ಇದನ್ನು ತಿಂದ್ರೆ ಅಪಾಯ ಗ್ಯಾರಂಟಿ.. ಬೆಂಗಳೂರು ಕೆರೆ ನೀರು ಬಳಕೆ ಮಾಡಿದ ಬೆಳೆಯಲ್ಲಿ ಭಾರ ಲೋಹದ ಅಂಶ ಪತ್ತೆ

ಗಡ್ಡೆ-ಗೆಣಸಿಗಿಂತ ಭೂ ಮೇಲ್ಮೈನಲ್ಲಿ ಬೆಳೆಯುವ ಟೊಮ್ಯಾಟೋ ಮತ್ತಿತ್ಯಾದಿ ತರಕಾರಿಗಳಲ್ಲಿ ಹೆಚ್ಚು ಭಾರ ಲೋಹ ಕಂಡು ಬಂದಿದೆ. ವಾತಾವರಣ ಕಲುಶಿತಗೊಂಡಿದ್ದು ಇದು ತರಕಾರಿ ಮೇಲ್ಮೈ ಸೇರಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನು ತಿಂದ್ರೆ ಅಪಾಯ ಗ್ಯಾರಂಟಿ.. ಬೆಂಗಳೂರು ಕೆರೆ ನೀರು ಬಳಕೆ ಮಾಡಿದ ಬೆಳೆಯಲ್ಲಿ ಭಾರ ಲೋಹದ ಅಂಶ ಪತ್ತೆ
ಹಣ್ಣು ಮತ್ತು ತರಕಾರಿಗಳು (ಸಾಂದರ್ಭಿಕ ಚಿತ್ರ)
Edited By:

Updated on: Jan 24, 2021 | 9:25 PM

ಬೆಂಗಳೂರು: ನಗರದ ಕೆರೆ ನೀರು ಬಳಕೆ ಮಾಡಿಕೊಂಡು ಬೆಳೆದ ಬೆಳೆಗಳಲ್ಲಿ ಭಾರೀ ಪ್ರಮಾಣದ ಭಾರ ಲೋಹ ಇರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಈ ವಿಚಾರ ತುಂಬಾನೇ ಆತಂಕ ಮೂಡಿಸಿದೆ.

ಬೆಂಗಳೂರು ಸುತ್ತಮುತ್ತಲ ಭಾಗದಲ್ಲಿ ಕೆರೆ ನೀರು ಬಳಕೆ ಮಾಡಿಕೊಂಡು ಬೆಳೆದ ಬೆಳೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಸೊಪ್ಪು, ಟೊಮ್ಯಾಟೋ, ಭತ್ತ ಹಾಗೂ ಬೀಟ್ರೂಟ್​ನಲ್ಲಿ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದ ಭಾರ ಲೋಹದ ಅಂಶ ಕಂಡು ಬಂದಿದೆ.

ಕ್ರೋಮಿಯಂ, ಕ್ಯಾಡ್ಮಿಯಮ್ ಮತ್ತು ನಿಕಲ್ ಲೋಹಗಳು ತರಕಾರಿ ಹಾಗೂ ಸೊಪ್ಪಿನಲ್ಲಿ ಇರುವ ವಿಚಾರ ತಿಳಿದು ಬಂದಿದೆ. ಈ ರೈತರು ತಮ್ಮ ಬೆಳೆಗೆ ಕೆರೆ ನೀರನ್ನು ಬಳಕೆ ಮಾಡಿಕೊಂಡಿದ್ದಾರೆ. ಭೂಮಿಯನ್ನು ಫಲವತ್ತಾಗಿಸಲು ಸರೋವರದ ಕೆಸರನ್ನು ಕೂಡ ಸೇರಿಸಿದ್ದಾರೆ. ಕೆರೆ ನೀರು ಈಗಾಗಲೇ ಕಲುಷಿತಗೊಂಡಿದೆ. ಅದೇ ನೀರನ್ನು ಬಳಕೆ ಮಾಡಿದ್ದರಿಂದ  ಇದು ಗಿಡಗಳಿಗೂ ಸೇರಿದೆ.

ಇನ್ನು, ಗಡ್ಡೆ-ಗೆಣಸಿಗಿಂತ ಭೂ ಮೇಲ್ಮೈನಲ್ಲಿ ಬೆಳೆಯುವ ಟೊಮ್ಯಾಟೋ ಮತ್ತಿತ್ಯಾದಿ ತರಕಾರಿಗಳಲ್ಲಿ ಹೆಚ್ಚು ಭಾರ ಲೋಹ ಕಂಡು ಬಂದಿದೆ. ವಾತಾವರಣ ಕಲುಶಿತಗೊಂಡಿದ್ದು ಇದು ತರಕಾರಿ ಮೇಲ್ಮೈ ಸೇರಿದೆ ಎಂದು ತಜ್ಞರು ತಿಳಿಸಿದ್ದಾರೆ.

ಮಾರಗೊಂಡನಹಳ್ಳಿ, ಹೊಸಕೋಟೆ, ವರ್ತೂರು, ಜಿಗಣಿ ಭಾಗದಲ್ಲಿರುವ ಕೆರೆ ನೀರು ಬಳಕೆ ಮಾಡಿ ಬೆಳೆದ ಬೆಳೆಗಳಲ್ಲಿ ಈ ಅಪಾಯಕಾರಿ ಅಂಶ ಕಾಣಿಸಿಕೊಂಡಿದೆ. ಇದನ್ನು ನಿರಂತರವಾಗಿ ಸೇವನೆ ಮಾಡುವುದರಿಂದ ಮಾರಕ ರೋಗಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. 2017ರಲ್ಲೂ ತಜ್ಞರು ಇದೇ ಮಾದರಿಯ ಎಚ್ಚರಿಕೆ ನೀಡಿದ್ದರು.

ಆಕಳ ಹಾಲು ಕಲುಶಿತ!
ಅಪಾಯಕಾರಿ ಲೋಹಗಳುಳ್ಳ ತರಕಾರಿ ಹಾಗೂ ಹುಲ್ಲನ್ನು ಸೇವನೆ ಮಾಡುವ ಹಸುಗಳಿಗೆ ಇದರ ಅಪಾಯ ತಪ್ಪಿದ್ದಲ್ಲ. ಅಷ್ಟೇ ಅಲ್ಲ, ಆಕಳಿನ ಹಾಲಿನಲ್ಲೂ ವಿಷಕಾರಿ ಅಂಶ ಸೇರಿರುವ ಸಾಧ್ಯತೆ ಇರುತ್ತದೆ. ಇದನ್ನು ಸೇವನೆ ಮಾಡಿದ ಮನುಷ್ಯನಿಗೆ ಅಪಾಯ ಎದುರಾಗಬಹುದು.

ಮನೆ ಮೇಲೆ ಬಗೆಬಗೆ ತರಕಾರಿ, ನಗುತಿವೆ ಹತ್ತಾರು ಬಗೆಯ ಸೊಪ್ಪು, ಹೂ ಗಿಡಗಳು; ತಾರಸಿ ಕೃಷಿಯ ಯಶೋಗಾಥೆಯಿದು

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us