ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ವಿರುದ್ಧ ಸಿಕ್ಕಿದೆ ಅನೇಕ‌ ಸಾಕ್ಷ್ಯ, ಶಾಮೀಲಾಗಿದ್ದನ್ನು ಪುಷ್ಟೀಕರಿಸುವ ಅಂಶಗಳು ಇಲ್ಲಿವೆ

ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ ನಾಗೇಂದ್ರರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ, ಹಗರಣದಲ್ಲಿ ಅವರು ಶಾಮೀಲಾಗಿರುವುದಕ್ಕೆ ಸಂಬಂಧಿಸಿ ತನಿಖಾ ಸಂಸ್ಥೆಗಳಿಗೆ ಅನೇಕ ಸಾಕ್ಷ್ಯಗಳು ದೊರೆತಿರುವುದು ತಿಳಿದುಬಂದಿದೆ. ಅವುಗಳು ಯಾವುವೆಲ್ಲ ಎಂಬ ಮಾಹಿತಿ ಇಲ್ಲಿದೆ.

ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ವಿರುದ್ಧ ಸಿಕ್ಕಿದೆ ಅನೇಕ‌ ಸಾಕ್ಷ್ಯ, ಶಾಮೀಲಾಗಿದ್ದನ್ನು ಪುಷ್ಟೀಕರಿಸುವ ಅಂಶಗಳು ಇಲ್ಲಿವೆ
ನಾಗೇಂದ್ರ
Follow us
|

Updated on: Jul 12, 2024 | 10:30 AM

ಬೆಂಗಳೂರು, ಜುಲೈ 12: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಗಮ ಹಗರಣದಲ್ಲಿ ಮಾಜಿ ಸಚಿವ, ಶಾಸಕ‌ ಬಿ ನಾಗೇಂದ್ರ ವಿರುದ್ದ ತನಿಖಾ ಸಂಸ್ಥೆಗಳಿಗೆ ಅನೇಕ‌ ಸಾಕ್ಷ್ಯಗಳು ಸಿಕ್ಕಿವೆ ಎಂಬುದು ತಿಳಿದುಬಂದಿದೆ. ಹಗರಣದ ತನಿಖೆ ನಡೆಸುತ್ತಿರುವ ಎಸ್​ಐಟಿ, ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನಾಗೇಂದ್ರ ವಿರುದ್ಧ ಸಾಕಷ್ಟು ಸಾಕ್ಷ್ಯ ಕಲೆ ಹಾಕಿದ್ದಾರೆ. ಈ ಪೈಕಿ ಅನೇಕ ಸಂಗತಿಗಳು ಹಗರಣದಲ್ಲಿ ನಾಗೇಂದ್ರ ಪಾತ್ರ ಇದೆ ಎಂಬುದನ್ನು ಪುಷ್ಟೀಕರಿಸಿವೆ.

ಈ ಸಾಕ್ಷ್ಯಗಳ ಆಧಾರದಲ್ಲೇ ಇ.ಡಿ ಮೂರು ಬಾರಿ ನಾಗೇಂದ್ರಗೆ ವಿಚಾರಣೆಗೆ ಬುಲಾವ್ ನೀಡಿತ್ತು ಮತ್ತು ಈಗ ವಶಕ್ಕೆ ಪಡೆಡುಕೊಂಡಿದೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಸಭೆಯೇ ನಾಗೇಂದ್ರ ವಿರುದ್ಧದ ಮೊದಲ ಹಾಗೂ ಪ್ರಮುಖ ಸಾಕ್ಷಿ ಎನ್ನಲಾಗಿದೆ.

ನಾಗೇಂದ್ರ ವಿರುದ್ಧದ ಸಾಕ್ಷ್ಯಗಳು

  • ಆರೋಪಿ ಪದ್ಮನಾಭ್ ವಿಚಾರಣೆಯಲ್ಲಿ ನಾಗೇಂದ್ರ ಸೂಚನೆಯಂತೆ ಅಕೌಂಟ್ ಓಪನ್ ಎಂಬ ಹೇಳಿಕೆ.
  • ಶಾಂಗ್ರಿಲಾ ಹೋಟೆಲ್ ಮೀಟಿಂಗ್ ಗೆ ನಾಗೇಂದ್ರ ಬಂದು ಹೋಗಿರೋ ಸಿಸಿಟಿವಿ ದೃಶ್ಯಾವಳಿಗಳು.
  • ಹೋಟೆಲ್​​ನಲ್ಲಿ‌ ನಡೆದ ಮಹಜರು ಪ್ರಕ್ರಿಯೆಯಿಂದ ಅನೇಕ ಸಾಕ್ಷಿ ಲಭ್ಯ.
  • ನಾಗೇಂದ್ರ ಪಿಎ ದೇವೆಂದ್ರಪ್ಪ, ಆಪ್ತ ನೆಕ್ಕುಂಟಿ ನಾಗರಾಜ್, ಸಂಬಂಧಿ ನಾಗೇಶ್ವರ್ ರಾವ್ ಈ ಸಭೆಯಲ್ಲಿ ಭಾಗಿಯಾಗಿದ್ದು.
  • ಈ ಆರೋಪಿಗಳು ಕೂಡ ತನಿಖೆಯಲ್ಲಿ ನಾಗೇಂದ್ರ ಸೂಚನೆಯಂತೆ ಹಗರಣದಲ್ಲಿ ಭಾಗಿ ಎಂಬ ಹೇಳಿಕೆಗಳು
  • ಮೃತ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್​​ನಲ್ಲಿ “ಸಚಿವ” ಎಂಬುದು ಉಲ್ಲೇಖವಾಗಿರೋದು.
  • ಪದ್ಮನಾಭ್ ಅವರು ನಾಗೇಂದ್ರ ಆಪ್ತ ಹರೀಶ್ ಗೆ 25 ಲಕ್ಷ ರೂ. ನೀಡಿರೋದು.
  • ಹರೀಶ್ ವಿಚಾರಣೆಯಲ್ಲಿ ನಾಗೇಂದ್ರ ಸೂಚನೆಯಂತೆ ಹಣ ಪಡೆದಿರೋ ಬಗ್ಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
  • ಬಂಧಿತ ಇತರೆ ಆರೋಪಿಗಳ ಹೇಳಿಕೆಗಳು.
  • ಇ.ಡಿಯ 40 ಗಂಟೆಗಳ ಮೆಗಾ ದಾಳಿ. ದಾಳಿಯಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಅನೇಕ ದಾಖಲೆ ಸಿಕ್ಕಿರೋದು.
  • ಇ.ಡಿಯಿಂದ ನಾಗೇಂದ್ರ ಆಪ್ತ ಕಾರ್ಯದರ್ಶಿ ದೇವೆಂದ್ರಪ್ಪ ಹಾಗೂ ಪಿಎ ಹರೀಶ್ ವಿಚಾರಣೆ ಹೇಳಿಕೆಗಳು.

ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ: ಶಾಸಕ ನಾಗೇಂದ್ರ ಇಡಿ ವಶಕ್ಕೆ

ಈ ಮಧ್ಯೆ, ಬಹುಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಿಂದ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಮಾಜಿ ಸಚಿವ, ಬಳ್ಳಾರಿ ಗ್ರಾಮಾಂತರ ಕಾಂಗ್ರೆಸ್ ಶಾಸಕ ನಾಗೇಂದ್ರ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

(ವರದಿ: ಪ್ರದೀಪ್ ‘ಟಿವಿ9’)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು