ಆರ್​ಎಸ್​ಎಸ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ, ಮುಂದೆ‌ ಹೆಚ್​ಡಿ ಕುಮಾರಸ್ವಾಮಿ ಪಶ್ಚಾತ್ತಾಪ ಪಡುತ್ತಾರೆ -ಬಿ.ಎಸ್. ಯಡಿಯೂರಪ್ಪ

ಆರ್​ಎಸ್​ಎಸ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ. ಮುಂದೆ‌ ಹೆಚ್ಡಿಕೆ ಪಶ್ಚಾತ್ತಾಪ ಪಡುತ್ತಾರೆ. ರಾಷ್ಟ್ರಪತಿ, ಪ್ರಧಾನಿ, ಸಿಎಂಗಳು ಬಹುತೇಕರು ಆರ್​ಎಸ್​ಎಸ್ ಮೂಲದವರು. ದೇಶಕ್ಕಾಗಿ ಸರ್ವತ್ಯಾಗ ಮಾಡುವ ಗುಣವನ್ನ ಕಲಿಸಿದೆ ಆರ್​ಎಸ್​ಎಸ್. -ಕುಮಾರಸ್ವಾಮಿ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಕ್ರೋಶ

TV9kannada Web Team

| Edited By: Ayesha Banu

Oct 21, 2021 | 9:51 AM

ವಿಜಯಪುರ: ಆರ್​ಎಸ್​ಎಸ್​ ವಿರುದ್ಧ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಕ್ರೋಶ ಹೊರ ಹಾಕಿದ್ದಾರೆ. ಆರ್​ಎಸ್​ಎಸ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ. ಮುಂದೆ‌ ಹೆಚ್ಡಿಕೆ ಪಶ್ಚಾತ್ತಾಪ ಪಡುತ್ತಾರೆ. ರಾಷ್ಟ್ರಪತಿ, ಪ್ರಧಾನಿ, ಸಿಎಂಗಳು ಬಹುತೇಕರು ಆರ್​ಎಸ್​ಎಸ್ ಮೂಲದವರು. ದೇಶಕ್ಕಾಗಿ ಸರ್ವತ್ಯಾಗ ಮಾಡುವ ಗುಣವನ್ನ ಕಲಿಸಿದೆ ಆರ್​ಎಸ್​ಎಸ್. ಮುಸ್ಲೀಂ ಓಲೈಕೆಗೆ ಹೆಚ್ಡಿಕೆ ಹೀಗೆ ಮಾತನಾಡುತ್ತಿದ್ದಾರೆ. ಆರ್​ಎಸ್​ಎಸ್ ವಿರುದ್ಧ ಮಾತನಾಡಿದರೆ ಮುಸ್ಲೀಂ ಓಟು ಸಿಗುತ್ತವೆ ಅನ್ನೋ ಭ್ರಮೆಯಲ್ಲಿದ್ದಾರೆ ಹೆಚ್ಡಿಕೆ ಎಂದು ಬಿಎಸ್​ವೈ ಆಕ್ರೋಶ ಹೊರ ಹಾಕಿದ್ರು.

ಇನ್ನು ಇದೇ ವೇಳೆ ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು‌ ನಿಶ್ಚಿತ. ಮತದಾರರು ನಮ್ಮ ಜೊತೆಗಿದ್ದಾರೆ. ಮೋದಿ ಸಾಧನೆ, ನಾವಿದ್ದಾಗ ಕೊಟ್ಟ ಯೋಜನೆಗಳನ್ನ ಮತದಾರರಿಗೆ ತಿಳಿಸುತ್ತೇವೆ. ಪಕ್ಷಕ್ಕೆ ಜನರು ಬೆಂಬಲ ಕೊಡುತ್ತಾರೆ. ಸಿಂದಗಿಯ ಎರಡು ಸಮಾವೇಶ, ರ್ಯಾಲಿ ಕಂಡು ಜೆಡಿಎಸ್, ಕಾಂಗ್ರೆಸ್ ಗೆ ಸೋಲೋ ಮನವರಿಕೆಯಾಗಿದೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಲಿದೆ ಎಂದು ವಿಜಯಪುರ ನಗರದಲ್ಲಿ ಬಿಎಸ್ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow us on

Click on your DTH Provider to Add TV9 Kannada