ಬ್ರಾಹ್ಮಣ ಸಮುದಾಯದವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು: ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್

ಅಲ್ಪ ಸಂಖ್ಯಾತ ಹಾಗೂ 2ಎ ಎರಡೆರಡುವ ಮೀಸಲಾತಿ ಲಾಭವನ್ನು ಮುಸ್ಲೀಂ ಸಮುದಾಯದವರು ಪಡೆಯುತ್ತಿದ್ದಾರೆ. 2ಎ ಮೀಸಲಾತಿಯಿಂದ ತೆಗೆದುಹಾಕಲು ಎಲ್ಲ ತಯಾರಿ ನಡೆದಿದೆ.

ಬ್ರಾಹ್ಮಣ ಸಮುದಾಯದವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು: ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್
ಬಿಜೆಪಿ ಶಾಸಕ ಯತ್ನಾಳ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 10, 2022 | 5:47 PM

ವಿಜಯಪುರ: ಬ್ರಾಹ್ಮಣ ಸಮುದಾಯದವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು. ಜನಸಂಖ್ಯೆಯಲ್ಲಿ ಬ್ರಾಹ್ಮಣರು ಕೇವಲ ಶೇಕಡಾ 2ರಿಂದ 3ರಷ್ಟಿದ್ದಾರೆ. ದೇಶದಲ್ಲಿ ನಿಜವಾದ ಅಲ್ಪಸಂಖ್ಯಾತ ಸಮುದಾಯ ಅಂದರೆ ಬ್ರಾಹ್ಮಣರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಅಲ್ಪಸಂಖ್ಯಾತ ಪಟ್ಟಿಯಲ್ಲಿ ಬ್ರಾಹ್ಮಣರನ್ನು ಸೇರಿಸಬೇಕು. ಮುಸ್ಲಿಂ ಸಮುದಾಯದವರು ಅಲ್ಪಸಂಖ್ಯಾತರು ಅಲ್ಲವೇ ಅಲ್ಲ. ಒಂದು ಜನಾಂಗದಷ್ಟಿರುವ ಮುಸ್ಲಿಮರು ಹೇಗೆ ಅಲ್ಪ ಸಂಖ್ಯಾತರಾಗುತ್ತಾರೆ. ದೇಶದ್ರೋಹಿ ಕೆಲಸ ಮತ್ತು ಪಾಕಿಸ್ತಾನದ ಪರ ಅವರು ಮಾತನಾಡುತ್ತಾರೆ. ಅಂಥವರಿಗೆ ಮೀಸಲಾತಿ ಬೇಕು ಅಂದರೆ ಹೇಗೆ ಎಂದರು. ಬಹಳ ಸೌಲಭ್ಯ ಬೇಕಿದ್ದರೆ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಹೇಳಿದರು.

ಮುಸ್ಲಿಮರಿಗೆ ನೀಡಿರುವ 2ಎ ಮೀಸಲಾತಿ ತೆಗೆದು ಹಾಕಬೇಕು ಎಂಬ ಶಾಸಕ ಅರವಿಂದ ಬೆಲ್ಲದ್ ಹೇಳಿಕೆ ಬೆಂಬಲಿಸಿದ ಯತ್ನಾಳ್

ಅಲ್ಪ ಸಂಖ್ಯಾತ ಹಾಗೂ 2ಎ ಎರಡೆರಡುವ ಮೀಸಲಾತಿ ಲಾಭವನ್ನು ಮುಸ್ಲೀಂ ಸಮುದಾಯದವರು ಪಡೆಯುತ್ತಿದ್ದಾರೆ. 2ಎ ಮೀಸಲಾತಿಯಿಂದ ತೆಗೆದುಹಾಕಲು ಎಲ್ಲ ತಯಾರಿ ನಡೆದಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಯುತ್ತಿವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಬೆಲ್ಲದ್ ಮಾತಿನಲ್ಲಿ ಸತ್ಯವಿದೆ. ಮುಸ್ಲಿಮರಿಗೆ ನೀಡಿರುವ 2ಎ ಮೀಸಲಾತಿ ತೆಗೆದು ಹಾಕಬೇಕು ಎಂಬ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿಕೆಗೆ ಯತ್ನಾಳ್ ಬೆಂಬಲಿಸಿದರು. ನಾವು ಕೂಡ ಪುನರ್ ಪರಿಶೀಲನೆಗೆ ಮುಖ್ಯಮಂತ್ರಿಗಳಿಗೆ ಹೇಳಿದ್ದೇವೆ. ಅವರನ್ನು ತೆಗೆದು ಹಿಂದುಳಿದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಹೇಳಿದರು.

