AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರಿ ಕೊಳ್ಳುವವನಿಗೆ ಖೆಡ್ಡಾ ತೋಡಿ, ತಾವೇ ಹಳ್ಳಕ್ಕೆ ಬಿದ್ದ ಖತರ್ನಾಕ್ ಗ್ಯಾಂಗ್​

ವಿಜಯಪುರ: ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ದಿನೇ ದಿನೆ ಹೆಚ್ಚುತ್ತಲೇ ಇವೆ. ಕೊರೊನಾ ಕಾಟದ ಮಧ್ಯೆಯೂ ಕಳ್ಳಕಾಕರು ತಮ್ಮ ಕಸುಬನ್ನು ಬಿಟ್ಟಿಲ್ಲ. ಇದಕ್ಕೆ ಸಾಕ್ಷಿ ಕೆಲವು ದಿನಗಳ ಹಿಂದೆ ಜಿಲ್ಲೆಯ ಚಡಚಣ ತಾಲೂಕಿನ ಝಳಕಿಯಲ್ಲ ನಡೆದ ಘಟನೆ. ಕುರಿ ವ್ಯಾಪಾರಿಯನ್ನ ದೋಚಲು ಭರ್ಜರಿ ಸ್ಕೆಚ್​! ಜೂನ್ 17ರಂದು ದೂರದ ಮೈಸೂರು ಜಿಲ್ಲೆಯ ನಂಜನಗೂಡಿನ ನಿವಾಸಿ ಸಲ್ಮಾನ್​ ಪಾಶಾ ಬಟಾಣಿ ಎಂಬ 25 ವರ್ಷದ ವ್ಯಾಪಾರಿ ಕುರಿಗಳನ್ನು ಖರೀದಿ ಮಾಡಲು ಝಳಕಿಗೆ ಬಂದಿದ್ದ. ಪಟ್ಟಣದ ಹೋಟೆಲ್​ವೊಂದರ ಬಳಿ ನಿಂತಿದ್ದ ಈತನನ್ನು […]

ಕುರಿ ಕೊಳ್ಳುವವನಿಗೆ ಖೆಡ್ಡಾ ತೋಡಿ, ತಾವೇ ಹಳ್ಳಕ್ಕೆ ಬಿದ್ದ ಖತರ್ನಾಕ್ ಗ್ಯಾಂಗ್​
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on: Jun 20, 2020 | 5:31 PM

Share

ವಿಜಯಪುರ: ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ದಿನೇ ದಿನೆ ಹೆಚ್ಚುತ್ತಲೇ ಇವೆ. ಕೊರೊನಾ ಕಾಟದ ಮಧ್ಯೆಯೂ ಕಳ್ಳಕಾಕರು ತಮ್ಮ ಕಸುಬನ್ನು ಬಿಟ್ಟಿಲ್ಲ. ಇದಕ್ಕೆ ಸಾಕ್ಷಿ ಕೆಲವು ದಿನಗಳ ಹಿಂದೆ ಜಿಲ್ಲೆಯ ಚಡಚಣ ತಾಲೂಕಿನ ಝಳಕಿಯಲ್ಲ ನಡೆದ ಘಟನೆ.

