Hampi G20 Summit 2023: ಹಂಪಿಯಲ್ಲಿ ಆಯೋಜಿಸಲಾದ 3ನೇ ಸಿಡಬ್ಲ್ಯೂಜಿ ಸಂಸ್ಕೃತಿ ಸಭೆ ಉದ್ಘಾಟಿಸಿದ ಪ್ರಲ್ಹಾದ್ ಜೋಶಿ

ಇಂದು ಹಂಪಿಯಲ್ಲಿ ಆಯೋಜಿಸಲಾಗಿದ್ದ ಮೂರನೇ ಜಿ 20 ಸಂಸ್ಕೃತಿ ವರ್ಕಿಂಗ್ ಗ್ರೂಪ್ (ಸಿಡಬ್ಲ್ಯೂಜಿ) ಸಭೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ಮಾಡಿದರು.

Hampi G20 Summit 2023: ಹಂಪಿಯಲ್ಲಿ ಆಯೋಜಿಸಲಾದ 3ನೇ ಸಿಡಬ್ಲ್ಯೂಜಿ ಸಂಸ್ಕೃತಿ ಸಭೆ ಉದ್ಘಾಟಿಸಿದ ಪ್ರಲ್ಹಾದ್ ಜೋಶಿ
3ನೇ ಸಿಡಬ್ಲ್ಯೂಜಿ ಸಂಸ್ಕೃತಿ ಸಭೆ ಉದ್ಘಾಟಿಸಿದ ಪ್ರಲ್ಹಾದ್ ಜೋಶಿ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jul 10, 2023 | 2:08 PM

ಹಂಪಿ: ಇಂದು (ಜು.10) ಹಂಪಿಯಲ್ಲಿ ಆಯೋಜಿಸಲಾಗಿದ್ದ ಮೂರನೇ ಜಿ 20 ಸಂಸ್ಕೃತಿ ವರ್ಕಿಂಗ್ ಗ್ರೂಪ್ (ಸಿಡಬ್ಲ್ಯೂಜಿ) ಸಭೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ಮಾಡಿದರು. ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಾವು ನಾಲ್ಕು ಆದ್ಯತೆಗಳನ್ನು ಗುರುತಿಸುವ ಮತ್ತು ಚರ್ಚಿಸುವ ಮೂಲಕ ಈ ಸಭೆಯನ್ನು ನಡೆಸಲು ಮುಂದಾಗಿದ್ದೇವೆ. ಹಂಪಿ ನಮ್ಮ ದೇಶದ ಸಂಸ್ಕೃತಿ ಹೃದಯಭಾಗ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಡುತ್ತಿದೆ. ನಮ್ಮ ಮುಂದೆ ಇರುವ 4 ಆದ್ಯತೆಯ ಕ್ಷೇತ್ರಗಳೆಂದರೆ, 1. ಸಾಂಸ್ಕೃತಿಕ ಆಸ್ತಿಯ ರಕ್ಷಣೆ ಮತ್ತು ಪುನರ್​ರಚನೆ, 2. ಸುಸ್ಥಿರ ಭವಿಷ್ಯಕ್ಕಾಗಿ ಲಿವಿಂಗ್ ಹೆರಿಟೇಜ್ ಬಳಸಿಕೊಳ್ಳುವುದು, 3. ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕೈಗಾರಿಕೆಗಳು ಮತ್ತು ಸೃಜನಾತ್ಮಕ ಆರ್ಥಿಕತೆಯ ಪ್ರಚಾರ, 4. ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ನಿಯಂತ್ರಿಸುವುದು ಎಂದು ಹೇಳಿದರು.

