ನಿಜವಾಯ್ತು ಬಬಲಾದಿ ಸದಾಶಿವಮುತ್ಯಾರ ಮಠದ ಕಾಲಜ್ಞಾನ ಭವಿಷ್ಯ; 9 ತಿಂಗಳ ಹಿಂದಿನ ವಿಡಿಯೋ ಈಗ ವೈರಲ್​

500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪ ಸ್ಚಾಮೀಜಿ ಬರೆದಿಟ್ಟಿರುವ ಕಾಲಜ್ಞಾನದ ಕುರಿತು 2021ರ ಶಿವರಾತ್ರಿಯಲ್ಲಿ ನಡೆದಿದ್ದ ಸದಾಶಿವ ಮುತ್ಯಾರ ಜಾತ್ರೆಯಲ್ಲಿ ಸ್ವಾಮೀಜಿ ತಿಳಿಸಿದ್ದಾರೆ. ಪ್ರತಿ ವರ್ಷ ಶಿವರಾತ್ರಿ ಜಾತ್ರೆಯಲ್ಲಿ ಕಾಲಜ್ಞಾನವನ್ನು ಓದಲಾಗುತ್ತದೆ.

ನಿಜವಾಯ್ತು ಬಬಲಾದಿ ಸದಾಶಿವಮುತ್ಯಾರ ಮಠದ ಕಾಲಜ್ಞಾನ ಭವಿಷ್ಯ; 9 ತಿಂಗಳ ಹಿಂದಿನ ವಿಡಿಯೋ ಈಗ ವೈರಲ್​
ಬಬಲಾದಿ ಮಠದ ಪೀಠಾಧಿಪತಿ‌ ಸಿದ್ದರಾಮಯ್ಯ ಹೋಳಿಮಠ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 29, 2021 | 4:49 PM

ವಿಜಯಪುರ: ತಿರುಪತಿಯಲ್ಲಿ ಉಂಟಾದ ಜಲಪ್ರಳಯದ ಬಗ್ಗೆ 9 ತಿಂಗಳ ಮುಂಚೆಯೇ ಬಬಲಾದಿ ಸದಾಶಿವಮುತ್ಯಾರ ಮಠದ (Babaladi Sadashiv Mutya mutt) ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಬಬಲಾದಿ ಮಠದ ಪೀಠಾಧಿಪತಿ‌ ಸಿದ್ದರಾಮಯ್ಯ ಹೋಳಿಮಠ ನುಡಿದ ಕಾಲಜ್ಞಾನ ಈಗ ನಿಜವಾಗಿದೆ. ಕಳೆದ ಶಿವರಾತ್ರಿ ಜಾತ್ರೆ ವೇಳೆ ಆಂಧ್ರ-ತೆಲಗು ರಾಜ್ಯಕ್ಕೆ ಕೇಡು ಎಂದು ಮೊದಲೇ ಸ್ವಾಮೀಜಿ ಕಾಲಜ್ಞಾನ ಭವಿಷ್ಯ ಹೇಳಿದ್ದರು. ಆಂಧ್ರ ಪ್ರದೇಶಕ್ಕೆ, ತೆಲಗು ಮಾತನಾಡುವ ರಾಜ್ಯಕ್ಕೆ ಜಲ‌ಕಂಟಕ ಇದೆ ಎಂದು ತಿಳಿಸಿದ್ದರು. ಸಾಮಾಜಿಕ ತಾಲ‌ತಾಣದಲ್ಲಿ ಸ್ವಾಮೀಜಿ ನುಡಿದಿರುವ ಕಾಲಜ್ಞಾನ ಈಗ ವೈರಲ್ ಆಗಿದೆ.

