ಗನ್ ತೋರಿಸಿ ಪಂಚಾಯತ್ ಪಿಡಿಒಗೆ​ ಧಮ್ಕಿ; ಸದಸ್ಯನನ್ನು ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 19, 2023 | 4:39 PM

ಈ ಘಟನೆ ಆಗುತ್ತಿದ್ದಂತೆ ಗ್ರಾಮ ಪಂಚಾಯತಿ ಸದಸ್ಯ ಜಾಕೀರ್ ಮನಿಯಾರ್ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ಪಿಡಿಒ ರಾಠೋಡ್ ಅವರು ಕೇಸ್ ದಾಖಲಿಸಿದ್ದರು. ಈ ಹಿನ್ನಲೆ ಸಂಘಟಿತರಾದ ಎಲ್ಲಾ ಪಂಚಾಯತ್​ ಪಿಡಿಒಗಳು ಇಂದು ಜಿಲ್ಲಾ ಪಂಚಾಯತ್​ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಿಇಒಗೆ ಮನವಿ ಸಲ್ಲಿಸಿದರು.

ಗನ್ ತೋರಿಸಿ ಪಂಚಾಯತ್ ಪಿಡಿಒಗೆ​ ಧಮ್ಕಿ; ಸದಸ್ಯನನ್ನು ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ
ಗ್ರಾಮ ಪಂಚಾಯತಿ ಸದಸ್ಯನನ್ನ ವಜಾಗೊಳಿಸುವಂತೆ ಪಿಡಿಒಗಳ ಧರಣಿ
Follow us on

ವಿಜಯಪುರ, ಅ.19: ಗ್ರಾ.ಪಂಚಾಯತಿ ಪಿಡಿಒ(PDO)ಗೆ ಗನ್ ತೋರಿಸಿ ಪಂಚಾಯತ್​ ಸದಸ್ಯ ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿದ್ದ ಸದಸ್ಯನನ್ನು ವಜಾಗೊಳಿಸುವಂತೆ ಆಗ್ರಹಿಸಿ ವಿಜಯಪುರ (Vijayapur) ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪಿಡಿಒಗಳು ಧರಣಿ ನಡೆಸಿದ್ದಾರೆ. ಹೌದು, ನಿನ್ನೆ(ಅ.18) ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮ ಪಂಚಾಯತಿ ಪಿಡಿಒ ವಿಶ್ವನಾಥ ರಾಠೋಡ್​ಗೆ, ಸದಸ್ಯ ಜಾಕೀರ್ ಮನಿಯಾರ್ ಗನ್ ತೋರಿಸಿ ಬೆದರಿಕೆ ಹಾಕಲಾದ ಆರೋಪ ಕೇಳಿಬಂದಿತ್ತು. ಈ ಹಿನ್ನಲೆ ಇಂದು(ಅ.19) ಪ್ರತಿಭಟನೆಗೆ ಮುಂದಾಗಿದ್ದಾರೆ.

ಚಡಚಣ ಪೊಲೀಸ್ ಠಾಣೆಯಲ್ಲಿ ನಿನ್ನೆ ಕೇಸ್ ದಾಖಲಿಸಿದ್ದ ಪಿಡಿಒ ರಾಠೋಡ್

ಹೌದು, ಈ ಘಟನೆ ಆಗುತ್ತಿದ್ದಂತೆ ಗ್ರಾಮ ಪಂಚಾಯತಿ ಸದಸ್ಯ ಜಾಕೀರ್ ಮನಿಯಾರ್ ವಿರುದ್ಧ ಚಡಚಣ ಪೊಲೀಸ್ ಠಾಣೆಯಲ್ಲಿ ಪಿಡಿಒ ರಾಠೋಡ್ ಅವರು ಕೇಸ್ ದಾಖಲಿಸಿದ್ದರು. ಈ ಹಿನ್ನಲೆ ಸಂಘಟಿತರಾದ ಎಲ್ಲಾ ಪಂಚಾಯತ್​ ಪಿಡಿಒಗಳು ಇಂದು ಜಿಲ್ಲಾ ಪಂಚಾಯತ್​ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಿಇಒಗೆ ಮನವಿ ಸಲ್ಲಿಸಿದರು. ಜೊತೆಗೆ ಸದಸ್ಯ ಜಾಕೀರ್ ಮನಿಯಾರ್ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಪ್ರೇಮ ವಿವಾಹಕ್ಕೆ ಬ್ರೇಕ್ ಹಾಕಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾದ ಗ್ರಾಮ ಪಂಚಾಯತ್ ಸದಸ್ಯರು

ಹಣಕಾಸಿನ ವಿಚಾರದಲ್ಲಿ ಗಲಾಟೆ ಮಾಡಿ ಬೆದರಿಕೆ

ಇನ್ನು ಹಣಕಾಸಿನ ವಿಚಾರದಲ್ಲಿ ಗಲಾಟೆ ಹಿನ್ನಲೆ ದೇವರನಿಂಬರಗಿ ಗ್ರಾಮ ಪಂಚಾಯತಿ ಪಿಡಿಒ ಅಧಿಕಾರಿಗೆ ಸದಸ್ಯನೇ ಬೆದರಿಕೆ ಹಾಕಿದ್ದ. ಪರವಾನಿಗೆ ಹೊಂದಿದ ಪಿಸ್ತೂಲ್ ಸಹಿತ ಗ್ರಾಮಪಂಚಾಯತಿಗೆ ಆಗಮಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಜಾಕೀರ್ ಮನಿಯಾರ್, ಪಿಡಿಓಗೆ ಬೆದರಿಕೆ ಹಾಕಲಾಗಿತ್ತು. ಬಳಿಕ ಸದಸ್ಯ ಜಾಕೀರ್ ಮನಿಯಾರ್ ಬೆದರಿಕೆವೊಡ್ಡಿದ ವಿಡಿಯೋ ವೈರಲ್​ ಆಗಿತ್ತು. ಇದೀಗ ಆತನನ್ನು ಸದಸ್ಯತ್ವದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