ಕಲಬುರಗಿ: ಪ್ರೇಮ ವಿವಾಹಕ್ಕೆ ಬ್ರೇಕ್ ಹಾಕಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾದ ಗ್ರಾಮ ಪಂಚಾಯತ್ ಸದಸ್ಯರು

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೋಂಗರಗಾಂವ್ ಗ್ರಾಮ ಪಂಚಾಯತ್ ಸಧಸ್ಯರು ಪ್ರೇಮ ವಿವಾಹಕ್ಕೆ ಬ್ರೇಕ್ ಹಾಕಬೇಕು. ಪ್ರೇಮಿಗಳು ಹೆತ್ತವರ ಒಪ್ಪಿಗೆ ಪಡೆದು ವಿವಾಹವಾಗಬೇಕು. ಈ ರೀತಿಯ ಕಾನೂನು ಕ್ರಮ ಸರ್ಕಾರ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕಲಬುರಗಿ: ಪ್ರೇಮ ವಿವಾಹಕ್ಕೆ ಬ್ರೇಕ್ ಹಾಕಲು ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾದ ಗ್ರಾಮ ಪಂಚಾಯತ್ ಸದಸ್ಯರು
ಪ್ರೇಮ ವಿವಾಹಕ್ಕೆ ಬ್ರೇಕ್​ ಹಾಕಲು ಪಂಚಾಯತ್​ ಸದಸ್ಯರ ನಿರ್ಧಾರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 14, 2023 | 3:54 PM

ಕಲಬುರಗಿ, ಅ.14: ಯುವಕರಿಗೆ 21 ವರ್ಷ, ಯುವತಿಗೆ 18 ವರ್ಷವಾದರೆ ನಮ್ಮ ದೇಶದಲ್ಲಿ ವಿವಾಹವಾಗಲು ಕಾನೂನಿನಲ್ಲಿ ಅವಕಾಶವಿದೆ. ವಯಸ್ಕರು, ತಮ್ಮ ಇಷ್ಟಕ್ಕೆ ಅನುಸಾರವಾಗಿ, ಜಾತಿ-ಧರ್ಮವನ್ನೆದೆ ಪ್ರೀತಿ ಪಾತ್ರರನ್ನು ವಿವಾಹವಾಗಬಹುದು. ಮಕ್ಕಳು ವಯಸ್ಕರಾಗಿದ್ದರೆ, ಅವರ ಮದುವೆಗೆ ಹೆತ್ತವರಿಗೂ ಕೂಡ ವಿರೋಧಿಸಲು ಆಗುವುದಿಲ್ಲ. ಆದರೆ, ಪ್ರೇಮ ವಿವಾಹ (Love Marriage) ಕ್ಕೆ ಬ್ರೇಕ್ ಹಾಕಬೇಕು, ಪ್ರೇಮಿಗಳು ಹೆತ್ತವರ ಒಪ್ಪಿಗೆ ಪಡೆದೆ ವಿವಾಹವಾಗಬೇಕು. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರು ಸೇರಿ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಂಡಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಆದ್ರೆ, ಇಂತಹದೊಂದು ನಿರ್ಧಾರ ಇದೀಗ ಚರ್ಚೆಗೆ ಕಾರಣವಾಗಿದೆ.

