ಟ್ರ್ಯಾಕ್ಟರ್ಗೆ ಕ್ರೂಸರ್ ಡಿಕ್ಕಿ: ದಂಪತಿ ಸಾವು, 9 ಜನರಿಗೆ ಗಾಯ

| Updated By: ಆಯೇಷಾ ಬಾನು

Updated on: Oct 27, 2022 | 8:26 AM

ಕಬ್ಬು ಸಾಗಾಟ ಮಾಡುತ್ತಿದ್ದ ಟ್ಯಾಕ್ಟರ್ ಗೆ ಮಹಾರಾಷ್ಟ್ರದ ಅಕ್ಕಲಕೋಟಗೆ ತೆರಳುತ್ತಿದ್ದ ಕ್ರೂಸರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ದಂಪತಿ ಮೃತಪಟ್ಟಿದ್ದು 9 ಜನರಿಗೆ ಗಾಯಗಳಾಗಿವೆ.

ಟ್ರ್ಯಾಕ್ಟರ್ಗೆ ಕ್ರೂಸರ್ ಡಿಕ್ಕಿ: ದಂಪತಿ ಸಾವು, 9 ಜನರಿಗೆ ಗಾಯ
ಸಾಂಧರ್ಬಿಕ ಚಿತ್ರ
Follow us on

ವಿಜಯಪುರ: ಟ್ರ್ಯಾಕ್ಟರ್ಗೆ ಕ್ರೂಸರ್ ಡಿಕ್ಕಿಯಾಗಿ ದಂಪತಿ ಮೃತಪಟ್ಟ(Couple Died) ಘಟನೆ ಇಂಡಿ ತಾಲೂಕಿನ ಧೂಳಖೇಡ ಬಳಿ ರಾ.ಹೆದ್ದಾರಿ 50ರಲ್ಲಿ ನಡೆದಿದೆ. ಪತಿ ಭಯ್ಯಾಜಿ ಶಿಂಧೆ(50), ಪತ್ನಿ ಸುಮಿತ್ರಾ ಶಿಂಧೆ(45) ಮೃತ ದುರ್ದೈವಿಗಳು. ಮೃತ ದಂಪತಿ ಬೆಳಗಾವಿ ಜಿಲ್ಲೆ ಅಥಣಿ ಮೂಲದ ನಿವಾಸಿಗಳು. ಕಬ್ಬು ಸಾಗಾಟ ಮಾಡುತ್ತಿದ್ದ ಟ್ಯಾಕ್ಟರ್ ಗೆ ಮಹಾರಾಷ್ಟ್ರದ ಅಕ್ಕಲಕೋಟಗೆ ತೆರಳುತ್ತಿದ್ದ ಕ್ರೂಸರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಘಟನೆ ಸಂಭವಿಸಿದೆ. ಕ್ರೂಸರ್ ವಾಹನದಲ್ಲಿದ್ದ ಒಂಬತ್ತು ಜನರಿಗೆ ಗಾಯಗಳಾಗಿವೆ.

ಗಾಯಾಳುಗಳನ್ನು ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಥಣಿ ಮೂಲದ ಇವರೆಲ್ಲಾ ಕ್ರೂಸರ್ ನಲ್ಲಿ ಮಹಾರಾಷ್ಟ್ರದ ಅಕ್ಕಲಕೋಟ ಬಳಿಯ ಸ್ವಾಮಿ ಸಮರ್ಥ ಕ್ಷೇತ್ರಕ್ಕೆ ತೆರಳುತ್ತಿದ್ದರು. ಸ್ಥಳಕ್ಕೆ ಝಳಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳ್ಳತನ ಮಾಡುತ್ತಿದ್ದ ಆರೋಪಿ ಅರೆಸ್ಟ್

ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಜ್ಞಾನಭಾರತಿ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಲ್ಲಿಕಾರ್ಜುನ (20) ಬಂಧಿತ ಆರೋಪಿ . ಬಂಧಿತನ ವಿರುದ್ಧ ಜ್ಞಾನಭಾರತಿ, ಸಂಜಯನಗರ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಬಂಧಿತನಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಗಂಭೀರ ಸ್ವರೂಪ ಪಡೆದುಕೊಂಡ ಬ್ಲಾಕ್​ಮೇಲ್ ಪ್ರಕರಣ; ಭಯಗೊಂಡ ನಿರ್ದೇಶಕ ಪುರಿ ಜಗನ್ನಾಥ್

ರೈಲುಗಳಲ್ಲಿ ಸರ ಕಳ್ಳತನ ಮಾಡುತ್ತಿದ್ದವ ಅರೆಸ್ಟ್

ಮದ್ಯಪಾನದ ಚಟ, ಡ್ರಗ್ಸ್ ಖರೀದಿಗೆ ರೈಲುಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಗಾರಪೇಟೆ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಕಿಟಕಿ ಪಕ್ಕ ಕುಳಿತಿರುವವರನ್ನೇ ಟಾರ್ಗೆಟ್ ಮಾಡಿ ಈ ಕಳ್ಳರು ಸರಗಳ್ಳತನ ಮಾಡುತ್ತಿದ್ದರು. ಮನೋಜ್ ಹಾಗೂ ದರ್ಶನ್ ಬಂಧಿತ ಆರೋಪಿಗಳು. ಮೆಮೂ ರೈಲುಗಳಲ್ಲಿ ರಾತ್ರಿ ವೇಳೆ ಹೊಂಚು ಹಾಕಿ ಕುಳಿತಿರುತ್ತಿದ್ದ ಆರೋಪಿಗಳು, ಪ್ಲಾಟ್ ಫಾರಂಗೆ ಬರುವ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕಿಟಕಿ ಪಕ್ಕ ಇರುವವರಿಂದ ಸರ ಎಗರಿಸುತ್ತಿದ್ದರು. ಕಿಟಕಿ‌ ಒಳಗೆ ಕೈ ಹಾಕಿ ಪ್ರಯಾಣಿಕರ ಕತ್ತಿನಲ್ಲಿ ಚಿನ್ನದ ಸರ ಎಗರಿಸುತ್ತಿದ್ದರು. ಚೆನ್ನೈ- ಬೆಂಗಳೂರು ಮೇಲ್, ತಿರುಪತಿ- ಚಾಮರಾಜನಗರ ಎಕ್ಸ್‌ಪ್ರೆಸ್‌ ನಲ್ಲಿ ಸರಗಳ್ಳತನ ಮಾಡಿದ್ದಾರೆ. ಬಂಧಿತರಿಂದ 51 ಸಾವಿರ ಮೌಲ್ಯದ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.

Published On - 8:26 am, Thu, 27 October 22