ಸಿಎಂ ಯಡಿಯೂರಪ್ಪಗೆ ಒಳ್ಳೆಯ ಸಲಹೆಗಾರರು ಇಲ್ಲ, ಇದು ಕಾಮಿಡಿ ಕರ್ಫ್ಯೂ: ವಾಟಾಳ್ ನಾಗರಾಜ್
ಸರ್ಕಾರ ಜನವರಿ 1ರ ವರೆಗೆ ಕರ್ಫ್ಯೂ ಜಾರಿ ಮಾಡಿದೆ. ನೈಟ್ ಕರ್ಫ್ಯೂ ಏಕೆ ಮಾಡಿದ್ದಾರೆಂದು ಅವರಿಗೇ ಗೊತ್ತಿಲ್ಲ. ಸಿಎಂ ಯಡಿಯೂರಪ್ಪಗೆ ಒಳ್ಳೆಯ ಸಲಹೆಗಾರರು ಇಲ್ಲ. ಹದಗೆಟ್ಟ, ಅವಿವೇಕದ ನೈಟ್ ಕರ್ಫ್ಯೂ ಬೇಡ. ಇಂತಹ ಕರ್ಫ್ಯೂ ಜನರಿಗೆ ಭಯವನ್ನ ಹುಟ್ಟಿಸುತ್ತಿದೆ ಎಂದು ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ.
ಬೆಂಗಳೂರು: ನೈಟ್ ಕರ್ಫ್ಯೂ ಏಕೆ ಮಾಡಿದ್ದಾರೆಂದು ಅವರಿಗೇ ಗೊತ್ತಿಲ್ಲ. ಸಿಎಂ ಯಡಿಯೂರಪ್ಪಗೆ ಒಳ್ಳೆಯ ಸಲಹೆಗಾರರು ಇಲ್ಲ ಎಂದು ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ ಹೊರ ಹಾಕಿದ್ದಾರೆ.
ಕೊರೊನಾ ರೂಪಾಂತರ ವೈರಸ್ ಆತಂಕದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಇರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ. ಮುಖ್ಯಮಂತ್ರಿ ಹೇಳಿಕೆಗೆ ವಾಟಾಳ್ ನಾಗರಾಜ್ ಮೇಲಿನಂತೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅವಿವೇಕದ ನೈಟ್ ಕರ್ಫ್ಯೂ ಬೇಡ ಸರ್ಕಾರ ಜ.1ರ ವರೆಗೆ ಕರ್ಫ್ಯೂ ಜಾರಿ ಮಾಡಿದೆ. ನೈಟ್ ಕರ್ಫ್ಯೂ ಏಕೆ ಮಾಡಿದ್ದಾರೆಂದು ಅವರಿಗೇ ಗೊತ್ತಿಲ್ಲ. ಸಿಎಂ ಯಡಿಯೂರಪ್ಪಗೆ ಒಳ್ಳೆಯ ಸಲಹೆಗಾರರು ಇಲ್ಲ. ಹದಗೆಟ್ಟ, ಅವಿವೇಕದ ನೈಟ್ ಕರ್ಫ್ಯೂ ಬೇಡ. ಇಂತಹ ಕರ್ಫ್ಯೂ ಜನರಿಗೆ ಭಯವನ್ನ ಹುಟ್ಟಿಸುತ್ತಿದೆ ಎಂದು ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ.
ಅಲ್ಲದೆ ರಾಜ್ಯದಲ್ಲಿ ಅವೈಜ್ಞಾನಿಕ ನೈಟ್ ಕರ್ಫ್ಯೂ ಜಾರಿ ಮಾಡಿದ್ದಾರೆ ಎಂದು ಆರೋಪಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ವಾಟಾಳ್ ಪ್ರತಿಭಟನೆ ನಡೆಸಿದ್ದಾರೆ. ಇದು ಕಾಮಿಡಿ ಕರ್ಫ್ಯೂ. ಸರ್ಕಾರದ ಹುಚ್ಚು ದರ್ಬಾರ್ ಅಂತ ಕೂಗಿ ವಿರೋಧಿಸಿದ್ದಾರೆ.
ನನ್ನ ಜೀವಕ್ಕೆ ಅಪಾಯವಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣ: ವಾಟಾಳ್ ನಾಗರಾಜ್
Published On - 2:37 pm, Thu, 24 December 20