ವಿಜಯಪುರ: ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಶವ ಪಡೆಯಲು ₹2.5 ಲಕ್ಷ ಪಾವತಿಸಲು ಹೇಳುತ್ತಿದ್ದಾರೆ ಎಂದು ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಸ್ಥರು ಆರೋಪಿಸಿದ್ದಾರೆ. ವಿಜಯಪುರದ ಬಂಜಾರಾ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸೋಂಕಿತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಕೊರೊನಾ ಸೋಂಕಿನಿಂದ ತಮ್ಮವರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರಿಂದ ಆಸ್ಪತ್ರೆ ಹಣ ಪೀಕಲು ಮುಂದಾಗಿದೆಯಂತೆ. ಕೊವಿಡ್‌ಗೆ ಬಲಿಯಾದವರ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದು ಆಕ್ರೋಶ ಹೊರ ಹಾಕಿದ್ದಾರೆ. ಕುಟುಂಬವೊಂದರ ಇಬ್ಬರು ಕೊರೊನಾ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆ 11.50 ಲಕ್ಷ ಬಿಲ್ ಮಾಡಿದೆಯಂತೆ. ಆದರೆ ಈಗಾಗಲೇ ಈ ಕುಟುಂಬ 9 ಲಕ್ಷ ರೂಪಾಯಿ ಕಟ್ಟಿದೆಯಂತೆ. ಈಗ ಕೊವಿಡ್ ಚಿಕಿತ್ಸೆ ಫಲಿಸದೆ ಸುರೇಶ ನಾಯಕ (57) ಶಿಲ್ಪಾ ನಾಯಕ (37) ಇಬ್ಬರೂ ಮೃತಪಟ್ಟಿದ್ದಾರೆ. ಉಳಿದ 2.5 ಲಕ್ಷ ಪಾವತಿಸಿ ಮೃತದೇಹ ಪಡೆಯಲು ಆಸ್ಪತ್ರೆ ಸಿಬ್ಬಂದಿ ಸೂಚಿಸಿದ್ದಾರೆ. ಹೀಗಾಗಿ ಬಂಜಾರಾ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಹಣ ಪೀಕುತ್ತಿರುವ ಆರೋಪ ಮಾಡಿದ್ದಾರೆ. ಹಾಗೂ ಹಣ ನೀಡಲಾಗದೆ ಕಣ್ಣೀರು ಹಾಕಿದ್ದಾರೆ.
ಇನ್ನು ಮೃತರು ವಿಜಯಪುರ ನಗರದ ರಾಘವೇಂದ್ರ ಕಾಲೋನಿ ನಿವಾಸಿಗಳು. ಮೃತ ಸುರೇಶ ನಾಯಕ್ ಕೋ ಆಪರೇಟಿಂಗ್ ಡಿಪಾರ್ಟ್‌ಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ತಿಂಗಳು 22 ರಂದು ಆಸ್ಪತ್ರೆಗೆ ದಾಖಲಾಗಿದ್ದ ಸುರೇಶ್ ಚಿಕಿತ್ಸೆ ಫಲಕಾರಿಯಾಗದೇ 5 ರಂದು ಮೃತಪಟ್ಟಿದ್ದಾರೆ. ಅವರ ಪತ್ನಿ ಶಿಲ್ಪಾ ನಾಯಕ (25) ಸಹಿತ ಕಳೆದ ತಿಂಗಳು 25 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ತಡ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಬಾಕಿ ಉಳಿದ 2.5 ಲಕ್ಷ ಹಣ ಕಟ್ಟಿ ಬಾಡಿ ತೆಗೆದುಕೊಂಡ ಹೋಗಿ ಎಂದು ಆಸ್ಪತ್ರೆಯ ಸಿಬ್ಬಂದಿ ಡಿಮ್ಯಾಂಡ್ ಮಾಡಿದ್ದಾರೆ. ಆದರೆ ಇಬ್ಬರ ಚಿಕಿತ್ಸೆಗಾಗಿ ಈಗಾಗಲೇ 9 ರೆಮ್ಡಿಸಿವಿರ್ ಇಂಜೆಕ್ಷನ್ ಹಾಗೂ ಪ್ಲಾಸ್ಮಾ ತಂದು ಕೊಟ್ಟಿದ್ದಾರಂತೆ. ಇಷ್ಟೆಲ್ಲಾ ಮಾಡಿದ್ರೂ ಇಬ್ಬರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಬೀದರ್ ಜಿಲ್ಲಾಸ್ಪತ್ರೆಯ ವೈದ್ಯರು