Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭ್ರಷ್ಟಾಚಾರ ಆರೋಪ; ರಾಜ್ಯದ ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬೀಳುತ್ತಾ ಬೀಗ?

ರಾಜ್ಯದ ಪ್ರತಿಷ್ಟಿತ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ವಿಜಯಪುರ ಜಿಲ್ಲೆಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಮೊದಲ ಸ್ಥಾನದಲ್ಲಿದೆ. ಇಂತಹ ನಂದಿ ಸಕ್ಕರೆ ಕಾರ್ಖಾನೆಗೆ ಬೀಗ ಬೀಳುತ್ತದೆಯಾ ಎಂಬ ಮಾತುಗಳು ಇದೀಗ ಕೇಳಿ ಬರುತ್ತಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಭ್ರಷ್ಟಾಚಾರ ಆರೋಪ; ರಾಜ್ಯದ ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬೀಳುತ್ತಾ ಬೀಗ?
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 15, 2023 | 3:16 PM

ವಿಜಯಪುರ: ಜಿಲ್ಲೆಯ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭ್ರಷ್ಟಾಚಾರ, ವಿವಿಧ ಕಾಮಗಾರಿ ಗುತ್ತಿಗೆ ರದ್ದು ಮಾಡಿ ಹಣ ದುರುಪಯೋಗ ಆರೋಪ. ಹೌದು ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕ ಗಲಗಲಿ ಬಳಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ರೈತರು ಬೆಳೆದ ಕಬ್ಬಿಗೆ ಉತ್ತಮ ಹಾಗೂ ಹೆಚ್ಚಿನ ದರ ನೀಡುವ ಕಾರ್ಖಾನೆಯೆಂದೇ ಪ್ರಸಿದ್ದಿಯಾಗಿದೆ. ಜೊತೆಗೆ ಕಬ್ಬು ಸಾಗಾಟ ಮಾಡಿದ ಒಂದು ತಿಂಗಳಲ್ಲೇ ಕಬ್ಬಿನ ಬಿಲ್ ಪಾವತಿ ಮಾಡುವ ವಾಡಿಕೆ ಇಲ್ಲಿ ನಡೆದುಕೊಂಡು ಬಂದಿದೆ. 214 ಎಕರೆ ವಿಸ್ತಾರದಲ್ಲಿರುವ ಈ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ 33 ವರ್ಷಗಳ ಇತಿಹಾಸವಿದೆ. 11000 ಕ್ಕೂ ಆಧಿಕ ಶೇರ್ ಹೋಲ್ಡರ್​ಗಳನ್ನು ಹಾಗೂ 15000 ಕ್ಕೂ ಆಧಿಕ ರೈತರು ತಮ್ಮ ಕಬ್ಬನ್ನು ಇಲ್ಲಿ ಕಳುಹಿಸುತ್ತಾರೆ. ಇಂತಹ ಹಿನ್ನಲೆಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಇದೀಗ ಬೀಗ ಹಾಕುವತ್ತಾ ಹೆಜ್ಜೆ ಹಾಕುತ್ತಿದೆಯಾ ಎಂಬ ಮಾತುಗಳು ಕೇಳಿ ಬಂದಿದೆ. ಕಾರಣ ಹಾಲಿ ಆಡಳಿತ ಮಂಡಳಿ ಆಧ್ಯಕ್ಷ ಶಶಿಕಾಂತ ಪಾಟೀಲ್ ಹಾಗೂ ಮಂಡಳಿಯು ಕಾನೂನು ಬಾಹಿರವಾಗಿ ಕೆಲಸ, ಕಾಮಗಾರಿಗಳನ್ನು ಮಾಡುತ್ತಿದ್ದಾರೆಂದು ಶೇರುದಾರರು ಆರೋಪ ಮಾಡಿದ್ದಾರೆ.

ಕಬ್ಬು ಉತ್ಪಾದನೆ ಹೆಚ್ಚಾಗಿದ್ದ ಕಾರಣ ಹಿಂದಿನ ಆಡಳಿತ ಮಂಡಳಿ ಕಬ್ಬನ್ನು ನುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಠರಾವು ಪಾಸ್ ಮಾಡಿದ್ದರು. ಹಾಲಿ ಇರತಕ್ಕಂತಹ ಪ್ರತಿದಿನ 6000ಟನ್ ಸಾಮರ್ಥ್ಯದ ಜೊತೆಗೆ ಮತ್ತೆ ಪ್ರತಿದಿನ 7500ಟನ್ ನುರಿಸುವ ಸಾಮರ್ಥ್ಯದ ಹೊಸ ವಿಸ್ತರಣ ಯೋಜನೆಯನ್ನು ಹಮ್ಮಿಕೊಂಡು ಸುಮಾರು 234 ಕೋಟಿ ವೆಚ್ಚದಲ್ಲಿ ಅಳವಡಿಸಲು ಇಸಜಾಕ್ ಎಂಬ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಆದರೆ ಹಾಲಿ ಆಡಳಿತ ಮಂಡಳಿಯು ಈ ಟೆಂಡರನ್ನು 7500 ಟನ್ ಬದಲಾಗಿ 4000 ಟನ್ ಸಾಮರ್ಥ್ಯಕ್ಕೆ ಇಳಿಸಿ 330 ಕೋಟಿ ವೆಚ್ಚ ಮಾಡಿ ಪೂನಾದ ಎಸ್ ಎಸ್ ಇಂಜೀನಿಯರಿಂಗ್ ಕಂಪನಿಗೆ ಕಾನೂನು ಬಾಹೀರವಾಗಿ ಕಾಮಗಾರಿ ನೀಡಿದರು. ಇದರಲ್ಲಿ ಸುಮಾರು 90 ಕೋಟಿ ಅವ್ಯವಹಾರ ಆಗಿದೆಯೆಂದು ಮಾಜಿ ಆಡಳಿತ ಮಂಡಳಿ ಹಾಗೂ ಶೇರುದಾರರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ವಿಜಯಪುರ: ಬಾಯ್ಲರ್​ ಸ್ಫೋಟದಲ್ಲಿ ಗಾಯಗೊಂಡಿದ್ದ ಓರ್ವ ಕಾರ್ಮಿಕ ಸಾವು

ಇನ್ನು ಕೆಳದ ಫೆಬ್ರವರಿ 3 ರಂದು ಸಕ್ಕರೆ ಕಾರ್ಖಾನೆಯಲ್ಲಿ ನೂತನವಾಗಿ ಸ್ಥಾಪನೆ ಮಾಡಿದ್ದ ಬಾಯ್ಲರ್ ಪ್ರಾಯೋಗಿಕ ಪರೀಕ್ಷೆ ನಡೆಸುವ ವೇಳೆ ಸ್ಟೋಟಗೊಂಡಿತ್ತು. ಘಟನೆಯಲ್ಲಿ ಐವರು ಕಾರ್ಮಿಕರು ಸುಟ್ಟ ಗಾಯಗಳಿತ್ತು. ಜೊತೆಗೆ ಗಾಯಗೊಂಡವರ ಪೈಕಿ ಓರ್ವ ಕಾರ್ಮಿಕ ಮೃತ ಪಟ್ಟರೆ ಇನ್ನು ನಾಲ್ವರು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾರೆ. ಇದೆಲ್ಲದಕ್ಕೇ ಶಶಿಕಾಂತ ಪಾಟೀಲ್​ ಆಧ್ಯಕ್ಷತೆಯ ಹಾಲಿ ಆಡಳಿತ ಮಂಡಳಿ ಮಾಡಿರೋ ಕಳಪೆ ಕಾಮಗಾರಿಯೇ ಕಾರಣ. ಕಳೆದ 2017 ಅಕ್ಟೋಬರ್​ 23 ರಂದು ಹೊಸ ಬೈಲರ್ ಅಳವಡಿಸಲು ಶ್ರೀ ಇಸ್‌ಜಾಕ್ ಕಂಪನಿಯವರಿಗೆ ಸರ್ವ ಸದಸ್ಯರ ಸಭೆಯಲ್ಲಿ ತಿರ್ಮಾನಿಸಿ ಕೊಟೇಶನ್ ಪ್ರಕಾರ ಆಯ್ಕೆ ಮಾಡಲಾಗಿತ್ತು. ಟೆಂಡರ್‌ನ್ನು ಮುಂದೆ ಆಯ್ಕೆಯಾದ ಆಡಳಿತ ಮಂಡಳಿಯ ಇಸ್‌ಜಾಕ್ ಕಂಪನಿಯವರಿಗೆ ನೀಡಿರುವ ಟೆಂಡರ್‌ನ್ನು ರದ್ದು ಪಡಿಸಿ, ಕೆಟಿಟಿಪಿ ಆ್ಯಕ್ಟ್ ಉಲ್ಲಂಘಿಸಿ ಬೇರೆ ಕಂಪನಿಯಾದ ಎಸ್.ಎಸ್. ಇಂಜೀನಿಯರಿಂಗ್ ಪುಣೆಯವರಿಗೆ ರೂ 49 ಕೋಟಿಗೆ ರೂಪಾಯಿ ಕಾನೂನು ಬಾಹಿರವಾಗಿ ನೀಡಿದೆ.

ಈಗಿನ ಆಡಳಿತ ಮಂಡಳಿಯೂ ಮೊದಲು ಟೆಂಡರ್ ನೀಡಿರುವ ಇಸ್‌ಜಾಕ್ ಕಂಪನಿಯವರು ಕೋರ್ಟಿಗೆ ಹೋದ ಕಾರಣಕ್ಕಾಗಿ, ಇಸ್‌ಜಾಕ್ ಕಂಪನಿಯವರೊಂದಿಗೆ ಆಡಳಿತ ಮಂಡಳಿಯವರು ಒಪ್ಪಂದ ಮಾಡಿಕೊಂಡು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡು ದಂಡ ಭರಣ ಮಾಡಿ ಸುಮಾರು 3 ಕೋಟಿಗೆ ದುಡ್ಡನ್ನು ಕಂಪನಿಯವರಿಗೆ ಮರಳಿಸಿರುತ್ತಾರೆ. ಇದರ ಮುಂಚಿತವಾಗಿ ಮೊದಲಿನ ಆಡಳಿತ ಮಂಡಳಿ ಕಂಪನಿಗೆ ಟೆಂಡರ್ ಪ್ರಕಾರ 2 ಕೋಟಿ 50ಲಕ್ಷ ಮುಂಗಡವಾಗಿ ಕೊಟ್ಟಿರುತ್ತಾರೆ. ಒಟ್ಟಾರೆಯಾಗಿ ಕಾರ್ಖಾನೆಗೆ ಈಗಿನ ಆಡಳಿತ ಮಂಡಳಿ 5.5 ಕೋಟಿ ಹಾನಿವುಂಟು ಮಾಡಿರುತ್ತಾರೆ. ಇವೆಲ್ಲಾ ಕಾರಣಗಳಿಂದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಹದೆಗೆಟ್ಟು ಹೋಗಿದೆ.

ಇದನ್ನೂ ಓದಿ:ವಿಜಯನಗರದಲ್ಲಿ ಹಂಪಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಅನುಮೋದನೆ; ಸಚಿವ ಸಂಪುಟದ ಪ್ರಮುಖ ನಿರ್ಧಾರಗಳ ವಿವರ ಇಲ್ಲಿದೆ

ಒಟ್ಟಾರೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಆದಂತ ಬ್ಯಾಯ್ಲರ್ ಸ್ಪೋಟದ ಕುರಿತು ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ಹಾಲಿ ಆಧ್ಯಕ್ಷ ಶಶಿಕಾಂತ ಪಾಟೀಲ್ ನೀಡುತ್ತಿಲ್ಲ. ಈ ಕುರಿತು ಹೇಳಿಕೆಯನ್ನೂ ಸಹ ನೀಡುತ್ತಿಲ್ಲಾ. ಸದ್ಯ ಇವೆಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿರೋ ಶೇರುದಾರರು, ಕಬ್ಬು ಬೆಳೆಗಾರರು ಮಾತ್ರ ಹಾಲಿ ಆಡಳಿತ ಮಂಡಳಿ ಮೇಲೆ ತೀವ್ರ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಹಣಕಾಸಿನ ಭ್ರಷ್ಟಾಚಾರ, ಕಳಪೆ ಕಾಮಗಾರಿ ಮಾಡುತ್ತಿರೋ ಕಾರಣ ನಂದಿ ಸಕ್ಕರೆ ಕಾರ್ಖಾನೆಯನ್ನು ಮುಚ್ಚುವ ಸ್ಥಿತಿಗೆ ತಲುಪುತ್ತಾರೆಂಬ ಸಂಶಯವನ್ನೂ ವ್ಯಕ್ತಪಡಿಸಿದ್ದಾರೆ. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಮುಚ್ಚಿಸಲೆಂದೇ ಇವೆಲ್ಲ ಮಾಡುತ್ತಿದ್ದಾರೆ. ಇವೆಲ್ಲವುಗಳ ಹಿಂದೆ ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಕೈವಾಡವಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿವೆ.

ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್