ಸಾಮಾಜಿಕ ಮೌಢ್ಯಕ್ಕೆ ಸೊಪ್ಪು ಹಾಕದ ಸಿಎಂ ಸಿದ್ದರಾಮಯ್ಯ ಈ ಬಾರಿಯಾದರೂ ಹಂಪಿ ವಿರೂಪಾಕ್ಷನಿಗೆ ಪೂಜೆ ಸಲ್ಲಿಸುತ್ತಾರಾ? ಸದ್ಯದ ಯಕ್ಷ ಪ್ರಶ್ನೆ!
Rationalist CM Siddaramaiah: ಸಿಎಂ ಸಿದ್ದರಾಮಯ್ಯ ಪ್ರಸ್ತುತ ಕರ್ನಾಟಕ ರಾಜ್ಯೋತ್ಸವ ಸಂಭ್ರಮ 50ರ ಜ್ಯೋತಿ ರಥಯಾತ್ರೆಗೆ ಇಂದು ಹಂಪಿಗೆ ಆಗಮಿಸುತ್ತಿದ್ದಾರೆ ಎಂಬ ಅಧಿಕೃತ ಮಾಹಿತಿಯಿದೆ. ಮೂರ್ನಾಲ್ಕು ಬಾರಿ ಬಂದರೂ ಒಮ್ಮೆಯೂ ಹಂಪಿಯ ವಿರೂಪಾಕ್ಷನ ದರ್ಶನ ಪಡೆದಿಲ್ಲ ಸಿದ್ದರಾಮಯ್ಯ. ಈ ಬಾರಿ ವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿ ಮೌಢ್ಯ ಮೆಟ್ಟಿ ನಿಲ್ತಾರಾ ಅನ್ನೋದು ಸದ್ಯಕ್ಕೆ ಭಾರೀ ಚರ್ಚೆಯಾಗುತ್ತಿದೆ.
ವಿಜಯನಗರ, ನವೆಂಬರ್ 2: ಮೌಢ್ಯತೆಗೆ ಸೆಡ್ಡು ಹೊಡಿಯುವುದಲ್ಲಿ ಎತ್ತಿದ ಕೈ ಎನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Rationalist CM Siddaramaiah) ಅವರು ಇಂದು ಹಂಪಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಹಂಪಿ ವಿರೂಪಾಕ್ಷನಿಗೆ ಪೂಜೆ ಸಲ್ಲಿಸಿದ್ರೆ ಅಧಿಕಾರ ಹೋಗುತ್ತದೆ ಎಂಬ ಸಾಮಾಜಿಕ ಮೌಢ್ಯತೆ (Superstition, bad luck, jinx) ಮನೆ ಮಾಡಿದೆ. ಇಂದು ವಿಶ್ವ ವಿಖ್ಯಾತ ಹಂಪಿಗೆ (Virupaksha Temple, Hampi Vijayanagara) ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರು ವಿರೂಪಾಕ್ಷೇಶ್ವರ ಸನ್ನಿಧಿಗೆ ಭೇಟಿ ಕೊಡ್ತಾರಾ? ಅಲ್ಲಿ ಪೂಜೆ ಸಲ್ಲಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಮಹತ್ವದ ಹಂಪಿ ಕ್ಷೇತ್ರ UNESCO World Heritage Site ಗಳಲ್ಲಿ ಒಂದಾಗಿದೆ.
ಇನ್ನು, ಚಾಮರಾಜನಗರಕ್ಕೆ ಹೋದ್ರೆ ಅಧಿಕಾರ ಹೋಗುತ್ತೆ ಅನ್ನೋ ಮಾತಿತ್ತು. ಆ ಸಾಮಾಜಿಕ ಅನಿಷ್ಟವನ್ನು ಮುರಿಯಲು ಸಿಎಂ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಒಂದಲ್ಲ, ಎರಡು ಬಾರಿ ಹೋಗಿ ಬಂದರು. ಇದೇ ಸಾಲಿನಲ್ಲಿ ಸಾಗುವ ಹಂಪಿಯ ಶ್ರೀ ವಿರೂಪಾಕ್ಷ ದೇಗುಲಕ್ಕೆ ಮುಖ್ಯಮಂತ್ರಿಯಾದವರು ಭೆಟಿ ಕೊಟ್ಟರೆ ಅವರ ಅಧಿಕಾರ ಹೋಗುತ್ತದೆ ಅನ್ನೋ ಮೌಢ್ಯತೆಗೆ ಬ್ರೇಕ್ ಬೀಳುತ್ತದಾ? ಹಂಪಿಯ ಶ್ರೀ ವಿರುಪಾಕ್ಷ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿಸ್ತಾರಾ ಸಿಎಂ? ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ದೊರಕಲಿದೆ.
