ಸಂಪಾಯಿತಲೇ ಪರಾಕ್: ಮೈಲಾರಲಿಂಗ ಕಾರ್ಣಿಕ ನುಡಿಯನ್ನ ಭಕ್ತರೇ ವಿಶ್ಲೇಷಣೆ ಮಾಡಲಿ ಎಂದ ಡಿಸಿ

Updated on: Feb 04, 2026 | 9:10 PM

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಶ್ರೀಕ್ಷೇತ್ರ ದೊಡ್ಡ ಮೈಲಾರ ಲಿಂಗೇಶ್ವರನ "ಸಂಪಾಯಿತಲೇ ಪರಾಕ್" ಕಾರ್ಣಿಕ ನುಡಿಯಲಾಗಿದೆ. ಗೊರವಯ್ಯ ರಾಮಪ್ಪನಿಂದ ಉಚ್ಚರಿಸಲ್ಪಟ್ಟ ಈ ದೈವವಾಣಿ ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ ಸಮೃದ್ಧಿಯನ್ನು ಸೂಚಿಸುತ್ತದೆ. ಆದರೆ, ಕಾರ್ಣಿಕ ವಿಶ್ಲೇಷಣೆಗೆ ಜಿಲ್ಲಾಡಳಿತದಿಂದ ಅಂಕುಶ ಬಿದ್ದಿದೆ. ವಿಜಯನಗರ ಡಿಸಿ ಕವಿತಾ ಮನ್ನೀಕೆರಿ ಅವರು ಭಕ್ತರೇ ಇದನ್ನು ವಿಶ್ಲೇಷಿಸಬೇಕು ಎಂದಿದ್ದಾರೆ.

ಬಳ್ಳಾರಿ, ಫೆಬ್ರವರಿ 04: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ನುಡಿ ಹೊರಬಿದ್ದಿದೆ. ‘ಸಂಪಾಯಿತಲೇ ಪರಾಕ್’ ಎಂದು ಕಾರ್ಣಿಕ ಗೊರವಯ್ಯ ಭವಿಷ್ಯ ನುಡಿದಿದ್ದಾರೆ. ಸದ್ಯ ಈ ಕಾರ್ಣಿಕ ನುಡಿಯನ್ನು ರಾಜ್ಯ, ದೇಶದಲ್ಲಿ ಉತ್ತಮ ಮಳೆ-ಬೆಳೆ ಎಂದು ವಿಶ್ಲೇಷಣೆ ಮಾಡಲಾಗಿದೆ. ಇನ್ನು ಈ ಬಗ್ಗೆ ವಿಜಯನಗರ ಡಿಸಿ ಕವಿತಾ ಮನ್ನೀಕೆರಿ ಮಾತನಾಡಿದ್ದು, ಕಾರ್ಣಿಕ ನುಡಿಯನ್ನು ಭಕ್ತರೇ ವಿಶ್ಲೇಷಣೆ ಮಾಡಲಿ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Feb 04, 2026 09:09 PM