ಸಿದ್ದೇಶ್ವರಶ್ರೀ ಜಗತ್ತಿಗೆ ಒಳಿತಿನ ಮಾರ್ಗ ತೋರಿಸಿದ ಪ್ರಬುದ್ಧ ಚೇತನ; ರಾಹುಲ್ ಗಾಂಧಿ, ಗಣ್ಯರಿಂದ ಸಂತಾಪ

Siddeshwara Swamiji Death: ಸಂಸದ ರಾಹುಲ್ ಗಾಂಧಿ ಫೇಸ್ ಬುಕ್ ಫೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಸಿದ್ದೇಶ್ವರಶ್ರೀ ಜಗತ್ತಿಗೆ ಒಳಿತಿನ ಮಾರ್ಗ ತೋರಿಸಿದ ಪ್ರಬುದ್ಧ ಚೇತನ. ಸಿದ್ದೇಶ್ವರ ಶ್ರೀಗಳು ತಮ್ಮ ಸರಳತೆ, ಜ್ಞಾನಕ್ಕಾಗಿ ಗೌರವಾನ್ವಿತರಾಗಿದ್ದರು.

ಸಿದ್ದೇಶ್ವರಶ್ರೀ ಜಗತ್ತಿಗೆ ಒಳಿತಿನ ಮಾರ್ಗ ತೋರಿಸಿದ ಪ್ರಬುದ್ಧ ಚೇತನ; ರಾಹುಲ್ ಗಾಂಧಿ, ಗಣ್ಯರಿಂದ ಸಂತಾಪ
ಸಿದ್ದೇಶ್ವರಶ್ರೀ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ
Follow us
TV9 Web
| Updated By: ಆಯೇಷಾ ಬಾನು

Updated on:Jan 03, 2023 | 10:45 AM

ವಿಜಯಪುರ: ಜ್ಞಾನ ಯೋಗಿ.. ನುಡಿದಂತೆ ನಡೆದ ಸಿದ್ದೇಶ್ವರ ಶ್ರೀಗಳು ವೈಕುಂಠ ಏಕಾದಶಿಯ ಸೋಮವಾರ ಸಂಜೆ ಶಿವೈಕ್ಯರಾಗಿದ್ದಾರೆ. ಕಾಯಕಯೋಗಿ ಲಿಂಗೈಕ್ಯರಾಗಿದ್ದಕ್ಕೆ ಇಡೀ ಕರುನಾಡೇ ಶೋಕಸಾಗರದಲ್ಲಿ ಮುಳುಗಿದೆ. ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ನಾಯಕರು, ಮಠಾಧೀಶರು ಸಂತಾಪ ಸೂಚಿಸಿದ್ದಾರೆ.

ಸಿದ್ದೇಶ್ವರಶ್ರೀ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ

ಸಂಸದ ರಾಹುಲ್ ಗಾಂಧಿ ಫೇಸ್ ಬುಕ್ ಫೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಸಿದ್ದೇಶ್ವರಶ್ರೀ ಜಗತ್ತಿಗೆ ಒಳಿತಿನ ಮಾರ್ಗ ತೋರಿಸಿದ ಪ್ರಬುದ್ಧ ಚೇತನ. ಸಿದ್ದೇಶ್ವರ ಶ್ರೀಗಳು ತಮ್ಮ ಸರಳತೆ, ಜ್ಞಾನಕ್ಕಾಗಿ ಗೌರವಾನ್ವಿತರಾಗಿದ್ದರು. ಸಮಾಜಕ್ಕೆ ಸಿದ್ದೇಶ್ವರ ಶ್ರೀಗಳ ಅತ್ಯುತ್ತಮ ಸೇವೆ ಸ್ಮರಣೀಯವಾಗಿದೆ. ಸಿದ್ದೇಶ್ವರ ಸ್ವಾಮೀಜಿ ಅನುಯಾಯಿಗಳ ದುಃಖದಲ್ಲಿ ಭಾಗಿಯಾಗಿದ್ದೇನೆ. ಅವರ ಬೋಧನೆ ಜೀವನದಲ್ಲಿ ಅನುಸರಿಸಬೇಕು ಎಂದು ಫೇಸ್ ಬುಕ್​ನಲ್ಲಿ ಫೋಸ್ಟ್ ಹಾಕುವ ಮೂಲಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ ನಿಧನಕ್ಕೆ ನಿರ್ಮಲಾನಂದನಾಥಶ್ರೀ ಸಂತಾಪ

ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ನಿರ್ಮಲಾನಂದನಾಥಶ್ರೀ ಅವರು ಸಂತಾಪ ಸೂಚಿಸಿದ್ದಾರೆ. ನಮ್ಮ ನಾಡು ಕಂಡ ಅಪರೂಪದ ಅನುಭಾವಿ ಸಂತರಾದ ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರಸ್ವಾಮೀಜಿರವರು ಭೌತಿಕವಾಗಿ ಇನ್ನಿಲ್ಲವಾದುದು ಅತ್ಯಂತ ದುಃಖದ ಸಂಗತಿ. ಪೂಜ್ಯ ಸ್ವಾಮೀಜಿರವರು ಪಂಚಭಾಷಾ ಪ್ರವೀಣರಾಗಿದ್ದರು, ವಾಗ್ದೇವಿಯ ಆರಾಧಕರಾಗಿದ್ದರು, ಮಹಾನ್ ಆಧ್ಯಾತ್ಮಿಕ ಜೀವಿಯಾಗಿದ್ದರು. ಸನಾತನ ಶಾಸ್ತ್ರಗ್ರಂಥಗಳು ಮತ್ತು ವಚನ ಸಾಹಿತ್ಯವನ್ನು ಆಧುನಿಕ ಸಮಾಜದ ವಿದ್ಯಾವಂತರಿಗೆ ಮನದಟ್ಟಾಗುವಂತೆ ಸರಳವಾಗಿ ಬೋಧಿಸಿ ಅವರ ಆಂತರ್ಯದ ಪರಿವರ್ತನೆಗೆ ಕಾರಣರಾಗಿದ್ದರು. ಕ್ಲಿಷ್ಟಕರವಾದ ವೇದೋಪನಿಷತ್ತುಗಳ ಮಂತ್ರಗಳು ಮತ್ತು ಯೋಗಸೂತ್ರಗಳನ್ನು, ಭಗವದ್ಗೀತೆ ಹಾಗೂ ವಚನ ಶಾಸ್ತ್ರ ಮುಂತಾದುವನ್ನು ಆಧುನಿಕ ವೈಜ್ಞಾನಿಕ ಭಾಷೆಯಲ್ಲಿ ಬೋಧಿಸುತ್ತಿದ್ದರು. ಕಠಿಣವಾದ ತತ್ವಗಳನ್ನು ಜನ ಸಾಮಾನ್ಯರಿಗೆ ನಿಲುಕುವ ಭಾಷೆಯಲ್ಲಿ ಬೋಧಿಸಿ ಪಂಡಿತ ಪಾಮರರಿಗೂ ಜ್ಞಾನ ಸುಧೆಯನ್ನು ಉಣಬಡಿಸುತ್ತಿದ್ದರು ಎಂದು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Vijayapura: ಸಿದ್ದೇಶ್ವರ ಸ್ವಾಮೀಜಿ ನೆನೆದು ಕಣ್ಣೀರು ಹಾಕಿದ ಮುಸ್ಲಿಂ ದಂಪತಿ

ಶ್ರೀಗಳ ಅಳಿಯ ರಾಜಕುಮಾರ ಸವದಿ ಸಂತಾಪ

ಸಿದ್ದೇಶ್ವರ ಸ್ವಾಮೀಜಿಗಳು ಮನೆಗೆ, ಊರಿಗೆ ಮೀಸಲಾಗಿರಲಿಲ್ಲ. ಸಿದ್ದೇಶ್ವರ ಸ್ವಾಮೀಜಿ ಅವರು ಸಂಬಂಧಿಕರಿಂದ ದೂರವಾಗಿದ್ದರು. ಶ್ರೀಗಳು ಚಿಕ್ಕಂದಿನಿಂದಲೂ ಧ್ಯಾನ, ಆಧ್ಯಾತ್ಮದತ್ತ ಒಲವು ಹೊಂದಿದ್ದರು. ಗ್ರಾಮದ ಹೊರಗಿನ ಸನ್ಯಾಸಿ ಮಠಕ್ಕೆ ತೆರಳಿ ಧ್ಯಾನ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಮನೆ ಬಿಟ್ಟು ಹೋದವರು ತಿರುಗಿ ನೋಡಲಿಲ್ಲ. ತಂದೆ-ತಾಯಿ ನಿಧನರಾದರೂ ನೋಡುವುದಕ್ಕೆ ಅವರು ಬಂದಿರಲಿಲ್ಲ. ಸಿದ್ದೇಶ್ವರ ಸ್ವಾಮೀಜಿ ಅಗಲಿಕೆ ಎಲ್ಲರಿಗೂ ದುಃಖ ತಂದಿದೆ ಎಂದು ಬಿಜ್ಜರಗಿ ಗ್ರಾಮದಲ್ಲಿ ಶ್ರೀಗಳ ಅಳಿಯ ರಾಜಕುಮಾರ ಸವದಿ ಸಂತಾಪ ಸೂಚಿಸಿದ್ದಾರೆ.

