ವಿಜಯಪುರ: ದೇವರಹಿಪ್ಪರಗಿ ಪಟ್ಟಣದಲ್ಲಿ ಬಂಪರ್ ಡ್ರಾ ಹೆಸರಿನಲ್ಲಿ ಮೋಸ

ಬಂಪರ್ ಡ್ರಾ ಹೆಸರಿನಲ್ಲಿ ಮನಿಯಾರ್ ಎಂಟರ್ ಪ್ರೈಸಿಸ್ ವಂಚನೆ ಎಸಗಿದ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ. ಇಂದು ಡ್ರಾ ನಡೆಸುವುದಾಗಿ ಹೇಳಿದ ಹಿನ್ನೆಲೆ ಸಾವಿರಾರು ಜನರು ಆಗಮಿಸಿದ್ದರು. ಆದರೆ, ಆಯೋಜಕರು ಮೊಬೈಲ್ ಪೋನ್ ಸ್ವಿಚ್ ಆಫ್ ಮಾಡಿದ್ದು, ಜನರು ಆತಂಕದಲ್ಲಿದ್ದಾರೆ.

ವಿಜಯಪುರ: ದೇವರಹಿಪ್ಪರಗಿ ಪಟ್ಟಣದಲ್ಲಿ ಬಂಪರ್ ಡ್ರಾ ಹೆಸರಿನಲ್ಲಿ ಮೋಸ
ಬಂಬರ್ ಡ್ರಾ ಹೆಸರಿನಲ್ಲಿ ವಂಚನೆ
Edited By: Rakesh Nayak Manchi

Updated on: Aug 15, 2023 | 5:27 PM

ವಿಜಯಪುರ, ಆಗಸ್ಟ್ 15: ಬಂಪರ್ ಡ್ರಾ ಹೆಸರಿನಲ್ಲಿ ಜನರಿಗೆ ವಂಚಿಸಿದ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಡೆದಿದೆ. ಒಂದು ಬಂಪರ್ ಡ್ರಾ (Bumper draw) ಲಾಟರಿ ಟಿಕೆಟ್​ಗೆ 600 ರೂಪಾಯಿಯಂತೆ ಹಣ ಪಡೆದಿರುವ ಬಂಪರ್ ಡ್ರಾ ಆಯೋಜಕರು, ಇಂದು ಡ್ರಾ ಮಾಡುವಾಗಿ ಹೇಳಿದ್ದರು. ಅದರಂತೆ ಸಾವಿರಾರು ಜನರು ಜಮಾಯಿಸಿದ್ದರೂ, ಆಯೋಜನರು ಜನರ ಸಂಪರ್ಕಕ್ಕೆ ಸಿಗದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ.

ಬಂಪರ್ ಡ್ರಾ ಹೆಸರಿನಲ್ಲಿ ಮನಿಯಾರ ಎಂಟರ್ ಪ್ರೈಸಿಸ್ ಒಟ್ಟು 100 ಬಹುಮಾನಗಳನ್ನು ನೀಡುವುದಾಗಿ ಹೇಳಿ ಜನರಿಂದ 600 ರೂಪಾಯಿಯಂತೆ ಹಣ ಪಡೆದಿದ್ದಾರೆ. ಸುಮಾರು 6 ಸಾವಿರಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್ ಖರೀದಿ ಮಾಡಿದ್ದಾರೆ.

ಡ್ರಾದಲ್ಲಿ, ಒಂದು ಎರ್ಟಿಗಾ ಕಾರ್, ಒಂದು ಸಿಎನ್​ಜಿ ಆಟೋ, ಒಂದು ಟಂಟಂ, ಒಂದು ರಾಯಕಲ್ ಎನ್ ಫೀಲ್ಡ್ ಬೈಕ್, 2 ಹೋಂಡಾ ಶೈನ್ ಬೈಕ್, 2 ಸ್ಲ್ಪೇಂಡರ್ ಬೈಕ್, 10 ಹೆಚ್​​ಎಫ್ ಡೀಲಕ್ಸ್, 2 ಟಿವಿಎಸ್ ಎಕ್ಸೆಲ್ , 2 ಟಿವಿಉಎಸ್ ಬೈಕ್, 2 ಎಲೆಕ್ಟ್ರಿಕ್ ಬೈಕ್, 20 ಪ್ರಿಜ್, 20 ಎಲ್ಇಡಿ ಟಿವಿ, 20 ಕೂಲರ್, 10 ಗ್ರಾಂ 3 ಗೋಲ್ಡ್ ಬಿಸ್ಕಟ್, ವಿವೋ ಮೊಬೈಲ್ 10, 3 ಸೈಕಲ್ ಬಹುಮಾಮನ ನೀಡುವುದಾಗಿ ಭರವಸೆ ನೀಡಿದೆ.

