Officers Transfer: ಅಧಿಕಾರಿಗಳ ವರ್ಗಾವಣೆ ದಂಧೆಗೆ ಪುಷ್ಟಿ ನೀಡಿದ ಹಾಲಿ-ಮಾಜಿ ಶಾಸಕರ ಶಿಫಾರಸ್ಸು ಪತ್ರ

ವಿಜಯನಗರ ಜಿಲ್ಲೆಯಲ್ಲಿ ಅಧಿಖಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಪತ್ರ ಚಳವಳಿ ನಡೆದಿದೆ. ಆದ್ರೆ, ಇದರಲ್ಲಿ ಮಾಜಿ ಶಾಸಕ ಗೆದ್ದು ಬೀಗಿದ್ದಾರೆ.

Officers Transfer: ಅಧಿಕಾರಿಗಳ ವರ್ಗಾವಣೆ ದಂಧೆಗೆ ಪುಷ್ಟಿ ನೀಡಿದ ಹಾಲಿ-ಮಾಜಿ ಶಾಸಕರ ಶಿಫಾರಸ್ಸು ಪತ್ರ
ವಿಧಾನಸೌಧ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jul 21, 2023 | 2:04 PM

ವಿಜಯನಗರ, (ಜುಲೈ 21): ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಅಧಿಕಾರಿಗಳ ವರ್ಗಾವಣೆ (Transfer) ದಂಧೆ ಆರೋಪ ಮಾಡಿದ್ದು, ಅದಕ್ಕೀಗ ಹಾಲಿ ಹಾಗೂ ಮಾಜಿ ಶಾಸಕರ ಶಿಪಾರಸ್ಸು ಪತ್ರಗಳು ಪುಷ್ಟಿ ನೀಡುವಂತಿದೆ. ಹೌದು..ವಿಜಯನಗರ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆಗಾಗಿ ಮಾಜಿ- ಹಾಲಿ ಶಾಸಕರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ವಿಜಯನಗರ ಶಾಸಕ ಎಚ್. ಆರ್.ಗವಿಯಪ್ಪ ಹಾಗೂ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಭೀಮಾನಾಯ್ಕ ನಡುವೆ ಅಧಿಕಾರಿಗಳ ವರ್ಗಾವಣೆ ಶಿಫಾರಸ್ಸು ಪತ್ರ ಚಳವಳಿ ನಡೆದಿವೆ. ಒಬ್ಬರು ವರ್ಗಾವಣೆಗೆ ಪ್ರಯತ್ನಿಸಿದರೆ, ಮತ್ತೊಬ್ಬರಿಂದ ಅದೇ ಸ್ಥಾನದಲ್ಲಿ ಮುಂದುವರಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಪತ್ರ ಬರೆದಿದ್ದಾರೆ.

ಇದನ್ನೂ ಓದಿ: 25ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವರ್ಗಾವಣೆ, ಕಾಂಗ್ರೆಸ್​ ಶಾಸಕನ ಪತ್ರ ವೈರಲ್

ಬೀರೇಂದ್ರ ಅವರನ್ನು ಹೊಸಪೇಟೆಯಲ್ಲಿ ಮುಂದುವರಿಸುವಂತೆ ಶಾಸಕ ಗವಿಯಪ್ಪ ಸರ್ಕಾರಕ್ಕೆ ಶಿಪಾರಸ್ಸು ಪತ್ರ ಬರೆದಿದ್ದರೆ, ಇತ್ತ ಕೊಪ್ಪಳದಲ್ಲಿ ಸಹಾಯಕ ನಿಬಂಧಕರಾಗಿದ್ದ ಟಿ.ಎಸ್. ರವಿಕುಮಾರ್ ಅವರನ್ನು ಹೊಸಪೇಟೆಗೆ ವರ್ಗಾಯಿಸುವಂತೆ ಮಾಜಿ ಶಾಸಕ ಭೀಮಾನಾಯ್ಕ ಶಿಫಾರಸ್ಸು ಪತ್ರ ಬರೆದಿದ್ದರು. ಅಂತಿಮವಾಗಿ ಮಾಜಿ ಶಾಸಕ ಭೀಮಾನಾಯ್ಕ ಪತ್ರಕ್ಕೆ ಮನ್ನಣೆ ನೀಡಿ ಸರ್ಕಾರ, ಬಿರೇಂದ್ರ ಅವರನ್ನು ವರ್ಗಾವಣೆ ಮಾಡಿದೆ.

ಇದರೊಂದಿಗೆ ಸರ್ಕಾರ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಭೀಮಾನಾಯ್ಕ ಶಿಫಾರಸ್ಸಿಗೆ ಸರ್ಕಾರ ಮಣೆ ಹಾಕಿದ್ದು, ಶಾಸಕ ಎಚ್. ಆರ್.ಗವಿಯಪ್ಪ ಪತ್ರಕ್ಕೆ ಸಿಗದ ಮನ್ನಣೆ ಸಿಕ್ಕಿಲ್ಲ. ಇದರಿಂದ ಮಾಜಿ ಶಾಸಕ ಭೀಮಾನಾಯ್ಕ ಹಸ್ತಕ್ಷೇಪಕ್ಕೆ ಶಾಸಕ ಗವಿಯಪ್ಪ ಅಸಮಾಧಾನಗೊಂಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