ಲಕ್ಕುಂಡಿಯಲ್ಲಿ ನಿಧಿ, ಕಪ್ಪತ್ತಗುಡ್ಡದ ಗುಹೆಯೊಳಗೆ ಬಂಗಾರದ ಗಣಿ
ಲಕ್ಕುಂಡಿ ಚಿನ್ನದ ಆಗರ ಇರೋ ಊರು. ಚಿನ್ನ ನಾಣ್ಯವನ್ನ ಟಂಕಿಸುತ್ತಿದ್ದ ನೆಲ. ಇದೇ ಲಕ್ಕುಂಡಿಗೆ ಚಿನ್ನ ಎಲ್ಲಿಂದ ಬರ್ತಿತ್ತು ಎಂದು ಟಿವಿ9 ತಂಡ ಹುಡುಕಲು ಹೊರಟಿದ್ದಾಗ ಸಿಕ್ಕಿದ್ದೇ ಈ ಗುಹೆ. ಹೌದು... ಗದಗ ಜಿಲ್ಲೆ ಕಪ್ಪತ್ತಗುಡ್ಡದ ಗುಹೆಯಲ್ಲಿ ಚಿನ್ನದ ನಿಕ್ಷೇಪ ಇವೆ. ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ, ಶಿಲ್ಪಕಲೆಯ ತವರು.
ಗದಗ, (ಫೆಬ್ರವರಿ 04): ಲಕ್ಕುಂಡಿ (lakkundi) ಚಿನ್ನದ ಆಗರ ಇರೋ ಊರು. ಚಿನ್ನ ನಾಣ್ಯವನ್ನ ಟಂಕಿಸುತ್ತಿದ್ದ ನೆಲ. ಇದೇ ಲಕ್ಕುಂಡಿಗೆ ಚಿನ್ನ ಎಲ್ಲಿಂದ ಬರ್ತಿತ್ತು ಎಂದು ಟಿವಿ9 ತಂಡ ಹುಡುಕಲು ಹೊರಟಿದ್ದಾಗ ಸಿಕ್ಕಿದ್ದೇ ಈ ಗುಹೆ. ಹೌದು… ಗದಗ (Gadag) ಜಿಲ್ಲೆ ಕಪ್ಪತ್ತಗುಡ್ಡದ ಗುಹೆಯಲ್ಲಿ ಚಿನ್ನದ ನಿಕ್ಷೇಪ ಇವೆ. ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ, ಶಿಲ್ಪಕಲೆಯ ತವರು. ಇದೇ ಲಕ್ಕುಂಡಿ ಟಂಕಸಾಲೆಯಿಂದ ಪ್ರಸಿದ್ಧವಾಗಿತ್ತು. ಟಂಕಸಾಲೆಯಲ್ಲಿ ಚಿನ್ನದ ನಾಣ್ಯಗಳನ್ನು ರೆಡಿ ಮಾಡಲಾಗುತ್ತಿತ್ತು. ಇಲ್ಲಿಯ ಟಂಕಸಾಲೆಗಳಿಗೆ ಚಿನ್ನ ಬರ್ತಿದ್ದಿದ್ದೇ ಕಪ್ಪತ್ತಗುಡ್ಡದಿಂದ. ಬಳಿಕ ಕಪ್ಪತ್ತಗುಡ್ಡದಿಂದ ತರಲಾಗುತ್ತಿದ್ದ ಚಿನ್ನವನ್ನು ಲಕ್ಕುಂಡಿಯ ಟಂಕಸಾಲೆಯಲ್ಲಿ ಶುದ್ಧೀಕರಿಸಿ, ಚಿನ್ನದ ನಾಣ್ಯಗಳನ್ನು ತಯಾರಿಸಲಾಗುತ್ತಿತ್ತು ಅಂತ ಇತಿಹಾಸ ತಜ‌್ಞರು ಅಭಿಪ್ರಾಯ ಪಟ್ಟಿದ್ದಾರೆ. ಚಾಲುಕ್ಯರ ಕಾಲದಲ್ಲಿ ಆರಂಭವಾಗಿದ್ದ ಚಿನ್ನದ ಬೇಟೆ, ವಿಜಯನಗರ ಅರಸರ ಕಾಲದಲ್ಲಿಯೂ ಮುಂದುವರಿದಿತ್ತು. ಬ್ರಿಟಿಷರ ಕಾಲದಲ್ಲೂ ಇಲ್ಲಿ ಚಿನ್ನ ಅಗೆಯಲಾಗಿದ್ದು, ಗದಗ ಜಿಲ್ಲೆಯ ಅತ್ತಿಕಟ್ಟಿ, ಮಾಹಾಲಿಂಗಪೂರ ಗ್ರಾಮದ ಸಮೀಪವಿರುವ ಗುಹೆಗಳು ಅದಕ್ಕೆ ಸಾಕ್ಷಿಯಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
