ಬೆಂಗಳೂರು: ಅಶ್ಲೀಲ ವಿಡಿಯೋ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಸ್ವಾಮೀಜಿ, ರಮೇಶ್ ಜಾರಕಿಹೊಳಿ ನಿರ್ದೋಷಿಯಾಗಿದ್ರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಆದರೆ ಇಷ್ಟು ತರಾತುರಿಯಲ್ಲಿ ಅವರ ರಾಜಿನಾಮೆ ಅಂಗೀಕರಿಸಬಾರದಿತ್ತು. ಹೀಗಾಗಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಸರ್ಕಾರ ಅಸ್ಥಿತ್ವಕ್ಕೆ ಬರುವಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಪ್ರಮುಖವಾದದ್ದು. ಈಗ ರಮೇಶ್ ಜಾರಕಿಹೊಳಿ ತಮ್ಮ ತಪ್ಪಿಲ್ಲದಿದ್ದರೂ ನೈತಿಕ ಹೊಣೆಗಾರಿಕೆಯಿಂದ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ಅವರ ಜತೆ ಚರ್ಚಿಸಿ, ಸಂಪುಟದಲ್ಲಿ ಉಳಿಸಿಕೊಂಡೇ ತನಿಖೆ ನಡೆಸಬಹುದಿತ್ತು. ಹೀಗೆ ಏಕಾಏಕಿ ರಾಜೀನಾಮೆ ಅಂಗೀಕರಿಸಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:
ರಮೇಶ್ ಜಾರಕಿಹೊಳಿ ಬೆಂಬಲಿಗರು ಮಾನಸಿಕ ಹಿಂಸೆ ನೀಡ್ತಿದ್ದಾರೆ, ಮಾರ್ಚ್ 9ರಂದು ವಿಚಾರಣೆಗೆ ಹಾಜರಾಗ್ತೀನಿ: ದಿನೇಶ್ ಕಲ್ಲಹಳ್ಳಿ
ಸಂತ್ರಸ್ತ ಯುವತಿ ತಮ್ಮದು ಸಹಮತ ಸೆಕ್ಸ್ ಎಂದು ಹೇಳಿದರೆ.. ನಾನು ಕಾನೂನು ಹೋರಾಟ ನಡೆಸುತ್ತೇನೆ -ದಿನೇಶ್ ಕಲ್ಲಹಳ್ಳಿ
Published On - 3:40 pm, Thu, 4 March 21