ವಿಧವೆ ಬಾಳಲ್ಲಿ ವಿಧಿಯಾಟ, ಬಾಳು ಕೊಡುವೆ ಎಂದು ಬಂದ ವಿವಾಹಿತ ಅವಳಿಗೆ ಕೈಕೊಟ್ಟ, ದಾವಣಗೆರೆ ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ ಮಹಿಳೆ

ಇಲ್ಲಿ ಆಗಿದ್ದು ಇಷ್ಟು. ಪತಿಯನ್ನು ಕಳೆದುಕೊಂಡಿದ್ದ ಆ ಮಹಿಳೆ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದರು. ಆತ ಆಹಾರ ಸಾಮಗ್ರಿ ಕೊಡಲು ಬರುತ್ತಿದ್ದ. ವಿಧವೆ ಎಂದು ಗೊತ್ತಾಗಿದೆ. ಮೇಲಾಗಿ ಮಕ್ಕಳಿದ್ದಾರೆ ಎಂಬ ವಿಚಾರ ಗೊತ್ತಾಗಿದೆ. ಆಗ ನೇರವಾಗಿ ಕೇಳಿದ್ದಾನೆ. ನಮ್ಮ ಧರ್ಮದ ಪ್ರಕಾರ ಮದ್ವೆ ಆಗೋಣ ಎಂದು.

ವಿಧವೆ ಬಾಳಲ್ಲಿ ವಿಧಿಯಾಟ, ಬಾಳು ಕೊಡುವೆ ಎಂದು ಬಂದ ವಿವಾಹಿತ ಅವಳಿಗೆ ಕೈಕೊಟ್ಟ, ದಾವಣಗೆರೆ ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿದ ಮಹಿಳೆ
ವಿಧವೆ ಬಾಳಲ್ಲಿ ವಿಧಿಯಾಟ, ಬಾಳು ಕೊಡುವೆ ಎಂದು ಬಂದ ವಿವಾಹಿತ ಅವಳಿಗೆ ಕೈಕೊಟ್ಟ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಸಾಧು ಶ್ರೀನಾಥ್​

Updated on: Nov 02, 2023 | 5:55 PM

ದಾವಣಗೆರೆ:  ಆ ಮಹಿಳೆಯ ಸಂಸಾರ ಚೆನ್ನಾಗಿತ್ತು. ಆದರೆ ವಿಧಿಯಾಟ ಹೇಳಲು ಬರಲ್ಲ. ಅಕಾಲಿಕವಾಗಿ ಪತಿ ಸಾವನ್ನಪ್ಪಿದ. ಜೀವನ ನಿರ್ವಹಣೆಗೆ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಮಾಡಹತ್ತಿದ್ದಳು. ಮಕ್ಕಳ ಪಾಲನೆ ಜವಾಬ್ದಾರಿ ತಾವೇ ಹೊತ್ತಿಕೊಂಡರು. ಹೀಗೆಯೇ ಜೀವನ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಅವರ ಬಾಳಲ್ಲಿ ಆ ವ್ಯಕ್ತಿಯ ಪ್ರವೇಶವಾಗಿದೆ. ಅನ್ಯ ಧರ್ಮಿಯನಾದರೂ ವಿಧವೆಗೆ ಬಾಳು ಕೊಡುವುದಾಗಿ ಒತ್ತಾಯಿಸಿ, ಒಪ್ಪಿಸಿ ಮದುವೆ ಆದ. ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಇದಕ್ಕಿದ್ದಂತೆ ಆಸಾಮಿ ನಾಪತ್ತೆಯಾಗಿಬಿಟ್ಟ. ಇಲ್ಲಿದೆ ನೋಡಿ ಬೀದಿಗೆ ಬಂದ ವಿಧವೆಯ ಬದುಕಿನ ಸ್ಟೋರಿ.