ಸಿಎಂ ಜತೆ ಚರ್ಚೆಯಾಗಿದೆ, ಪರಿವಾರದಿಂದಲೂ ಚರ್ಚೆ ಆಗಿದೆ. ಒಂದು ಸಮುದಾಯ 2 ಕಡೆ ಲಾಭ ಪಡೆಯೋದನ್ನು ತಡೆಯಬೇಕು. 2 ಕಡೆ ಲಾಭ ಪಡೆದು ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ. ಆದಷ್ಟು ಬೇಗನೆ ಸರ್ಕಾರ ಕ್ರಮ ವಹಿಸಲಿದೆ ಎಂದು ಶಾಸಕ ಯತ್ನಾಳ್ ಆಗ್ರಹಿಸಿದರು.

ಬಿಜೆಪಿಯಲ್ಲಿ ಸಿಎಂ ಆಗಲು 2500 ಕೋಟಿ ರೂ. ನೀಡಬೇಕು!

ಬಿಜೆಪಿಯಲ್ಲಿ ಸಿಎಂ ಆಗಲು 2500 ಕೋಟಿ ರೂಪಾಯಿ ನೀಡಬೇಕು. ಹೀಗಂತಾ ಬಿಜೆಪಿ ಶಾಸಕ ಯತ್ನಾಳ ಈ ಹಿಂದೆ ಹೇಳಿದ್ದಾರೆಂದು ಆಪ್ ಮುಖಂಡ ಮುಖ್ಯಮಂತ್ರಿ ಚಂದ್ರು ಆರೋಪಿಸಿದ್ದರು. ಮುಖ್ಯಮಂತ್ರಿ ಚಂದ್ರ ಆರೋಪಕ್ಕೆ ಯತ್ನಾಳ ತಿರುಗೇಟು ನೀಡಿದ್ದು, ನನ್ನ ಹೇಳಿಕೆ ಮತ್ತೊಮ್ಮೆ ತಿರುಗಿಸಿ ನೋಡಿ. ದೆಹಲಿ ಬೆಂಗಳೂರಿನಲ್ಲಿ ಕೆಲ ದಲ್ಲಾಲಿಗಳು ಇದ್ದಾರೆ. ದಲ್ಲಾಲಿಗಳು ಎಲ್ಲಾ ಪಕ್ಷದಲ್ಲಿದ್ದಾರೆ, ಅವರು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲಾ. ರಾಮದುರ್ಗದಲ್ಲಿ ಕೆಲ ಟಿಕೆಟ್ ಆಕಾಂಕ್ಷಿಗಳಿದ್ದರು. ದೆಹಲಿಯಲ್ಲಿ ಅವರಿವರನ್ನು ಭೇಟಿ ಮಾಡಿಸುತ್ತೇನೆ. 2 ಕೋಟಿ 3 ಕೋಟಿ ಕೊಡಿ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಕೆಲವರು ನಮಗೆ ಹೇಳಿದ್ದಾರೆ. ದೆಹಲಿ ಬೆಂಗಳೂರಿನವರು ಹೇಳಿದ್ದಾರೆ ಎಂದು ನನಗೆ ರಾಮದುರ್ಗದಲ್ಲಿ ಹೇಳಿದ್ದರು.