ಕುರಿ ವ್ಯಾಪಾರಿಯನ್ನ ದೋಚಲು ಭರ್ಜರಿ ಸ್ಕೆಚ್​! ಜೂನ್ 17ರಂದು ದೂರದ ಮೈಸೂರು ಜಿಲ್ಲೆಯ ನಂಜನಗೂಡಿನ ನಿವಾಸಿ ಸಲ್ಮಾನ್​ ಪಾಶಾ ಬಟಾಣಿ ಎಂಬ 25 ವರ್ಷದ ವ್ಯಾಪಾರಿ ಕುರಿಗಳನ್ನು ಖರೀದಿ ಮಾಡಲು ಝಳಕಿಗೆ ಬಂದಿದ್ದ. ಪಟ್ಟಣದ ಹೋಟೆಲ್​ವೊಂದರ ಬಳಿ ನಿಂತಿದ್ದ ಈತನನ್ನು ಗಮಿನಿಸಿದ ದರೋಡೆಕೋರರ ಗುಂಪೊಂದು ಸಲ್ಮಾನ ಪಾಶಾ ಕುರಿಗಳನ್ನು ಖರೀದಿ ಮಾಡಲು ಬಂದಿದ್ದಾನೆ ಎಂದು ಗೊತ್ತುಮಾಡಿಕೊಂಡು ಇವನ ಬಳಿ ತುಂಬಾ ಹಣವಿರಬಹುದು. ಎತ್ತಾಕೊಂಡ್ರೆ ಚೆನ್ನಾಗಿ ಹಣ ಸಿಗುತ್ತೆ ಅಂತಾ ಕೂಡಲೇ ಸ್ಕೆಚ್​ ಹಾಗಿದ್ರು.

ಕುರಿಗಳನ್ನು ಸಾಗಿಸಲು ತಾನು ತಂದಿದ್ದ ಲಾರಿ ಬಳಿ ನಿಂತಿದ್ದ ಸಲ್ಮಾನ ಪಾಶಾನನ್ನ ಗ್ಯಾಂಗ್​ನ ಸದಸ್ಯ ಅಜಿತ್​ ರಾಠೋಡ್ ಈತನ ಬಳಿ ಬಂದು ನಮ್ಮ ಬಳಿಯಿರುವ ಕುರಿಗಳಿನ್ನ ಮಾರಬೇಕಿತ್ತು. ಒಮ್ಮೆ ನೋಡ ಬನ್ನಿ ಎಂದು ಸಲ್ಮಾನ್​ನನ್ನ ಪುಸಲಾಯಿಸಿ ತನ್ನೊಟ್ಟಿಗೆ ಬೈಕ್ ಮೇಲೆ ಕರೆದುಕೊಂಡು ಹೊರಟ.

ಕಿಡ್ನಾಪ್​ ಮಾಡಿ ಕೊಲೆ ಬೆದರಿಕೆ: ಝಳಕಿ ಬಳಿಯ ಭೀಮಾಶಂಕರ ಸಕ್ಕರೆ ಕಾರ್ಖಾನೆ ಹತ್ರ ಇದ್ದ ಜಮೀನಿನಲ್ಲಿ ಮೇಯುತ್ತಿದ್ದ ಕುರಿಗಳನ್ನು ತೋರಿಸಿ ವ್ಯವಹಾರ ಕುದುರಿಸುವಂತೆ ಮಾತನಾಡಿದ್ದಾನೆ. ಇದೇ ವೇಳೆ ಮತ್ತೊಂದು ಬೈಕ್​ನಲ್ಲಿ ಬಂದ ಗ್ಯಾಂಗ್​ನ ಮೂವರು ಸದಸ್ಯರು ಸಲ್ಮಾನ್​ ಪಾಶಾರನ್ನ ಅಡ್ಡಗಟ್ಟಿ, ಚಾಕೂ ತೋರಿಸಿ ಕೊಲೆ ಮಾಡುವ ಬೆದರಿಕೆ ಹಾಕಿದ್ರು. ನಂತರ ಆತನ ಬಳಿಯಿದ್ದ 2 ಲಕ್ಷ 75 ಸಾವಿರ ರೂಪಾಯಿ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ರು.

