆಂಗಳೂರಿನಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ. ರೆಸ್ಟೋ ಬಾರ್‌ಗೆ ಹೋಗಿ ಮದ್ಯ ಹಾಗೂ ಊಟ ಸವಿದು ಬಿಲ್ ನೀಡಲು ನಿರಾಕರಿಸಿದಲ್ಲದೆ, ಅಲ್ಲಿನ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

  • 16 Jul 2026 09:49 AM (IST)

    ಕೊಡಗು ಹೋಂಸ್ಟೇ ಅತ್ಯಾಚಾರ ಪ್ರಕರಣ: ಮಾಲೀಕ ವಿಶಾಲ್ ಪೊನ್ನಪ್ಪಗೆ ಬಿಗ್ ರಿಲೀಫ್

    ಕೊಡಗು ಜಿಲ್ಲೆಯ ಹೋಂಸ್ಟೇ ಒಂದರಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಬಿಗ್ ಟ್ವಿಸ್ಟ್ ನೀಡಿದೆ. ಪ್ರಕರಣದ ಆರೋಪ ಎದುರಿಸುತ್ತಿದ್ದ ಹೋಂಸ್ಟೇ ಮಾಲೀಕನ ಬಂಧನ ಹಾಗೂ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುವುದು ಸಂಪೂರ್ಣ ಅಕ್ರಮ ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠವು ತೀರ್ಪು ನೀಡಿದೆ.

  • 16 Jul 2026 09:23 AM (IST)

    ಮನೆಗೆ ಬಂದು ಉಪಹಾರ ಸವಿದು 5 ಲಕ್ಷದ ಚಿನ್ನದ ಸರ ಎಗರಿಸಿದ ಸುಶೀಲಮ್ಮ ಬಂಧನ

    ಮನೆಗೆ ನೆಂಟಸ್ತನಕ್ಕೆ ಬಂದು ಉಪಹಾರ ಸವಿದು, ಅದೇ ಮನೆಯ ಬೀಗತಿಯ ಕುತ್ತಿಗೆಯಲ್ಲಿದ್ದ 5 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಕಿರಾತಕಿ ಸುಶೀಲಮ್ಮ ಎಂಬಾಕೆಯನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ಈ ವಿಚಿತ್ರ ಹಾಗೂ ರೋಚಕ ಕಳ್ಳತನ ನಡೆದಿತ್ತು.

  • 16 Jul 2026 09:22 AM (IST)

    ಹಣಕ್ಕಾಗಿ ಆಫ್ರಿಕಾದ ಸೆನಗಲ್ ದೇಶಕ್ಕೆ ಮಗಳನ್ನೇ ಮಾರಿದ ಪೋಷಕರು

    ಹಣದ ಆಸೆಗಾಗಿ ಹೆತ್ತ ಮಗಳನ್ನೇ ಪಶ್ಚಿಮ ಆಫ್ರಿಕಾದ ಸೆನಗಲ್ ದೇಶಕ್ಕೆ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ ಅಮಾನವೀಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪವಿರುವ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಮತ್ತು ರಾಜಶೇಖರ್ ಎಂಬುವವರೇ ಮಗಳು ನಂದಿತಾ (20) ಇಂಟರ್ನ್ಯಾಷನಲ್ ದಂಧೆಗೆ ಮಾರಿದ ತಂದೆ-ತಾಯಿ. ಹೆಚ್ಚಿನ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

  • 16 Jul 2026 09:19 AM (IST)

    ಕ್ಲಾಸ್ ರೂಮ್‌ನಲ್ಲೇ ಕುಸಿದು ಬಿದ್ದು 5ನೇ ತರಗತಿ ವಿದ್ಯಾರ್ಥಿ ಸಾವು

    ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಅರ್ಹನ್ ಪಾಷಾ (12) ಎಂಬ ಬಾಲಕ ಕ್ಲಾಸ್ ರೂಮ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದು, ಶಾಲಾ ಸಿಬ್ಬಂದಿಯ ಘೋರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.

Breaking News Today Live Updates in Kannada: ರಾಜಧಾನಿಯಲ್ಲಿ ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚಿಸಿರುವ ಗಂಭೀರ ಆರೋಪದ ಮೇಲೆ ತಾಯಿ ಹಾಗೂ ಮಗಳ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಅರ್ಹನ್ ಪಾಷಾ (12) ಎಂಬ ಬಾಲಕ ಕ್ಲಾಸ್ ರೂಮ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಇಂದು ದೆಹಲಿಯಲ್ಲಿ ಸಿಎಂ ಡಿಕೆ ಶಿವಕುಮಾರ್​ ಅವರು ಹೈಕಮಾಂಡ್​​​ನ್ನು ಭೇಟಿಯಾಗಿ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮನೆಗೆ ನೆಂಟಸ್ತನಕ್ಕೆ ಬಂದು ಉಪಹಾರ ಸವಿದು, ಅದೇ ಮನೆಯ ಬೀಗತಿಯ ಕುತ್ತಿಗೆಯಲ್ಲಿದ್ದ 5 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದ ಕಿರಾತಕಿ ಸುಶೀಲಮ್ಮ ಎಂಬಾಕೆಯನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲ್ಲೂರು ಗ್ರಾಮದಲ್ಲಿ ಈ ವಿಚಿತ್ರ ಹಾಗೂ ರೋಚಕ ಕಳ್ಳತನ ನಡೆದಿತ್ತು. ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷವು ರಕ್ತಸಿಕ್ತ ಕ್ರಾಂತಿಗೆ ಕಾರಣವಾಗಿದೆ. ಕೇವಲ 24 ಗಂಟೆಗಳಲ್ಲಿ ಇರಾನ್ ಮೇಲೆ 3ನೇ ಬಾರಿಗೆ ಭೀಕರ ವಾಯುದಾಳಿ ನಡೆಸಿರುವ ಅಮೆರಿಕ ಪಡೆಗಳು, ಇರಾನ್ ಬಂದರುಗಳಿಗೆ ಕಠಿಣ ನೌಕಾ ದಿಗ್ಬಂಧನ ವಿಧಿಸಿವೆ. ಹೀಗೆ ಇಂದಿನ ಪ್ರಮುಖ ಸುದ್ದಿಗಳ ಕ್ಷಣಕ್ಷಣದ ಮಾಹಿತಿ ಇಲ್ಲಿದೆ ನೋಡಿ

Published On - 9:19 am, Thu, 16 July 26

Follow Us