500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪ ಸ್ಚಾಮೀಜಿ ಬರೆದಿಟ್ಟಿರುವ ಕಾಲಜ್ಞಾನದ ಕುರಿತು 2021ರ ಶಿವರಾತ್ರಿಯಲ್ಲಿ ನಡೆದಿದ್ದ ಸದಾಶಿವ ಮುತ್ಯಾರ ಜಾತ್ರೆಯಲ್ಲಿ ಸ್ವಾಮೀಜಿ ತಿಳಿಸಿದ್ದಾರೆ. ಪ್ರತಿ ವರ್ಷ ಶಿವರಾತ್ರಿ ಜಾತ್ರೆಯಲ್ಲಿ ಕಾಲಜ್ಞಾನವನ್ನು ಓದಲಾಗುತ್ತದೆ.

ಪುನೀತ್ ಸಾವಿನ ಬಗ್ಗೆಯೂ ಮುಂಚೆಯೇ ಭವಿಷ್ಯ ನುಡಿದಿತ್ತಾ ಬಬಲಾದಿ ಮಠ? ಓರ್ವ ಗಣ್ಯ ವ್ಯಕ್ತಿಯ ಏರಿಳಿತವಾಗುತ್ತದೆ ಎಂದು ಸ್ವಾಮೀಜಿ ಈ ಹಿಂದೆ ಭವಿಷ್ಯ ನುಡಿದಿದ್ದರು. ಅದರಂತೆ ನಟ ಪುನೀತ್ ರಾಜ್ ಕುಮಾರ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆಯೂ ಈಗ ಮಾತುಗಳು ಕೇಳಿಬರುತ್ತಿದೆ. ಇನ್ನು ಸಿಎಂ ಬದಲಾವಣೆ ಬಗ್ಗೆ, ರಾಜಕೀಯ ವ್ಯಕ್ತಿಯ ಏರಿಳಿತ ಎಂದು ಸ್ವಾಮೀಜಿ ಹೇಳಿದ್ದರು. ಅದರಂತೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿ, ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ.

ರಾಜಕೀಯ ಪಕ್ಷಗಳಲ್ಲಿ ದ್ವೇಷ ಅಸೂಯೆ ಹೆಚ್ಚಾಗುತ್ತದೆ ಎಂದು ಬಬಲಾದಿ ಕಾಲಜ್ಞಾನದಲ್ಲಿ ಉಲ್ಲೇಖವಾಗಿತ್ತು. ಆ ಪ್ರಕಾರ ರಾಜಕೀಯದಲ್ಲಿ ಒಂದೇ ಪಕ್ಷದ ನಾಯಕರಗಳ ನಡುವೆ ದ್ವೇಷ ಅಸೂಯೆ ಹೆಚ್ಚಾಗುತ್ತದೆ ಎಂದು ಸ್ವಾಮೀಜಿ ಸಿದ್ದರಾಮಯ್ಯ ಹೋಳಿಮಠ ನುಡಿದಿದ್ದರು. ಈ ಭವಿಷ್ಯ ಕೂಡ ನಿಜವಾಗಿದೆ. ಅಲ್ಲದೇ ಅಮೇರಿಕಾ, ಇರಾನ್-ಇರಾಕ್ ದೇಶಗಳಿಗೆ ಕೇಡು ಎಂದು ಬಬಲಾದಿ ಶ್ರೀಗಳು ಹೇಳಿದ್ದರು. ಈಗಾಗಲೇ ತಾಲಿಬಾನ್ ಅಘ್ಪಾನಿಸ್ತಾನ್​ ಮತ್ತು ಅಮೇರಿಕಾಕ್ಕೆ ಸಂಚಲನ ಉಂಟುಮಾಡಿದೆ.  ಬಬಲಾದಿಯ ಕಾಲಜ್ಞಾನ ಎಂದೂ ಸುಳ್ಳಾಗಲ್ಲಾ ಎಂದು ಭಕ್ತರು ಹೇಳಿದ್ದಾರೆ.

ಇದನ್ನೂ ಓದಿ: ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಎಂದು ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ

ಕಾನೂನುಬಾಹಿರವಾಗಿ ಸರ್ಕಾರದಿಂದ ಅನುದಾನ ಪಡೆದಿದ್ದಾರೆ; ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ

Published On - 10:45 am, Fri, 26 November 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