ಘಟನೆಯಿಂದ ತುಸು ನಲುಗಿ ಹೋಗಿದ್ದ ಸಲ್ಮಾನ್​ ಕೂಡಲೇ ಝಳಕಿ ಪೊಲೀಸರನ್ನ ಸಂಪರ್ಕಿಸಿ ನಡೆದುದನ್ನು ವಿವರಿಸಿದ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎ.ಸ್ಪಿ ಅನುಪಮ್​ ಅಗರ್ವಾಲ್ ದರೋಡೆಕೋರರ ಗ್ಯಾಂಗ್​ನ ಬಂಧಿಸಲು ಇಂಡಿಯ DySPಎಂ.ಬಿ ಸಂಕದ ನೇತೃತ್ವದಲ್ಲಿ ತಂಡ ರಚಿಸಿದರು. ಚಡಚಣ CPI ಚಿದಂಬರ, ಝಳಕಿ PSIಪರಶುರಾಮ್ ಮನಗೂಳಿ ಸೇರಿದಂತೆ ಇತರರಿದ್ದ ತಂಡ ದರೋಡಕೋರರ ಗ್ಯಾಂಗ್​ನ ಹಿಡಿಯಲು ಜಾಲ ಬೀಸಿದರು.

ಪೊಲೀಸರ​ ವಿಚಾರಣೆಯಲ್ಲಿ ಸತ್ಯ ಬಿಚ್ಚಿಟ್ಟ ಗ್ಯಾಂಗ್​: ನಿನ್ನೆ ಸಾಯಂಕಾಲ ಇಂಡಿ ತಾಲೂಕಿನ ಚಣೇಗಾಂವ್ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದರು. ಖಾಕಿಯ ಖಡಕ್​ ವರ್ಕ್​ಔಟ್​ಗೆ ಈ ಖತರ್ನಾಕ ಗ್ಯಾಂಗ್​ ಕೊನೆಗೂ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದೆ. ಅಜಿತ್​ ರಾಠೋಡ್​ ಅಲ್ಲದೆ ಆತನನ ಸಹಚರರಾದ ಸಚಿನ್ ಚವ್ಹಾಣ, ಸಿದ್ದು ಚವ್ಹಾಣ ಹಾಗೂ ಉಮೇಶ ರಾಠೋಡ್​ನ ಹಿಡಿಯುವಲ್ಲಿ ಖಾಕಿ ಯಶಸ್ವಿಯಾಗಿದೆ. ಜೊತೆಗೆ ಬಂಧಿತರಿಂದ 2.70 ಲಕ್ಷ ರೂಪಾಯಿ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಬೈಕ್ ಮತ್ತು ಚಾಕೂವನ್ನು ಸಹ ವಶಪಡಿಸಿಕೊಂಡಿದ್ಧಾರೆ. ಸದ್ಯಕ್ಕೆ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶೋಕಿ ಜೀವನ ನಡೆಸಲು ಬಯಸಿದ್ದ ಈ 20ರ ಆಸುಪಾಸಿನ ಯುವಕರಿಗೆ ಬೇಗ ದುಡ್ಡು ಮಾಡಲು ಹೊಳೆದಿದ್ದೇ ಈ ಅಡ್ಡದಾರಿ. ದುಡ್ಡಿರೋನು ಮಾತ್ರ ಇಡೀ ಪ್ರಪಂಚನ ತನ್ನ ಅಡಿಯಾಳು ಮಾಡ್ಕೊಂಡು ಆಳೋದು. ಆಳಾಗಿ ಹಾಳಾಗತ್ಯಾ ಇಲ್ಲ ಆಳುಗಳಿಗೆಲ್ಲಾ ದೊರೆ ಆಗ್ತ್ಯಾ ಎಂಬ ಕನ್ನಡದ ಸಿಲಿಕಾನ್​ ಸಿಟಿಯ ಚಿತ್ರದ ಡೈಲಾಗ್​ನಂತೆ ತಾವೂ ಕೂಡ ಅರಸರಾಗಲು ಹೊರಟಿದ್ದರು. ಆದರೆ ಆಳಲು ಬಯಸಿದ ಯುವಕರು ಇಂದು ಬದುಕು ಹಾಳು ಮಾಡಿಕೊಂಡಿದ್ದಾರೆ. -ಅಶೋಕ ಯಡಳ್ಳಿ

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?