AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಯಿ ಕುಮಾರ್ ಎದುರು ನಿಂತು ಸೈಲೆಂಟ್ ಆದ ಹೊಸ ಹೀರೋ; ಆಮೇಲೆ ಏನಾಯ್ತು?

ಸಾಯಿ ಕುಮಾರ್ ಎದುರು ನಿಂತು ಸೈಲೆಂಟ್ ಆದ ಹೊಸ ಹೀರೋ; ಆಮೇಲೆ ಏನಾಯ್ತು?

ಮದನ್​ ಕುಮಾರ್​
|

Updated on:Feb 05, 2026 | 6:41 PM

Share

‘ಜೋಗಿ’ ಖ್ಯಾತಿಯ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರ ಮಗ ಅರುಣ್ ರಾಮ್ ಪ್ರಸಾದ್ ‘ಘಾರ್ಗಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಅರುಣ್ ಅವರೇ ಹೀರೋ. ಇದೇ ಚಿತ್ರದಲ್ಲಿ ಸಾಯಿ ಕುಮಾರ್, ಅರುಣ್ ಸಾಗರ್ ಮುಂತಾದ ಹಿರಿಯ ಕಲಾವಿದರು ಕೂಡ ನಟಿಸಿದ್ದಾರೆ.

‘ಜೋಗಿ’ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರ ಮಗ ಅರುಣ್ ರಾಮ್ ಪ್ರಸಾದ್ ‘ಘಾರ್ಗಾ’ (Gharga) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅರುಣ್ ಅವರೇ ಹೀರೋ. ಇದೇ ಸಿನಿಮಾದಲ್ಲಿ ಸಾಯಿ ಕುಮಾರ್, ಅರುಣ್ ಸಾಗರ್ ಮುಂತಾದ ಹಿರಿಯ ಕಲಾವಿದರು ಸಹ ಅಭಿನಯಿಸಿದ್ದಾರೆ. ಮೊದಲ ಬಾರಿಗೆ ಸಾಯಿ ಕುಮಾರ್ (Sai Kumar) ಅವರ ಜೊತೆ ನಟಿಸುವಾಗ ಏನಾಯಿತು ಎಂಬುದಕ್ಕೆ ಅರುಣ್ ರಾಮ್ ಪ್ರಸಾದ್ ಅವರು ವಿವರಿಸಿದ್ದಾರೆ. ‘ಮೊದಲ ದಿನ ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಮಾಡಿದ್ದು ಇನ್ನೂ ನನಗೆ ಚೆನ್ನಾಗಿ ನೆನಪಿದೆ. ರಿಹರ್ಸಲ್ ಮಾಡಿದ್ದೆವು. ಹಾಗಾಗಿ ಕಾನ್ಫಿಡೆನ್ಸ್ ಇತ್ತು. ಆದರೆ ಮೊದಲ ಶಾಟ್​​ನಲ್ಲಿ ಅವರು ನನ್ನನ್ನು ನೋಡಿದರು. ಆಗ ನನಗೆ ಎಲ್ಲವೂ ಮರೆತು ಹೋಯಿತು. ಆಮೇಲೆ ಅವರು ಕ್ಯಾರವಾನ್​​ಗೆ ಕರೆದುಕೊಂಡು ಹೋಗಿ ಸಮಾಧಾನ ಮಾಡಿದರು. ಪ್ರತಿ ದಿನ ಅವರು ನನ್ನನ್ನು ಊಟಕ್ಕೆ ಕರೆದುಕೊಂಡು ಹೋದರು. ಅದರಿಂದ ಅವರ ಜೊತೆ ನಟಿಸುವುದು ಸುಲಭ ಆಯಿತು’ ಎಂದು ಅರುಣ್ ರಾಮ್​ ಪ್ರಸಾದ್ (Arun Ram Prasad) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Feb 04, 2026 10:10 PM
Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More