ಬಿಜೆಪಿಯಲ್ಲಿ ಅಂಥ ಪದ್ದತಿಯಿಲ್ಲಾ. ಬಿಜೆಪಿಯಲ್ಲಿ ಕಾರ್ಯತರ್ತರಿಂದ ಹಿಡಿದು ದಿಲ್ಲಿಗೆ ನೇರ ಸಂಪರ್ಕವಿದೆ. ನಾನು ಮೋದಿ ಅಮೀತ್ ಶಾ ಹಾಗೂ ನಡ್ಡಾ ಅವರನ್ನು ಭೇಟಿಯಾಗಲು ನೇರವಾಗೊ ಹೋಗುತ್ತೇನೆ. ನನಗೆ ದಲ್ಲಾಲಿಗಳ ಅವಶ್ಯಕತೆಯಿಲ್ಲಾ. ವಿಜಯೇಂದ್ರನ ಮಾತು ಕೇಳಿ ಮತ್ತೇ ಮತ್ತೇ ಅದನ್ನೇ ಕೇಳುತ್ತೀರಿ. ವಿಜಯೇಂದ್ರ ಕೆಲವರಿಗೆ ಏನೋ ಪ್ರಸಾದ ವ್ಯವಸ್ಥೆ ಮಾಡಿರಬೇಕು. ವಿಜಯೇಂದ್ರನ ಮಾತು ಕೇಳಿ ಹೇಗಾದರೂ ಮಾಡಿ ಬಸನಗೌಡನ್ನಾ ಕಂಡಮ್ ಮಾಡಬೇಕು. ಕೇಂದ್ರದವರು 2500 ಕೊಟಿ ಕೇಳಿದ್ದಾರೆಂದು ಹೇಳಿ ನನ್ನ ಝೀರೋ ಮಾಡಬೇಕೆಂದು ಕೆಲ ಮಧ್ಯಮ ವ್ಯವಸ್ಥಿತ ಪ್ರಚಾರ ಮಾಡಿದವು. ಸನ್ಮಾನ್ಯ ಉಪಾಧ್ಯಕ್ಷ ಬಿಜೆಪಿ ವಿಜಯೇಂದ್ರನ ಮುಖಾಂತರ ನನ್ನ ಮುಗಿಸಲು ಕೆಲ ಚಾನಲ್​ಗಳು ಪ್ರಯತ್ನ ಮಾಡಿದವು. ವಿಜಯೇಂದ್ರದ ಕೃಪಾರ್ಶಿವಾದ ಮಾಜಿ ಆಗಿದೆ, ಒಳ್ಳೆಯದನ್ನಾ ಪ್ರಚಾರ ಮಾಡಿ ಎಂದು ಹೇಳಿದರು.

ಶಾಸಕ‌ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್

ಇವತ್ತಿಗೂ ನನಗೆ ದೆಹಲಿಯಿಂದ ಕೆಲವರು ಕರೆ ಮಾಡುತ್ತಾರೆ. ದೆಹಲಿಯ ಓರ್ವ ಸ್ವಾಮೀ ಕರೆ ಮಾಡುತ್ತಾರೆ, 1500 ಕೋಟಿ ಹಣ ಕೂಡಿಸಿ ಎಂದು ಹೇಳುತ್ತಾರೆ. ನಡ್ಡಾ ಸೆ ಬಾತ್ ಕರೇಂಗೆ, ಆಪ್ ದೆಹಲಿ ಆಜಾವೋ. ಪಂದ್ರಾ ಸೌ ಕರೋಡ್ ತಯ್ಯಾರ ಕರ್ಕೆ ರಖೋ ಹಮ್ ಮೋದಿಜಿ ಕೋ ಅಪಾಯಿಂಟ್ಮೆಂಟ್ ದೇಂಗೆ. ಅದನ್ನೆಲ್ಲಾ ನಂಬಬೇಡಿ ಎಂದು ಹೇಳಿದ್ದೇನೆ. 30 ರಿಂದ 40 ವರ್ಷ ಕೆಲಸ ಮಾಡಿದ ನಮ್ಮಂತ ಸೀನಿಯರ್ ಲೀಡರ್​ಗೆ ಈ ಪರಸ್ಥಿತಿ ಇದೆ. ಎಷ್ಟೋ ಮಂದಿ ದೆಹಲಿಯಲ್ಲಿ ರೊಕ್ಕಾ (ಹಣ) ಕೊಟ್ಟು ಬಂದಿದ್ದಾರೆ, ಸಾಚಾ ಇಲ್ಲಾ.

ಬಿಜೆಪಿಯಲ್ಲೇ ಕೆಲವರು ರೊಕ್ಕಾ ಕೊಟ್ಟು ಬಂದವರು ಇದ್ದಾರೆ, ಅವು ಕೊಟ್ಟ ಹಣ ಮುಳುಗಡೆ ಆಗಿವೆ. ಈಗಾ ಅವರು ಮಂತ್ರಿಯೂ ಆಗಿದ್ದಾರೆಂದು ಯತ್ನಾಳ ಬಾಂಬ್ ಸಿಡಿಸಿದರು. ಪರೋಕ್ಷವಾಗಿ ಸ್ಪಕ್ಷೀಯ ಸಚಿವರ ಬಗ್ಗೆ  ಯತ್ನಾಳ ಮಾತನಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.