AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ಹಣಕ್ಕಾಗಿ‌ 20 ವರ್ಷದ ಮಗಳನ್ನೇ ಪಶ್ಚಿಮ ಆಫ್ರಿಕಾದಲ್ಲಿ ಮಾರಾಟ ಮಾಡಿದ ಪೋಷಕರು!

Chikkamagaluru news: ಚಿಕ್ಕಮಗಳೂರು ಮೂಲದ 20 ವರ್ಷದ ನಂದಿತಾ ಎಂಬ ಯುವತಿಯನ್ನು ಸೆನೆಗಲ್‌ನಲ್ಲಿ ಆಕೆಯ ಪೋಷಕರೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸದ್ಯ ಯುವತಿಯನ್ನು ರಕ್ಷಿಸಲಾಗಿದೆ. ಪ್ರಕರಣದ ಕುರಿತು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘ ಎಸ್ಪಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದೆ.

ಚಿಕ್ಕಮಗಳೂರು: ಹಣಕ್ಕಾಗಿ‌ 20 ವರ್ಷದ ಮಗಳನ್ನೇ ಪಶ್ಚಿಮ ಆಫ್ರಿಕಾದಲ್ಲಿ ಮಾರಾಟ ಮಾಡಿದ ಪೋಷಕರು!
ಮಗಳನ್ನೇ ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ತಾಯಿ ಕ್ರಾಂತಿ (ಎಡ ಚಿತ್ರ) ಹಾಗೂ ಹಕ್ಕಿಪಿಕ್ಕಿ ಬುಡಕಟ್ಟು ಸಂಘದ ಪತ್ರದ ಪ್ರತಿImage Credit source: tv9
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Jul 16, 2026 | 9:09 AM

Share

ಮುಖ್ಯಾಂಶಗಳು

  • ಸೆನೆಗಲ್‌ನಲ್ಲಿ ಯುವತಿ ಮಾರಾಟ ಆರೋಪ
  • ಎಸ್ಪಿಗೆ ಹಕ್ಕಿಪಿಕ್ಕಿ ಸಂಘ ದೂರು
  • ತನಿಖೆಗೆ ಆಗ್ರಹಿಸಿದ ಬುಡಕಟ್ಟು ಸಂಘ

ಚಿಕ್ಕಮಗಳೂರು, ಜುಲೈ 16: ಚಿಕ್ಕಮಗಳೂರು (Chikmagalur) ಜಿಲ್ಲೆಯ ಹಕ್ಕಿಪಿಕ್ಕಿ ಕಾಲೋನಿಯ ಯುವತಿಯೊಬ್ಬಳನ್ನು ಹಣಕ್ಕಾಗಿ ಪೋಷಕರೇ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಹಾಗೂ ರಾಜಶೇಖರ್ ಅವರ ಪುತ್ರಿ ನಂದಿತಾ (20) ನಾಲ್ಕು ತಿಂಗಳ ಹಿಂದೆ ಕುಟುಂಬದೊಂದಿಗೆ ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಕ್ಕೆ ತೆರಳಿದ್ದರು.

7 ಲಕ್ಷ ರೂ.ಗೆ ವೇಶ್ಯಾವಾಟಿಕೆ ದಂಧೆಗೆ ಮಾರಾಟ!

ಸುಮಾರು 10 ದಿನಗಳ ಹಿಂದೆ ನಂದಿತಾಳನ್ನು 7 ಲಕ್ಷ ರೂಪಾಯಿಗೆ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ನಂದಿತಾ ಕಷ್ಟಪಟ್ಟು ಪರಿಚಯದವರನ್ನು ಸಂಪರ್ಕಿಸಿ, ತನ್ನನ್ನು ಪೋಷಕರೇ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಳು ಎನ್ನಲಾಗಿದೆ. ನಡೆದಿರುವ ಅನ್ಯಾಯವನ್ನು ವಿವರಿಸಿ ವಿಡಿಯೋ ಸಂದೇಶವನ್ನೂ ರವಾನಿಸಿದ್ದಳು ಎಂದು ಮೂಲಗಳು ತಿಳಿಸಿವೆ.

ರಾಯಭಾರ ಕಚೇರಿ ನೆರವಿನಿಂದ ಯುವತಿಯ ರಕ್ಷಣೆ

ಈ ಮಾಹಿತಿ ಭಾರತೀಯ ರಾಯಭಾರ ಕಚೇರಿ (Indian Embassy) ಗಮನಕ್ಕೆ ಬಂದ ಬಳಿಕ, ಸ್ಥಳೀಯರ ಸಹಕಾರ ಮತ್ತು ಸೆನೆಗಲ್ ಪೊಲೀಸರ ನೆರವಿನಿಂದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಇದೇ ವೇಳೆ, ಮಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ಹೇಳಿ ಪೋಷಕರು ಸಂಬಂಧಿಕರಿಗೆ ಬೇರೆ ಕಥೆ ಹೇಳಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಯುವತಿಯ ರಕ್ಷಣೆಯಾದ ವಿಷಯ ತಿಳಿದ ಬಳಿಕ ಪೋಷಕರು ಭಾರತಕ್ಕೆ ಮರಳಿರುವುದಾಗಿ ತಿಳಿದುಬಂದಿದೆ.

ಹಕ್ಕಿಪಿಕ್ಕಿ ಬುಡಕಟ್ಟು ಸಂಘದದಿಂದ ಎಸ್​ಪಿಗೆ ಪತ್ರ

ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಜುಲೈ 15ರಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅವರಿಗೆ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದೆ. ಗಿಡಮೂಲಿಕೆ ವ್ಯಾಪಾರದ ಹೆಸರಿನಲ್ಲಿ ಕ್ರಾಂತಿ ಹಾಗೂ ರಾಜಶೇಖರ್ ತಮ್ಮ ಮಗಳನ್ನು ಆಫ್ರಿಕಾದ ಸೆನೆಗಲ್ ದೇಶದಲ್ಲಿ ಮಾರಾಟ ಮಾಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದ್ದು, ಈ ಘಟನೆ ಹಕ್ಕಿಪಿಕ್ಕಿ ಸಮುದಾಯಕ್ಕೆ ಕಪ್ಪು ಚುಕ್ಕೆ. ಸಮಾಜದ ಗೌರವಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಸಂಘ ಹೇಳಿದೆ. ಇಂತಹ ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೇರಿದಂತೆ ಅನ್ವಯವಾಗುವ ಕಾನೂನುಗಳಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಇದನ್ನೂ ಓದಿ: ಅರ್ಧ ಶತಕ ಕಳೆದರೂ ಈ ಜನಾಂಗಕ್ಕೆ ಸಿಕ್ಕಿಲ್ಲ ಸೂರು! ಮೂಲಭೂತ ಹಕ್ಕುಗಳಿಲ್ಲದೆ ಗುಡಿಸಲಲ್ಲಿ ಬದುಕುತ್ತಿದೆ ಹಕ್ಕಿಪಿಕ್ಕಿ ಸಮುದಾಯ

ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶವನ್ನು ಹೊರತಂದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಘವು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ
ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಡಿಕೆ ಶಿವಕುಮಾರ್
‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಡಿಕೆ ಶಿವಕುಮಾರ್