ಬಹುಮಾನಗಳ ಆಸೆ ತೋರಿಸಿದ ಆಯೋಜಕರಾದ ಶಹನವಾಜ್, ಇಸ್ಮಾಯಿಲ್, ಅಬ್ದುಲ್ ರಜಾಕ್, ಗೌಸ್ ಮೋದೀನ್ ಹಾಗೂ ಮೊಹಮ್ಮದ ಮುಸ್ತಫಾ, ದೇವರಹಿಪ್ಪರಗಿ ಬಸವನಬಾಗೇವಾಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 6000 ಕ್ಕೂ ಆಧಿಕ ಲಾಟರಿ ಟಿಕೆಟ್ ಮಾರಾಟ ಮಾಡಿದ್ದಾರೆ.

ಇದನ್ನೂ ಓದಿ: ವಿಜಯಪುರ: ಇನ್ನು ಆರು ತಿಂಗಳಲ್ಲಿ ಕಾಂಗ್ರೆಸ್​ ಸರ್ಕಾರ ಪತನ; ಬಸನಗೌಡ ಪಾಟೀಲ್​ ಯತ್ನಾಳ್​ ಭವಿಷ್ಯ

ಇಂದು ಲಾಟರಿ ಡ್ರಾ ಮಾಡಲಾಗುತ್ತದೆ ಎಂದು ಬಂಪರ್ ಡ್ರಾ ಆಯೋಜಕರು ಜನರಿಗೆ ಹೇಳಿದ್ದಾರೆ. ಅದರಂತೆ ಟಿಕೆಟ್ ಖರೀದಿಸಿದ ಸಾವಿರಾರು ಜನರು ದೇವರಹಿಪ್ಪರಗಿ ಪಟ್ಟಣಕ್ಕೆ ಬಂದಿದ್ದರೂ ಮನಿಯಾರ್ ಎಂಟರ್ ಪ್ರೈಸಿಸ್​​ನವರು ಯಾವುದೇ ಲಾಟರಿ ಡ್ರಾ ಮಾಡಿಲ್ಲ.

ಇದರಿಂದ ಆತಂಕಕ್ಕೊಳಗಾದ ಜನರು, ಆಯೋಜಕರಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್​ ಆಫ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಬಂಪರ್ ಡ್ರಾ ಹೆಸರಿನಲ್ಲಿ ಮೋಸವಾಗಿದೆ ಎಂದು ದೂರು ನೀಡಿದರೂ ದೇವರಹಿಪ್ಪರಗಿ ಪೊಲೀಸ್ ಠಾಣೆಯ ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲಾ ಎಂದು ಜನರು ಆರೋಪಿಸುತ್ತಿದ್ದಾರೆ.

ಬಂಪರ್ ಡ್ರಾ ಹೆಸರಿನ ಲಾಟರಿ ಮಾರಾಟ ಮಾಡಿ ಇದೀಗಾ ಬಹುಮಾನ ನೀಡದೇ ಮೋಸ ಮಾಡಿದ್ದಾರೆಂದು ಆರೋಪಿಸುತ್ತಿರು ಜನರು ಪೊಲೀಸ್ ಠಾಣೆ ಬಳಿ ಜಮಾಯಿಸಿ, ಮನಿಯಾರ್ ಎಂಟರ್ ಪ್ರೈಸಿಸ್ ಮಾಲೀಕರ ಹಾಗೂ ಇತರರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಠಾಣೆಯ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us