ಪ್ರೇಮ ವಿಹಾಹಕ್ಕೆ ಬ್ರೇಕ್ ಹಾಕಲು ಪಂಚಾಯತ್ ಸದಸ್ಯರ ಆಗ್ರಹ

ಹೌದು, ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೋಂಗರಗಾಂವ್ ಗ್ರಾಮ ಪಂಚಾಯತ್ ಸಧಸ್ಯರು ಪ್ರೇಮ ವಿವಾಹಕ್ಕೆ ಬ್ರೇಕ್ ಹಾಕಬೇಕು. ಪ್ರೇಮಿಗಳು ಹೆತ್ತವರ ಒಪ್ಪಿಗೆ ಪಡೆದು ವಿವಾಹವಾಗಬೇಕು. ಈ ರೀತಿಯ ಕಾನೂನು ಕ್ರಮ ಸರ್ಕಾರ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಅಕ್ಟೋಬರ್ 10 ರಂದು ಡೋಂಗರಗಾಂವ್ ಗ್ರಾಮ ಪಂಚಾಯತ್​ನ ಸಾಮಾನ್ಯ ಸಭೆ, ಪಂಚಾಯತ್ ಅಧ್ಯಕ್ಷ ಶಾಂತಕುಮಾರ್ ಮೂಲಗೆ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಿದಿದೆ. ವಿಶೇಷವಾಗಿ ಪ್ರೇಮ ವಿವಾಹಗಳ ಬಗ್ಗೆ ಚರ್ಚಿಸಲೆಂದೇ ಡೋಂಗರಗಾವ್ ಗ್ರಾಮ ಪಂಚಾಯತ್​ನ ಸಾಮಾನ್ಯ ಸಭೆ ಕರೆಯಲಾಗಿತ್ತು.

ಇದನ್ನೂ ಓದಿ:ಗುಜರಾತ್​​: ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯ: ಸಿಎಂ ಭೂಪೇಂದ್ರ ಪಟೇಲ್ ಸುಳಿವು

ಮನವಿ ಪತ್ರ ಸಲ್ಲಿಸಲು ಮುಂದಾದ ಪಂಚಾಯತಿ ಸದಸ್ಯರು

ಅಕ್ಟೋಬರ್ 10 ರಂದು ನಡೆದ ಸಭೆಯಲ್ಲಿ ಪ್ರೇಮ ವಿವಾಹಗಳ ಬಗ್ಗೆ ಸಧಸ್ಯರೆಲ್ಲರೂ ಚರ್ಚಿಸಿದ್ದು, ಈ ಬಗ್ಗೆ ಪಂಚಾಯತ್​ನಲ್ಲಿ ಠರಾವು ಪಾಸ್ ಮಾಡಿ, ಸರ್ಕಾರಕ್ಕೆ ಮನವಿ ಸಲ್ಲಿಸಲು ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಲು ಡೋಂಗರಗಾವ್ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಕುಮಾರ್ ಮತ್ತು ಇನ್ನುಳಿದ ಸದಸ್ಯರು ಮುಂದಾಗಿದ್ದಾರೆ.

ಇಂತಹದೊಂದು ನಿರ್ಧಾರಕ್ಕೆ ಕಾರಣವೇನು?

ಡೋಂಗರಗಾವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಡೋಂಗರಗಾವ್, ಕಾಳಮಂದರಗಿ ಸೇರಿದಂತೆ ನಾಲ್ಕು ತಾಂಡಾಗಳ ವ್ಯಾಪ್ತಿ ಹೊಂದಿದ್ದು, ಹದಿನೆಂಟು ಗ್ರಾಮ ಪಂಚಾಯತ್ ಸದಸ್ಯರು ಇದ್ದಾರೆ. ಆದರೆ, ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಹದಿನೈದು ಪ್ರೇಮ ವಿವಾಹಗಳು ನಡೆದಿವೆಯಂತೆ. ಅನೇಕರು ಹೆತ್ತವರ ವಿರೋಧದ ನಡುವೆ ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದಾರಂತೆ.

ಇದನ್ನೂ ಓದಿ:10 ವರ್ಷದ ಹಿಂದಿನ ಪ್ರೇಮ ವಿವಾಹದ ಸಿಟ್ಟು: ಮೊಹರಂ ಹಬ್ಬದ ವೇಳೆ ಎರಡು ಕುಟುಂಬಗಳ ನಡುವೆ ಗಲಾಟೆ, 8 ಜನರಿಗೆ ಗಾಯ

