ಸದನದಲ್ಲಿ ಸ್ವಾರಸ್ಯಕರ ಚರ್ಚೆ ಹುಟ್ಟುಹಾಕಿತು ಸಿದ್ದರಾಮಯ್ಯ ಹೇಳಿದ ‘ಸುಳ್ಳು’ ಪದ
ಸಿದ್ದರಾಮಯ್ಯ ಸುಳ್ಳು ಎಂಬ ಪದ ಬಳಸಿ ಆಡಿದ ಮಾತಿಗೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶ ಮಾಡಿದ್ದಾರೆ. ‘ಸುಳ್ಳು’ ಪದದ ಬದಲು, ‘ಸತ್ಯಕ್ಕೆ ದೂರವಾದ ಮಾತು’ ಎಂಬ ಪದಬಳಕೆ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು: ರಾಜ್ಯಪಾಲರ ಭಾಷಣದ ಬಳಿಕ ಸಿದ್ದರಾಮಯ್ಯ ಉಚ್ಚರಿಸಿದ ‘ಸುಳ್ಳು’ ಎಂಬ ಪದ, ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಯನ್ನು ಹುಟ್ಟುಹಾಕಿತು. ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ವೇಳೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶ ಮಾಡಿದ್ದಾರೆ. ‘ಸುಳ್ಳು’ ಎಂಬುದು ಸಂಸದೀಯ ಪದವೇ ಎಂದು ಕಾಗೇರಿ ಪ್ರಶ್ನೆ ಮಾಡಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಈ ಬಗ್ಗೆ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಸುಳ್ಳು ಎಂಬ ಪದ ಬಳಸಿ ಆಡಿದ ಮಾತಿಗೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶ ಮಾಡಿದ್ದಾರೆ. ‘ಸುಳ್ಳು’ ಪದದ ಬದಲು, ‘ಸತ್ಯಕ್ಕೆ ದೂರವಾದ ಮಾತು’ ಎಂಬ ಪದಬಳಕೆ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಈ ಬಗ್ಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಧುಸ್ವಾಮಿ ಬಳಿ ಅಭಿಪ್ರಾಯ ಕೋರಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸುಳ್ಳು ಅಸಂಸದೀಯ ಪದ ಅಲ್ಲ ಎಂದು ಉಲ್ಲೇಖಿಸಿದ್ದಾರೆ. ಹಿಂದಿನ ಸದನದ ನಡಾವಳಿ ಉಲ್ಲೇಖಿಸಿ ರಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಸುರೇಶ್ ಕುಮಾರ್, ಸುಳ್ಳು ಎಂಬ ಪದ ಬಳಕೆ ಅಸಂಸದೀಯ ಅಲ್ಲ. ಆದರೆ ಸುಳ್ಳು ಹೇಳುವುದು ಅಸಂಸದೀಯ ಎಂದು ತಿಳಿಸಿದ್ದಾರೆ.
ಸದನಕ್ಕೆ ಗೈರಾಗುವ ಬಗ್ಗೆ ಮಾಹಿತಿ ನೀಡದ ಹಿನ್ನೆಲೆ: ವಿಧೇಯಕ ಮಂಡನೆಗೆ ಸಭಾಪತಿ ನಿರಾಕರಣೆ
Published On - 8:34 pm, Wed, 3 February 21