ಸಿಎಂ ಸಿದ್ದರಾಮಯ್ಯ ಪ್ರಸ್ತುತ ಕರ್ನಾಟಕ ರಾಜ್ಯೋತ್ಸವ ಸಂಭ್ರಮ 50ರ ಜ್ಯೋತಿ ರಥಯಾತ್ರೆಗೆ ಇಂದು ಹಂಪಿಗೆ ಆಗಮಿಸುತ್ತಿದ್ದಾರೆ ಎಂಬ ಅಧಿಕೃತ ಮಾಹಿತಿಯಿದೆ. ಮೂರ್ನಾಲ್ಕು ಬಾರಿ ಬಂದರೂ ಒಮ್ಮೆಯೂ ಹಂಪಿಯ ವಿರುಪಾಕ್ಷನ ದರ್ಶನ ಪಡೆದಿಲ್ಲ ಸಿದ್ದರಾಮಯ್ಯ. ಈ ಬಾರಿ ವಿರುಪಾಕ್ಷ ದೇಗುಲಕ್ಕೆ ಭೇಟಿ ನೀಡಿ ಮೌಢ್ಯ ಮೆಟ್ಟಿ ನಿಲ್ತಾರಾ ಅನ್ನೋದು ಸದ್ಯಕ್ಕೆ ಭಾರೀ ಚರ್ಚೆಯಾಗುತ್ತಿದೆ. ಏಕೆಂದರೆ ರಾಜ್ಯದಲ್ಲಿ ಪ್ರಮುಖ ಪ್ರತಿಪಕ್ಷಗಳು 135 ಶಾಸಕರ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಂಚು ನಡೆಸುತ್ತಿವೆ ಎಂದು ಆಡಳಿತಾರೂಢ ಶಾಸಕರೇ ಹೇಳುತ್ತಿರುವುದು ರಾಜ್ಯದ ರಾಜಕೀಯ ಭವಿಷ್ಯ ಏನು ಎಂಬುದು ಕುತೂಹಲ ಮೂಡಿಸಿದೆ.
ಹಂಪಿ ಉತ್ಸವಕ್ಕೆ ಬಂದಿದ್ದ ಅನೇಕ ಸಿಎಂಗಳು ವಿರೂಪಾಕ್ಷನ ಭೇಟಿಗೆ ಮನಸ್ಸು ಮಾಡಿಲ್ಲ:
ಮುಖ್ಯಮಂತ್ರಿಯಾದವರ ಪೈಕಿ ಹಂಪಿ ಉತ್ಸವಕ್ಕೆ ಬಂದ ಶ್ರೀ ವಿರೂಪಾಕ್ಷ ದೇಗುಲಕ್ಕೆ ಕೆಲವರು ಭೇಟಿ ನೀಡಿದ್ದರೆ, ಕೆಲವರು ಭೇಟಿ ನೀಡಿಲ್ಲ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಸ್ವತ: ಸಿದ್ದರಾಮಯ್ಯನವರು ಸಿಎಂ ಇದ್ದಾಗಲೇ, ಹಂಪಿ ಉತ್ಸವ ನಡೆದರೂ ವಿರುಪಾಕ್ಷ ದೇಗುಲಕ್ಕೆ ಭೇಟಿ ನೀಡಿರಲಿಲ್ಲ ಎಂಬುದು ದಾಖಲಾರ್ಹ ಸಂಗತಿಯಾಗಿದೆ.
ಮಾಜಿ ಸಿಎಂಗಳಾದ ಎಸ್ಎಂ ಕೃಷ್ಣ, ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ ಹಂಪಿಯ ಶ್ರೀ ವಿರೂಪಾಕ್ಷ ದೇಗುಲಕ್ಕೆ ಅವರವರ ಅಧಿಕಾರಾವಧಿಯಲ್ಲಿ ಭೇಟಿ ನೀಡಿದ್ದರು. ಆದರೆ ಶ್ರೀ ವಿರುಪಾಕ್ಷ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರು ಎಂಬುದು ದಾಖಲಾರ್ಹ ಸಂಗತಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Thu, 2 November 23