ನಮ್ಮ ನಾಯಕರಿಗೆ ಕುರ್ಚಿ ಆಟವೇ ಮುಖ್ಯವಾಗಿ ಹೋಗಿದೆ -ಶಾಸಕರು, ಸಂಸದರ ವಿರುದ್ಧ ವಾಟಾಳ್​ ಕೆಂಡಾಮಂಡಲ

ನಮ್ಮ ನಾಯಕರು ಇದುವರೆಗೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಇವರಿಗೆ ಬರಿ ಕುರ್ಚಿ ಆಟವೇ ಮುಖ್ಯವಾಗಿ ಹೋಗಿದೆ. ರಾಜಕೀಯ ಮಾತ್ರ ಮಾಡ್ತಾರೆ ಎಂದು ವಾಟಾಳ್​ ಹೇಳಿದರು.

ನಮ್ಮ ನಾಯಕರಿಗೆ ಕುರ್ಚಿ ಆಟವೇ ಮುಖ್ಯವಾಗಿ ಹೋಗಿದೆ -ಶಾಸಕರು, ಸಂಸದರ ವಿರುದ್ಧ ವಾಟಾಳ್​ ಕೆಂಡಾಮಂಡಲ
ಕನ್ನಡ ಪರ ಹಿರಿಯ ಹೋರಾಟಗಾರ ವಾಟಾಳ್​ ನಾಗರಾಜ್ ​
KUSHAL V

| Edited By: sadhu srinath

Jan 28, 2021 | 5:12 PM

ಬೆಂಗಳೂರು: ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವುದು ಖಚಿತ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆಗೆ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ, ಇದರ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧಾರ ಸಹ ಕೈಗೊಂಡಿದ್ದಾರೆ.

ಹಾಗಾಗಿ, ಕನ್ನಡ ಚಳುವಳಿ ಒಕ್ಕೂಟದಿಂದ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಜನವರಿ 30ರಂದು ರೈಲ್ವೆ ಚಳುವಳಿ ನಡೆಸಲು ವಾಟಾಳ್ ನಾಗರಾಜ್​ ನಿರ್ಧಾರ ಕೈಗೊಂಡಿದ್ದಾರೆ.

ಮೊದಲು ರೈಲು ತಡೆ, ನಂತರ ಬೆಳಗಾವಿಯಲ್ಲಿ ಹೋರಾಟ. ಬೆಳಗಾವಿಯಲ್ಲಿ ಉಗ್ರ ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಕನ್ನಡ ಪರ ಸಂಘಟನೆಗಳು ಸುಮ್ಮನೆ ಕೂರುವ ಮಾತೇ ಇಲ್ಲ. ಕರ್ನಾಟಕದಲ್ಲಿ ಸರ್ಕಾರವನ್ನ ಎಚ್ಚರಿಸಲೇ ಬೇಕು ಎಂದು ವಾಟಾಳ್​ ನಾಗರಾಜ್​ ಹೇಳಿದರು.

ಜನವರಿ 30ರಂದು ಮೆರವಣಿಗೆ ಹೋಗಬೇಕಾ? ಇಲ್ಲ ಟಿಕೆಟ್ ತಗೊಂಡು ಒಳಗೆ ಹೋಗಬೇಕ ಅಂತಾ ಆಲೋಚನೆ ಇದೆ. ಪ್ಲಾಟ್​ಫಾರಂ ಟಿಕೆಟ್ ತಗೊಂಡು ಒಳಗೆ ಹೋಗುವ ಬಗ್ಗೆಯೂ ನಿರ್ಧಾರ ಆಗಲಿದೆ. ಜೊತೆಗೆ, ರೈಲು ನಿಲ್ದಾಣದ ಮುಂದೆ ಹೋರಾಟ ನಡೆಸಲು ಸಹ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ವಾಟಾಳ್​ ಹೇಳಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರೈಲು ತಡೆ ನಡೆಸುತ್ತೇವೆ ಎಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಾ.ರಾ ಗೋವಿಂದು, ಮುಖ್ಯಮಂತ್ರಿ ಚಂದ್ರು ,ಬಿ.ಟಿ ಲಲಿತಾ ನಾಯಕ್ ಸುದ್ದಿಗೋಷ್ಠಿ ನಡೆಸಿದರು.

ಎಲ್ಲ ಕನ್ನಡ ಸಂಘಟನೆಗಳು ಬೆಂಗಳೂರು ನಗರದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಬೇಕಾಗಿದೆ. ಉದ್ಧವ್ ಠಾಕ್ರೆ ವಿರುದ್ಧ ಮತ್ತು MES ಚಾಲ್ತಿಯಲ್ಲಿ ಇರಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ. ಸರ್ಕಾರಕ್ಕೆ ಈ ಹಿಂದೆ, ಒಂದು ಬಾರಿ ಬೆಳಗಾವಿಯಲ್ಲೇ ಎಚ್ಚರಿಕೆ ನೀಡಿದ್ದೀವಿ ಎಂದು ಸಹ ಹೇಳಿದರು.

‘MES ನಿಷೇಧ ಆಗಲೇಬೇಕು’ ಈ ನಡುವೆ, ಸರ್ಕಾರ, ಶಾಸಕರು ಮತ್ತು ಸಂಸದರಿಗೆ ಕ್ಲಾಸ್ ತೆಗೆದುಕೊಂಡ ವಾಟಾಳ್ ನಾಗರಾಜ್​ ನಮ್ಮ ನಾಯಕರು ಇದುವರೆಗೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಇವರಿಗೆ ಬರಿ ಕುರ್ಚಿ ಆಟವೇ ಮುಖ್ಯವಾಗಿ ಹೋಗಿದೆ. ರಾಜಕೀಯ ಮಾತ್ರ ಮಾಡ್ತಾರೆ ಎಂದು ವಾಟಾಳ್​ ಹೇಳಿದರು.

MES ನಿಷೇಧ ಆಗಲೇಬೇಕು. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ವಿರೋಧಿ ನೀತಿ ಒಪ್ಪಲ್ಲ. ನಮ್ಮ ಸಿಎಂ ಯಡಿಯೂರಪ್ಪ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ವಿರುದ್ಧ ವಾಕ್ ದಂಡನೆ, ಛೀಮಾರಿ ಮಾಡಲೇಬೇಕು ಎಂದು ವಾಟಾಳ್​ ನಾಗರಾಜ್​ ಹೇಳಿದರು.

Drugs Case ‘ಮೀನು ಹಿಡಿದಿದ್ದಾರೆ, ತಿಮಿಂಗಿಲ ಹಿಡಿಯೋದು ಬಾಕಿ ಇದೆ’ ಎಂದ ಇಂದ್ರಜಿತ್ ಲಂಕೇಶ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada