ವಿಜಯಪುರ: ಬಾಯ್ಲರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಓರ್ವ ಕಾರ್ಮಿಕ ಸಾವು
ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಾಪಿಸಿದ್ದ ನೂತನ ಬಾಯ್ಲರ್ ಸ್ಪೋಟದಿಂದ 5 ಜನರು ಗಾಯಗೊಂಡಿದ್ದರು. ಇದೀಗ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನುಳಿದ ನಾಲ್ವರಿಗೆ ಚಿಕಿತ್ಸೆ ಮುಂದುವರೆದಿದೆ.
ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಾಪಿಸಿದ್ದ ನೂತನ ಬಾಯ್ಲರ್ ಸ್ಪೋಟದಿಂದ ಗಾಯಗೊಂಡಿದ್ದ ವ್ಯಕ್ತಿ ಸಾವು. ನಿನ್ನೆ(ಮಾ.4) ಮಧ್ಯಾಹ್ನದ ವೇಳೆ ಬಾಯ್ಲರ್ನ ಪ್ರಾಯೋಗಿಕ ಪರೀಕ್ಷೆ ನಡೆಸುವ ವೇಳೆ ಸ್ಪೋಟಗೊಂಡಿತ್ತು. ಈ ವೇಳೆ 5 ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ವಿಜಯಪುರದ BLDE ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಪಶ್ಚಿಮ ಬಂಗಾಳ ಮೂಲದ ಸಂದೀಪ ಮಂಡಳ (21)ಎಂಬಾತ ಸಾವನ್ನಪ್ಪಿದ್ದಾನೆ.
ಇನ್ನು ಈ ಸಂದರ್ಭದಲ್ಲಿ ಗಾಯಗೊಂಡಿದ್ದ ಐದು ಜನರ ಪೈಕಿ ಒಬ್ಬ ಸಾವನ್ನಪ್ಪಿದ್ದು. ಪರಸನಜೀತ ಮಂಡಳ, ರಾಜಕುಮಾರ ರಾಮ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಇಮ್ರಾನ್ ಅನ್ಸಾರಿ, ಅಶೋಕ್ಕುಮಾರ ರಾಮ್ ಇವರಿಗೆ BLDE ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪೂನಾದ ಎಸ್.ಎಸ್ ಇಂಜಿನಿಯರ್ಸ್ನಿಂದ ಅಳವಡಿಸಿದ್ದ 51 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ನೂತನ ಬಾಯ್ಲರ್ ಇದಾಗಿದ್ದು, 220 ಟನ್ ಕೆಪಾಸಿಟಿ ಹೊಂದಿದೆ. ದೆಹಲಿಯ ಐ.ಎಸ್.ಜಿ.ಸಿ ಕಂಪನಿಯ ಬಾಯ್ಲರ್ ಗುತ್ತಿಗೆ ರದ್ದು ಪಡಿಸಿದ್ದ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ, ಪೂನಾದ ಎಸ್.ಎಸ್ ಇಂಜಿನಿಯರ್ಸ್ನಿಂದ ಅಳವಡಿಸಿತ್ತು. ಇದರಿಂದ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತ ಪಾಟೀಲ್ ನೇತೃತ್ವದ ಆಡಳಿತ ಮಂಡಳಿಯಿಂದ ಆಧಿಕಾರ ದುರುಪಯೋಗ ಆರೋಪ ಕೇಳಿಬಂದಿದ್ದು, ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ವಿಜಯಪುರ: 60 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ; ಕೃತ್ಯ ಎಸಗಿದ್ದ ಇಬ್ಬರು ಕಾಮುಕರ ಹೆಡೆಮುರಿ ಕಟ್ಟಿದ ಪೊಲೀಸರು
ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ಉತ್ತರ ಕನ್ನಡ: ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ಟೇಬ್ರಿ ಹಳ್ಳದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕ ಮದ್ಯ ಸೇವನೆ; ನಿರ್ವಾಹಕ ಬಸ್ ಚಾಲನೆ; ಕೆಂಭಾವಿ ಪಟ್ಟಣದಲ್ಲಿ ತಪ್ಪಿದ ಬಾರಿ ಅನಾಹುತ
ಯಾದಗಿರಿ: ಮದ್ಯ ಕುಡಿದು ಅಮಲಿನಲ್ಲಿ ತೇಲಾಡುತ್ತಿದ್ದ ಸರ್ಕಾರಿ ಬಸ್ ಚಾಲಕ ಕಾಸಿಂಪಟೇಲ್ ಬದಲು, ನಿರ್ವಾಹಕ ಅಂಬರೀಶ ಎಂಬಾತ ಬಸ್ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಈ ವೇಳೆ ಆತನ ನಿಯಂತ್ರಣ ತಪ್ಪಿ ಜಿಲ್ಲೆಯ ಕೆಂಬಾವಿ ಪಟ್ಟಣದ ನಾರಾಯಣಪೂರ ಎಡದಂಡೆ ಕಾಲುವೆ ಪಕ್ಕದಲ್ಲಿ ಬಸ್ ನಿಂತಿದೆ. ಸ್ವಲ್ಪ ಆಯಾ ತಪ್ಪಿದ್ದರೂ ಬಸ್ ಕಾಲುವೆಗೆ ಉರುಳುತ್ತಿದ್ದು, ಸ್ವಲ್ಪದರಲ್ಲಿಯೇ ಬಾರಿ ಅನಾಹುತ ತಪ್ಪಿದೆ. ಬಳಿಕ ಚಾಲಕನ ಅವ್ಯವಸ್ಥೆ ಕಂಡು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