ವಿಜಯನಗರ: ಪಂಪ್‌ಹೌಸಿನಲ್ಲಿ ಸಿಲುಕಿದ್ದ ಚಿರತೆಯನ್ನ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

ಆಹಾರ ಹುಡುಕಿಕೊಂಡು ಹುಲಿಗುಡ್ಡದ ಬಳಿ ಬಂದಿದ್ದ ಚಿರತೆ, ಏತನೀರಾವರಿಯ ನೀರೆತ್ತುವ ಘಟಕದಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಹೊರಬರಲಾಗದೇ ಗಾಬರಿಯಿಂದ ಘರ್ಜಿಸುತ್ತಿದ್ದ ಚಿರತೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ವಿಜಯನಗರ: ಪಂಪ್‌ಹೌಸಿನಲ್ಲಿ ಸಿಲುಕಿದ್ದ ಚಿರತೆಯನ್ನ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ
ವಿಜಯನಗರ ಪಂಪ್‌ಹೌಸಿನಲ್ಲಿ ಸಿಲುಕಿದ್ದ ಚಿರತೆಯನ್ನ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ
Updated By: ಕಿರಣ್ ಹನುಮಂತ್​ ಮಾದಾರ್

Updated on: Mar 01, 2023 | 10:39 AM

ವಿಜಯನಗರ: ಹೂವಿನ ಹಡಗಲಿ ತಾಲೂಕಿನ ಹುಲಿಗುಡ್ಡದ ಸಿಂಗಟಾಲೂರು ಏತನೀರಾವರಿಯ ನೀರೆತ್ತುವ ಘಟಕದಲ್ಲಿ ಸಿಲುಕಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಆಹಾರ ಹುಡುಕಿಕೊಂಡು ಹುಲಿಗುಡ್ಡದ ಬಳಿ ಬಂದಿದ್ದ ಚಿರತೆ ನೀರೆತ್ತುವ ಘಟಕದೊಳಗೆ ನುಗ್ಗಿದೆ. ಬಳಿಕ ಹೊರಬರಲಾಗದೆ ಗಾಬರಿಗೊಂಡು ಘರ್ಜಿಸಿದ್ದು, ಕೂಡಲೇ ನೀರಾವರಿ ಇಲಾಖೆಯ ಸಿಬ್ಬಂದಿಗಳು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಳಗಿನ ಜಾವದವರೆಗೂ ಚಿರತೆ ಸೆರೆ ಹಿಡಿಯುವ ಕಾರ್ಯಚರಣೆ ನಡೆಸಿದ್ದು, ಕೊನೆಗೆ ಜನರ ಕೂಗಾಟದಿಂದ ಚಿರತೆ ಹೊರಬಂದಿದೆ. ಹೊರಬಂದ ಚಿರತೆಯು ತಪ್ಪಿಸಿಕೊಳ್ಳಲು ಪ್ರಯತ್ನಸಿದಾಗ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದು, ಚಿರತೆ ಸೆರೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕಾಗಿನೆಲೆಯಲ್ಲಿ ಆಕಸ್ಮಿಕ ಬೆಂಕಿಗೆ ಎರಡು ದನಗಳು ಸಾವು

ಹಾವೇರಿ: ಕಾಗಿನೆಲೆಯಲ್ಲಿ ಆಕಸ್ಮಿಕ ಬೆಂಕಿಗೆ ಮೊಹ್ಮದ್ ಇಸಾಫ್ ಕೊಡದ್ ಎಂಬುವವರಿಗೆ ಸೇರಿದ ಎರಡು ದನಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಿಗ್ಗೆ ನಾಲ್ಕು ಗಂಟೆಗೆ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಳಿಗ್ಗೆ 6 ಗಂಟೆಗೆ ಎದ್ದು ನೋಡುವಷ್ಟರಲ್ಲಿ ಛಾವಣಿ ಬೆಂಕಿಗೆ ಆಹುತಿ ಆಗಿದೆ. ಬೆಂಕಿ ನಂದಿಸಲು ಗ್ರಾಮಸ್ಥರು ಪ್ರಯತ್ನಿಸಿದ್ದರೂ ಎರಡು ದನ ಸಾವನ್ನಪ್ಪಿವೆ. ಒಂದು ಆಕಳು ಪ್ರಾಣಪಾಯದಿಂದ ಪಾರಾಗಿದ್ದು, ದೇಹ ಸುಟ್ಟಿದೆ. ಪ್ರಾಣಾಪಯದಿಂದ ಪಾರಾದ ದನಕ್ಕೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಕಾಗಿನೆಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