ವಿಜಯನಗರದ ಜಿಲ್ಲೆಯ ಹರಪನಹಳ್ಳಿಯಲ್ಲಿ ಬೆಲ್ದಾರ್ ಭಾಷಾ ಕುಟುಂಬ ಅಂದ್ರೆ ಗೌರವಿಸುವ ಹೆಸರು. ಹತ್ತಾರು ವ್ಯವಹಾರಗಳನ್ನ ಮಾಡುತ್ತಾರೆ. ಎಲ್ಲ ಜಾತಿ ಜನಾಂಗದ ಜೊತೆ ಪ್ರೀತಿಯಿಂದ ಬದುಕುವ ಕುಟುಂಬ. ಈ ಕುಟುಂಬದ ಸದಸ್ಯನೇ ನೋಡಿ ಫೀರ್ ಸಾಬ್ ಅಂತಾ. ಇತ ಅಂಗನವಾಡಿಗಳಿಗೆ ಆಹಾರ ಸಾಮಗ್ರಿ ಪೂರೈಕೆ ಮಾಡುತ್ತಾನೆ. ಮದ್ವೆ ಆಗಿದೆ. ಮಕ್ಕಳಿದ್ದಾರೆ. ತುಂಬು ಕುಟುಂಬ. ಆದ್ರೆ ಕೈಯಲ್ಲಿ ಸ್ವಲ್ಪ ದುಡ್ಡು ಜಾಸ್ತಿ. ಮೇಲಾಗಿ ಕೈಯಲ್ಲಿ ದುಡ್ಡು ಇದ್ರೆ ದಾರಿ ತಪ್ಪುವ ಸಾಧ್ಯತೆಗಳೆ ಜಾಸ್ತಿ ಅಲ್ಲವಾ.

ಈತ ದಾರಿ ತಪ್ಪಿದ್ದಕ್ಕೆ ಇಲ್ಲೊಬ್ಬ ಅಂಗನವಾಡಿ ಶಿಕ್ಷಕಿ ಈಗ ಕಣ್ಣೀರು ಹಾಕುವಂತಾಗಿದೆ. ಆ ಮಹಿಳೆ ಮದ್ವೆ ಆಗಿ ಮಕ್ಕಳೊಂದಿಗೆ ಚೆನ್ನಾಗಿದ್ದಳು. ಆದ್ರೆ ಪತಿ ಅಕಾಲಿಕವಾಗಿ ನಿಧನ ಹೊಂದಿದ್ದ. ಕುಟುಂಬದ ನಿರ್ವಹಣೆ ಜವಾಬ್ದಾರಿ ಆಕೆಯ ಮೇಲೆ ಬಿತ್ತು. ಹೀಗಾಗಿ ಅಂಗನವಾಡಿ ಶಿಕ್ಷಕಿ ಆಗಿ ಸೇವೆ ಶುರು ಮಾಡಿದರು.

ಇದನ್ನೂ ಓದಿ: ಆಸ್ತಿಗಾಗಿ ಪತ್ನಿ ಮೃತಪಟ್ಟಿದ್ದಾಳೆ ಎಂದು ಕತೆ ಕಟ್ಟಿದ ಕಾನ್ಸ್‌ಟೆಬಲ್, ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿದ್ದ, ಆ ಮೇಲೆ?

ಇದೇ ವೇಳೆ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಫೀರ್ ಸಾಬ್ ಗೂ ಈ ಮಹಿಳೆಯ ಪರಿಚಯvಆಗಿ, ನಂತರ ಪ್ರೀತಿಯಾಗಿ, ಕೊನೆಗೆ ಮದ್ವೆಯೂ ಆಗಿದೆ. ಜನವರಿ 11, 2019ರಂದು ಇಬ್ಬರೂ ಮದ್ವೆ ಆಗಿದ್ದಾರೆ. ತನ್ನ ಮನೆಯಲ್ಲಿ ಈ ವಿಷಯ ಗೊತ್ತಾಗಬಾರದು ಎಂದು ಫೀರ್ ಸಾಬ್ ದಾವಣಗೆರೆಯಲ್ಲಿ ಮನೆ ಮಾಡಿ ಮಹೀಎಯನ್ನು ಅಲ್ಲಿಟ್ಟಿದ್ದ.  ಮತ್ತೆ ಹರಪಹಳ್ಳಿಯಲ್ಲಿ ಮನೆ ಮಾಡಿದ್ದಾನೆ. ಆದ್ರೆ ಇತ್ತೀಚಿಗೆ ನಾಪತ್ತೆ ಆಗಿದ್ದಾನೆ. ಅವರ ಮನೆಗೆ ಹೋದ್ರೆ ಮನೆಯವರೆಲ್ಲಾ ಈಕೆಯನ್ನು ಹೊಡೆದು ಕಳುಹಿಸಿದ್ದಾರೆ. ನನಗೆ ಪತಿ ಬೇಕು ಎಂದು ಅಂಗನವಾಡಿ ಶಿಕ್ಷಕಿ ಹೋರಾಟ ಶುರು ಮಾಡಿದ್ದಾರೆ.

