ಜೆಡಿಎಸ್ ಪಕ್ಷವನ್ನು ಕೆಣಕಿದಷ್ಟು ಕಾಂಗ್ರೆಸ್ ಮುಗಿಯುತ್ತೆ: ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

| Updated By: ganapathi bhat

Updated on: Oct 22, 2021 | 5:14 PM

HD Kumaraswamy: ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಂದಗಿಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ನಾನು ಸಿದ್ದರಾಮಯ್ಯ ಗೆ ಸವಾಲು ಹಾಕ್ತೇನೆ. ಮೂರು ಪಕ್ಷಗಳು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡಲು ಸಿದ್ದನಿದ್ದೇನೆ.

ಜೆಡಿಎಸ್ ಪಕ್ಷವನ್ನು ಕೆಣಕಿದಷ್ಟು ಕಾಂಗ್ರೆಸ್ ಮುಗಿಯುತ್ತೆ: ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ
ಎಚ್ ​ಡಿ ಕುಮಾರಸ್ವಾಮಿ
Follow us on

ವಿಜಯಪುರ: ಜೆಡಿಎಸ್ ಪಕ್ಷವನ್ನು ಕೆಣಕಿದಷ್ಟು ಕಾಂಗ್ರೆಸ್ ಮುಗಿಯುತ್ತೆ. ಈ ಹಿಂದೆ ಅವರಪ್ಪನಾಣೆ ನಾನು ಸಿಎಂ ಆಗಲ್ಲ ಅಂದ್ರು. ನಂತರ ಅವರೇ ನಮ್ಮ ಮನೆಗೆ ಬಂದ್ರು, ನಾನು ಸಿಎಂ ಆದೆ ಎಂದು ಮೋರಟಗಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮೋರಟಗಿಯಲ್ಲಿ ಇಂದು (ಅಕ್ಟೋಬರ್ 22) ಹೇಳಿಕೆ ನೀಡಿದ್ದಾರೆ.

2004ರ ಬೈಎಲೆಕ್ಷನ್​ನಲ್ಲಿ ಜಮೀರ್ ಅಹ್ಮದ್​ಗೆ ಟಿಕೆಟ್ ಕೊಡಲಾಗಿತ್ತು. ಆಗ ಸಿದ್ದರಾಮಯ್ಯ ಕೂಡ ನಮ್ಮ ಪಕ್ಷದಲ್ಲಿ ಉಪಮುಖ್ಯಮಂತ್ರಿ ಆಗಿದ್ದರು. ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಬೇಡ ಎನ್ನಬೇಕಿತ್ತು. ಆಗ ಹರಕೆ ಕುರಿ ಚುನಾವಣೆಗೆ ನಿಲ್ಲಿಸಿದ್ದಾರೆ ಎಂದಿದ್ದರು. ಅದೇ ಹರಕೆ ಕುರಿಯನ್ನು ಈಗ ಸಿದ್ದರಾಮಯ್ಯ ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ. ನನ್ನ ಬಗ್ಗೆ ವಾರದಿಂದ ಆರ್​ಎಸ್​ಎಸ್​ ನಾಯಕರು ಟೀಕೆ ಮಾಡಿದ್ದರು. ಆರ್​ಎಸ್​ಎಸ್​ ನಾಯಕರ ಟೀಕೆಗಳನ್ನು ಅರಗಿಸಿಕೊಂಡಿದ್ದೇನೆ, ಹೆದರಿಲ್ಲ. ಹಿರಿಯ ಲೇಖಕರ ವಿಚಾರಗಳನ್ನು ನಾನು ಹೇಳಿದ್ದೇನೆ. ಉಪಚುನಾವಣೆಗಾಗಿ ನಾನು ಆರ್​ಎಸ್​ಎಸ್​ ಟೀಕಿಸಿಲ್ಲ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಂದಗಿಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ನಾನು ಸಿದ್ದರಾಮಯ್ಯ ಗೆ ಸವಾಲು ಹಾಕ್ತೇನೆ. ಮೂರು ಪಕ್ಷಗಳು ಒಂದೇ ವೇದಿಕೆಯಲ್ಲಿ ಚರ್ಚೆ ಮಾಡಲು ಸಿದ್ದನಿದ್ದೇನೆ. ಯಾರ ಅವಧಿಯಲ್ಲಿ ಏನು ಕಾರ್ಯಕ್ರಮ ಮಾಡಿದ್ದೇವೆ ಅನ್ನೋದನ್ನು ಚರ್ಚೆ ಮಾಡಲು ಸಿದ್ದನಿದ್ದೇನೆ ಎಂದು ಸವಾಲು ಹಾಕಿದ್ದಾರೆ.

ದುಡಿಮೆ ಆಧಾರದ ಮೇಲೆ ಚುನಾವಣೆ ನಡೆಸಿ ಅಂತ ನನ್ನ ಮನವಿ ಇದೆ. ಎಲ್ಲರ ಮನೆಯು ದೋಸೆಯು ತೂತೆ. ನಿಮ್ಮ ಮನೆಯ ದೋಸೆಯಲ್ಲಿ ಕೂಡಾ ತೂತಿವೆ. ಹಾಗಾಗಿ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳಿದ್ದಾರೆ. ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರೋ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಅನೇಕರು ಜೆಡಿಎಸ್ ನಿಂದ ಹೋದ್ರು ಅಂತಾರೆ. ಇನ್ನು ಮುಂದೆ ಬೇರೆ ಕಡೆಯಿಂದ ಜೆಡಿಎಸ್​ಗೆ ಅನೇಕರು ಬರ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆರ್​ಎಸ್​ಎಸ್​ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಡಿ: ಬಿಜೆಪಿ ವಿರುದ್ಧ ಹರಿಹಾಯ್ದ ಎಚ್​ಡಿ ಕುಮಾರಸ್ವಾಮಿ

ಇದನ್ನೂ ಓದಿ: ಆರ್​ಎಸ್​ಎಸ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ, ಮುಂದೆ‌ ಹೆಚ್​ಡಿ ಕುಮಾರಸ್ವಾಮಿ ಪಶ್ಚಾತ್ತಾಪ ಪಡುತ್ತಾರೆ -ಬಿ.ಎಸ್. ಯಡಿಯೂರಪ್ಪ