ಈ ಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಅಮೂಲ್ಯ ಕೊಡುಗೆಗಳನ್ನು ಎತ್ತಿ ಹಿಡಿಯುವುದು ಕೂಡ ಒಂದು ಪ್ರಮುಖ ಕಾರ್ಯವಾಗಿದೆ. G20ಯಲ್ಲಿ ಪ್ರಾಥಮಿಕ ಕರಡು ಪ್ರತಿಯ ಒಳನೋಟದ ಬಗ್ಗೆ ನೀವು ಕೂಡ ಹಂಚಿಕೊಳ್ಳಲು ಇದು ಸದವಕಾಶ ಎಂದು ಹೇಳಿದರು. ವೈವಿಧ್ಯತೆಯಿಂದ ಕೂಡಿರುವ ಜಗತ್ತಿನಲ್ಲಿ, ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎಳೆ ಎಳೆಯಾಗಿ ತೋರಿಸುವ ಕಾರ್ಯವನ್ನು ನಾವು ಮಾಡಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ: Hampi: ಐತಿಹಾಸಿಕ ಹಂಪಿಯಲ್ಲಿ ಜುಲೈ 12ರವರೆಗೂ ಜಿ20 ಸಿಡಬ್ಲ್ಯುಜಿ ಸಭೆ; 29 ದೇಶಗಳ 50 ಪ್ರತಿನಿಧಿಗಳು ಭಾಗಿ

ಇದು ಸಂಸ್ಕೃತಿ ಸೇತುವೆಗಳನ್ನು ನಿರ್ಮಿಸುತ್ತದೆ, ತಿಳುವಳಿಕೆ ಮತ್ತು ಸಹಾನುಭೂತಿಯನ್ನು ಬೆಳೆಸುತ್ತದೆ. ಇದರ ಜತೆಗೆ ನಮ್ಮ ಸಂಸ್ಕೃತಿಯನ್ನು ಟೀಕಿಸುವವರು ಹೆಚ್ಚು, ಅವರನ್ನು ಗಮನಕ್ಕೆ ತೆಗೆದುಕೊಳ್ಳದೇ ಮುಂದೆ ಸಾಗಬೇಕಿದೆ ಎಂದು ಹೇಳಿದರು, ಇನ್ನೂ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಹಳೆಯ ಕಲೆ ಸಂಸ್ಕೃತಿಯನ್ನು, ಜೀವನಶೈಲಿಗಳನ್ನು ಪ್ರದರ್ಶನ ಮಾಡಲಾಗಿತ್ತು.

ಈ ಸಭೆಯಲ್ಲಿ ಲಂಬಾಣಿ ಕಸೂತಿ ಪ್ಯಾಚ್‌ಗಳ ಅತಿದೊಡ್ಡ ಪ್ರದರ್ಶನವನ್ನು ರಚಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ಗೆ ಸೇರುವ ಗುರಿಯನ್ನು ಹೊಂದಿದೆ. ಈ ಪ್ರಯತ್ನದಲ್ಲಿ ಲಂಬಾಣಿ ಸಮುದಾಯದ 450 ಕ್ಕೂ ಹೆಚ್ಚು ಮಹಿಳಾ ಕುಶಲಕರ್ಮಿಗಳನ್ನು ಒಳಗೊಂಡಿದ್ದು, ಸಂಡೂರ್ ಕುಶಾಲ ಕಲಾ ಕೇಂದ್ರಕ್ಕೆ ಸಂಬಂಧಿಸಿದ 1300 ಲಂಬಾಣಿ ಕಸೂತಿ ಪ್ಯಾಚ್ ವರ್ಕ್‌ಗಳನ್ನು ಪ್ರದರ್ಶಿಸಲಾಗುತ್ತದೆ. UNESCO ವಿಶ್ವ ಪರಂಪರೆಯ ತಾಣವಾಗಿರುವ ಹಂಪಿ ಗ್ರೂಪ್ ಆಫ್ ಸ್ಮಾರಕಗಳಲ್ಲಿ ವಿಜಯ ವಿಠ್ಠಲ ದೇವಸ್ಥಾನ, ರಾಜಮನೆತನದ ಆವರಣ ಮತ್ತು ಯಡೂರು ಬಸವಣ್ಣ ಸಂಕೀರ್ಣದಂತಹ ಪಾರಂಪರಿಕ ತಾಣಗಳನ್ನು ಒಳಗೊಂಡಿದೆ.

ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:05 pm, Mon, 10 July 23

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