ಇಲ್ಲಿ ಆಗಿದ್ದು ಇಷ್ಟು. ಪತಿಯನ್ನು ಕಳೆದುಕೊಂಡಿದ್ದ ಆ ಮಹಿಳೆ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿದ್ದರು. ಆತ ಆಹಾರ ಸಾಮಗ್ರಿ ಕೊಡಲು ಬರುತ್ತಿದ್ದ. ವಿಧವೆ ಎಂದು ಗೊತ್ತಾಗಿದೆ. ಮೇಲಾಗಿ ಮಕ್ಕಳಿದ್ದಾರೆ ಎಂಬ ವಿಚಾರ ಸಹ ಗೊತ್ತಾಗಿದೆ. ಹೀಗೆ ಗೊತ್ತಾದ ಬಳಿಕ ನೇರವಾಗಿ ಕೇಳಿಯೇ ಬಿಟ್ಟಿದ್ದಾನೆ. ನಮ್ಮ ಧರ್ಮದ ಪ್ರಕಾರ ಮದ್ವೆ ಆಗೋಣ ಎಂದು. ಬೇಡ ಅಂದರೂ ಕೇಳಿಲ್ಲ. ನಂತರ ಇಬ್ಬರೂ ಪರಸ್ಪರ ಪ್ರೀತಿಸಿ ಮದ್ವೆ ಆಗಿದ್ದಾರೆ.

ನಂತರ ಮಹಿಳೆಯ ಬಳಿ ಇದ್ದ ಹಣವನ್ನು ಪಡೆದು ಲಾರಿ ತರುವುದಾಗಿ ಹೇಳಿ ಹೋಗಿದ್ದಾನೆ. ಕೆಲ ತಿಂಗಳಿಂದ ಪೋನ್ ಗೂ ಸಿಗುತ್ತಿಲ್ಲ. ಹರಪನಹಳ್ಳಿಯ ಕೆಲ ಪತ್ರಕರ್ತರು ಎಂದು ಹೇಳಿಕೊಂಡು ಸುತ್ತಾಡುವ ಯುವಕರಿಂದ ಪೋನ್ ಮಾಡಿಸಿ ಮಹಿಳೆಗೆ ಬೆದರಿಕೆ ಹಾಕಿಸುತ್ತಿದ್ದಾನಂತೆ. ಐದು ಲಕ್ಷ ರೂಪಾಯಿ ಕೊಡುತ್ತೇನೆ. ಆತನನ್ನ ಬಿಟ್ಟು ಬಿಡು ಎಂದು ಹೇಳಿಸಿದ್ದಾನೆ. ಆದ್ರೆ ನನಗೆ ಪತಿಯೇ ಬೇಕು ಎನ್ನುತ್ತಿದ್ದಾಳೆ ಆ ಮಹಿಳೆ.

ಹೀಗೆ ನಿರಂತರವಾಗಿ ಅಂಗನವಾಡಿ ಶಿಕ್ಷಕಿ ಹಿಂಸೆ ಅನುಭವಿಸುತ್ತಿದ್ದಾಳೆ. ಮೇಲಾಗಿ ಆ ವ್ಯಕ್ತಿಯ ಕುಟುಂಬದ ಸದಸ್ಯರು ಹಾಗೂ ಕೆಲ ಪತ್ರಕರ್ತರು ಎಂದು ಹೇಳುವ ವ್ಯಕ್ತಿಗಳು ಸಹ ಇವರಿಗೆ ಹಿಂಸೆ ನೀಡುತ್ತಿದ್ದಾರೆ. ಮದ್ವೆ ಆಗಿರುವೆ – ಪತಿ ಬೇಕು. ನನಗೆ ಹಿಂಸೆ ನೀಡುತ್ತಿರುವ ವ್ಯಕ್ತಿಗಳಿಗೆ ಶಿಕ್ಷೆ ಆಗಬೇಕು. ಈ ಮಧ್ಯೆ ಸತತವಾಗಿ ನಾಲ್ಕು ತಿಂಗಳಿಂದ ಹೋರಾಟ ಮಾಡಿ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಮಾಡಿಸಿದ್ದೇನೆ. ಇಂತಹ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬುದು ಅಂಗನವಾಡಿ ಶಿಕ್ಷಕಿಯ ಆಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