ಸಿದ್ದೇಶ್ವರಶ್ರೀಗಳ ನಿಧನಕ್ಕೆ ಕೇಂದ್ರಸಚಿವ ಪ್ರಹ್ಲಾದ್ ಜೋಶಿ ಸಂತಾಪ

ಸಿದ್ದೇಶ್ವರಶ್ರೀಗಳು ಲಿಂಗೈಕ್ಯರಾದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಸಿದ್ದೇಶ್ವರ ಸ್ವಾಮೀಜಿರವರು ನುಡಿದಂತೆ ನಡೆದ ಶ್ರೇಷ್ಠ ಸಂತರು. ಪ್ರವಚನ ಮೂಲಕ ಶ್ರೀಗಳು ಸಾಕಷ್ಟು ಪ್ರಭಾವ ಬೀರಿದ್ರು. ನನ್ನ, ಸಿದ್ದೇಶ್ವರ ಶ್ರೀಗಳ ನಡುವೆ ಬಹಳ ಆತ್ಮೀಯ ಸಂಬಂಧ ಇತ್ತು. ಸಿದ್ದೇಶ್ವರ ಸ್ವಾಮೀಜಿಗಳನ್ನು ಕಳೆದುಕೊಂಡ ಸಮಾಜ ಬಡವಾಗಿದೆ. ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುವ ಪ್ರಯತ್ನ ಮಾಡಬೇಕು. ಇದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದ್ದಾರೆ.

ನನಗೆ ಸಿದ್ದೇಶ್ವರಶ್ರೀ ಭೇಟಿ ಮಾಡುವಂತಹ ಅವಕಾಶ ಸಿಗಲಿಲ್ಲ

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅಗಲಿಕೆಗೆ ಘಾಟಿ ಸುಬ್ರಹ್ಮಣ್ಯ ದೇಗುಲ ಬಳಿ ಎಸ್.ಆರ್.ವಿಶ್ವನಾಥ್ ಸಂತಾಪ ಸೂಚಿಸಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ಅಗಲಿಕೆ ಇಡೀ ದೇಶಕ್ಕೆ ತುಂಬಲಾರದ ನಷ್ಟ. ನನಗೆ ಸಿದ್ದೇಶ್ವರಶ್ರೀ ಭೇಟಿ ಮಾಡುವಂತಹ ಅವಕಾಶ ಸಿಗಲಿಲ್ಲ. ಆದ್ರೆ ಶ್ರೀಗಳ ಸೇವೆಯನ್ನು ನಾವು ನೋಡಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ‌ಯವರು ಅಂತಿಮ ದರ್ಶನ ಮಾಡಲು ತೆರಳುತ್ತಿದ್ದಾರೆ. ಘಾಟಿ ಸುಬ್ರಹ್ಮಣ್ಯ ದೆವಸ್ಥಾನಕ್ಕೆ ಬರಬೇಕಿತ್ತು, ಆದ್ರೆ ಸಿದ್ದೇಶ್ವರ ಸ್ವಾಮಿಗೆ ಅಂತಿಮ ನಮನ ಸಲ್ಲಿಸಲು ಘಾಟಿ ಭೇಟಿ ರದ್ದು ಮಾಡಿಕೊಂಡಿದ್ದಾರೆ. ಕರ್ನಾಟಕದ ಪ್ರಮುಖ ಸ್ವಾಮೀಜಿ ಅಂತಾ ಅವರು ಯಾವತ್ತು ಕರೆಸಿಕೊಂಡಿರಲಿಲ್ಲ, ಜನಗಳ ಸೇವೆಯನ್ನ ಮಾಡ್ತಿದ್ದಂತವರು, ಸಿದ್ಧೇಶ್ವರ ಸ್ವಾಮಿಗಳ ಅಗಲಿಕೆ, ಕರ್ನಾಟಕಕ್ಕೆ ಅಲ್ಲ, ದೇಶಕ್ಕೆ ತುಂಬಲಾರದ ನಷ್ಟವಾಗಿದೆ, ಭಗವಂತ ಅವರು ಲಿಂಗೈಕ್ಯರಾಗಿದ್ದರು ಕೂಡ, ಅವರ ಅಗೋಚರ ಶಕ್ತಿ ಭಕ್ತರನ್ನ ಮುನ್ನೆಡೆಸಿಕೊಂಡು ಹೋಗಲಿದೆ. ಪ್ರಚಾರ ಇಲ್ಲದೆ ಸ್ವಾಮಿಗಳು ಕೆಲಸ ಮಾಡ್ತಿದ್ದರು, ಜೊತೆಗೆ ಪ್ರಶಸ್ತಿ ಕೋಟಿ ಹಣವೂ ತಿರಸ್ಕಾರ ಮಾಡಿದ ಸಂತ. ಯಾವುದಕ್ಕೂ ಆಸೆ ಪಡದೆ, ಭಕ್ತರು ಕೊಡುವಂತಹ ದೇಣಿಗೆಯಲ್ಲೆ ಕೆಲಸ ಮಾಡಿಕೊಂಡು ಬಂದವರು ಎಂದು ಶಾಸಕ ಎಸ್.ಆರ್ ವಿಶ್ವನಾಥ್ ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:44 am, Tue, 3 January 23

ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್