ಜೊತೆಗೆ ಅಪ್ರಾಪ್ತ ವಯಸ್ಸಿನ ಬಾಲಕ, ಬಾಲಕಿಯರು ಕೂಡ ಪ್ರೇಮ ವಿವಾಹ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಅಪ್ರಾಪ್ತರ ಪ್ರೇಮ ವಿವಾಹಕ್ಕೆ ಸಿಲುಕಿ, ಜೀವನದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಾಕಿ ಸಲುಹಿದ ತಂದೆ-ತಾಯಿಯ ಮಾತಿಗೂ ಡೋಂಟ್ ಕೇರ್ ಅಂತಿದ್ದಾರೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆಯಂತೆ. ಕುಟುಂಬ ಕುಟುಂಬಗಳ ನಡುವೆ, ಜಾತಿ-ಜಾತಿಗಳ ನಡುವೆ ಜಗಳಗಳು ಆಗುತ್ತಿವೆಯಂತೆ. ಹೀಗಾಗಿ ಸರ್ಕಾರ ಪ್ರೇಮ ವಿವಾಹಕ್ಕೆ ಬ್ರೇಕ್ ಹಾಕಬೇಕು. ಪ್ರೀತಿಸಿದವರು ಕೂಡ ಹೆತ್ತವರ ಒಪ್ಪಿಗೆ ಪಡೆದು ವಿವಾಹವಾಗಬೇಕು. ಇಂತಹದೊಂದು ನಿಯಮ ರೂಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಪೋಷಕರನ್ನು ಒಪ್ಪಿಸಿ ಮದುವೆಯಾಗಬೇಕು

ಇನ್ನು ಪ್ರೇಮ ವಿವಾಹಗಳಿಂದ ಹಳ್ಳಿಗಳಲ್ಲಿ ಸಾಕಷ್ಟು ತೊಂದರೆಗಳಾಗುತ್ತಿವೆ, ಜನರ ನಡುವೆ ದ್ವೇಷ ಹೆಚ್ಚಾಗುತ್ತಿದೆ. ಹೀಗಾಗಿ ಪ್ರೇಮ ವಿವಾಹಗಳಿಗೆ ಬ್ರೇಕ್ ಹಾಕಬೇಕು. ಹೆತ್ತವರನ್ನು ಒಪ್ಪಿಸಿ ಮದುವೆಯಾಗುವಂತೆ ನಿಯಮ ರೂಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಅಂತಿದ್ದಾರೆ ಎಂದು ಡೋಂಗರಗಾಂವ್ ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಕುಮಾರ್ ಮೂಲಗೆ ಹೇಳಿದರು.

ಇದನ್ನೂ ಓದಿ:ಭಾರತದಲ್ಲಿ ಪ್ರೇಮ ವಿವಾಹವಾದವರಲ್ಲೇ ಜಾಸ್ತಿ ವಿಚ್ಛೇದನ: ಸುಪ್ರೀಂಕೋರ್ಟ್

ಈ ನಿರ್ಧಾರ ಕುರಿತು ಸಾಮಾಜಿಕ ಹೋರಾಟಗಾರ ಸಾಯಿಬಣ್ಣಾ ಎನ್ನುವವರು ಮಾತನಾಡಿ ‘ ಡೋಂಗರಗಾಂವ್ ಗ್ರಾಮ ಪಂಚಾಯತ್ ಸದಸ್ಯರ ನಿರ್ಣಯ ಕಾನೂನು, ಸಂವಿಧಾನ ವಿರುದ್ದವಾಗಿದೆ. ಈ ರೀತಿಯ ನಿರ್ಧಾರ ಕೈಗೊಳ್ಳಲು ಅವಕಾಶವಿಲ್ಲ ಎಂದರು. ಇನ್ನು ವಯಸ್ಕರು ತಮ್ಮ ಇಷ್ಟಕ್ಕನುಸಾರವಾಗಿ ವಿವಾಹವಾಗಲು ನಮ್ಮ ಕಾನೂನಿನಲ್ಲಿ ಅವಕಾಶ ಇರುವುದರಿಂದ ಡೋಂಗರಗಾಂವ್ ಗ್ರಾಮ ಪಂಚಾಯತ್ ಸಧಸ್ಯರ ಆಗ್ರಹದ ಬಗ್ಗೆ ಇದೀಗ ಸರಿ-ತಪ್ಪುಗಳ ಚರ್ಚೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