ನಿಷ್ಠಾವಂತ ಬಿಜೆಪಿಯವರಿಗೆ ಮಾತ್ರ ಪದಾಧಿಕಾರಿ ಮಾಡಿದ್ದಾರೆ, ಅವರೆಲ್ಲ ನಿಷ್ಠಾವಂತರು; ಯತ್ನಾಳ್ ಅಸಮಾಧಾನ

ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಪದಾಧಿಕಾರಿಗಳ ಆಯ್ಕೆ ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ನನ್ನ ಗಮನಕ್ಕೆ ಬರುತ್ತದೆ. ನಾವೇನು ಬಿಜೆಪಿ ಕಾರ್ಯಕರ್ತರಾ?ಎಂದು ಅಸಮಾಧಾನ ಹೊರಹಾಕಿದರು.

ನಿಷ್ಠಾವಂತ ಬಿಜೆಪಿಯವರಿಗೆ ಮಾತ್ರ ಪದಾಧಿಕಾರಿ ಮಾಡಿದ್ದಾರೆ, ಅವರೆಲ್ಲ ನಿಷ್ಠಾವಂತರು; ಯತ್ನಾಳ್ ಅಸಮಾಧಾನ
ಬಸವನಗೌಡ ಪಾಟೀಲ್ ಯತ್ನಾಳ್
Follow us
TV9 Web
| Updated By: ಆಯೇಷಾ ಬಾನು

Updated on:Dec 24, 2023 | 9:35 AM

ವಿಜಯಪುರ, ಡಿ.24: ಪದಾಧಿಕಾರಿಗಳ ಆಯ್ಕೆ ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ನನ್ನ ಗಮನಕ್ಕೆ ಬರುತ್ತದೆ. ನಾವೇನು ಬಿಜೆಪಿ ಕಾರ್ಯಕರ್ತರೇನು? ನಾವು ದೇಶದ ಕಾರ್ಯಕರ್ತರು ಅಷ್ಟೆ. ನಿಷ್ಠಾವಂತ ಬಿಜೆಪಿಯವರಿಗೆ ಮಾತ್ರ ಪದಾಧಿಕಾರಿ ಮಾಡಿದ್ದಾರೆ. ಅವರೆಲ್ಲ ನಿಷ್ಠಾವಂತರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಪದಾಧಿಕಾರಿಗಳ ಆಯ್ಕೆ ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ನನ್ನ ಗಮನಕ್ಕೆ ಬರುತ್ತದೆ. ನಾವೇನು ಬಿಜೆಪಿ ಕಾರ್ಯಕರ್ತರಾ?ಎಂದು ಅಸಮಾಧಾನ ಹೊರಹಾಕಿದರು. ನಾವು ದೇಶದ ಕಾರ್ಯಕರ್ತರು ಅಷ್ಟೆ. ನಿಷ್ಠಾವಂತ ಬಿಜೆಪಿಯವರಿಗೆ ಅಷ್ಟೆ ಪದಾಧಿಕಾರಿ ಮಾಡಿದ್ದಾರೆ. ಅವರೆಲ್ಲ ನಿಷ್ಠಾವಂತರು ಎಂದು ವ್ಯಂಗ್ಯವಾಡಿದರು. ಇನ್ನು ಇದೇ ವೇಳೆ ಟ್ವಿಟ್ಟರ್‌ನಲ್ಲಿ ಬಕೆಟ್ ಶಬ್ಧ ಬಳಕೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಅದನ್ನ ನೀವೇ ತಿಳಿದುಕೊಳ್ಳಿ ನಾವೇನು ಹೇಳಲ್ಲ ಎಂದು ಮಾತು ಮುಗಿಸಿದರು.

ಇದನ್ನೂ ಓದಿ: ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ: ಇಲ್ಲಿದೆ ಮಾಹಿತಿ

ಬಿಎಸ್​ವೈ ವಿರುದ್ದ ಯತ್ನಾಳ್ ವಾಗ್ದಾಳಿ

ಈಗ ಕೆಜೆಪಿ 2 ಆಗಿದೆ, ಮುಂದೆ ಅವರ ಮೊಮ್ಮಗ ಬಂದರೆ ಕೆಜೆಪಿ 3 ಆಗುತ್ತದೆ ಎಂದು ಬಿಎಸ್​ವೈ ವಿರುದ್ಧ ವಾಗ್ದಾಳಿ ನಡೆಸಿದರು. ಮತ್ತೊಂದೆಡೆ ರಾಜಕೀಯ ನಿವೃತ್ತಿ ಬಗ್ಗೆ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಈಗಲೇ ನಿವೃತ್ತಿ ಅಲ್ಲ, ಇನ್ನೊಂದು ಎಲೆಕ್ಷನ್ ಇದೆ. 2028ರ‌ ಚುನಾವಣೆ ಬಳಿಕ ನಿರ್ಧಾರ ಮಾಡುವೆ. ಆದರೆ ಯೂ ಟರ್ನ್ ಹೊಡೆದ ಯತ್ನಾಳ್ ಎನ್ನಬೇಡಿ, ಡೈರೆಕ್ಟ್ ಟರ್ನ್ ಎಂದು ಹೇಳಿದರು.

ಯತ್ನಾಳ್ ಕಡು ವಿರೋಧಿ ನಿರಾಣಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ

ರಾಜ್ಯ ಬಿಜೆಪಿ ಪದಾಧಿಕಾರಿಗಳ ನೇಮಕಾತಿ ಪಟ್ಟಿ ಬಿಡುಗಡೆಯಾಗಿದ್ದು ಪದಾಧಿಕಾರಿಗಳ ಪಟ್ಟಿಯಲ್ಲಿ 14ಕ್ಕೂ ಹೆಚ್ಚು BSY ಆಪ್ತರಿಗೆ ಸ್ಥಾನ ನೀಡಲಾಗಿದೆ. ಹಾಗೂ ಮೂವರು ವಿಜಯೇಂದ್ರ ಆಪ್ತರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಶಾಸಕ ಯತ್ನಾಳ್ ಕಡು ವಿರೋಧಿ ನಿರಾಣಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಹಾಗೂ ಯತ್ನಾಳ್ ಮತ್ತೋರ್ವ ರಾಜಕೀಯ ವಿರೋಧಿ ನಡಹಳ್ಳಿಗೂ ಸ್ಥಾನ ನೀಡಲಾಗಿದೆ. ಎ‌.ಎಸ್.ಪಾಟೀಲ್ ನಡಹಳ್ಳಿಗೆ ರೈತ ಮೋರ್ಚಾ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ. BJPಗೆ ಬಂದಿದ್ದ 17 ವಲಸಿಗರ ಪೈಕಿ ಭೈರತಿ ಬಸವರಾಜ್​​ಗೆ ಮಾತ್ರ ಕುರುಬ ಸಮುದಾಯದ ಕೋಟಾದಡಿ‌ ಸ್ಥಾನ ನೀಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:27 am, Sun, 24 December 23